ಬೆಂಗಳೂರು:   

      ಬೆಂಗಳೂರು ಮಹಾನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಠಾಣೆಯ 71 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

      ಕುಮಾರಸ್ವಾಮಿ ಲೇಔಟ್ ಠಾಣೆಯ 71 ಸಿಬ್ಬಂದಿಯನ್ನು ಏಕ ಕಾಲಕ್ಕೆ ವರ್ಗಾವಣೆ ಮಾಡಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ. ಠಾಣೆಯಲ್ಲಿ 78 ಸಿಬ್ಬಂದಿ ಇದ್ದಾರೆ. ಅವರಲ್ಲಿ 71 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.

       ಇತಿಹಾಸದಲ್ಲಿಯೇ ಒಂದೇ ಠಾಣೆಯ 71 ಸಿಬ್ಬಂದಿಯನ್ನು ಏಕ ಕಾಲಕ್ಕೆ ವರ್ಗಾವಣೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ. ಠಾಣೆಯ ಸಿಬ್ಬಂದಿ ನಡುವಿನ ಒಳ ಜಗಳ ತಪ್ಪಿಸುವ ಉದ್ದೇಶದಿಂದ ಈ ವರ್ಗಾವಣೆ ಮಾಡಲಾಗಿದೆ.

      ಇತ್ತೀಚೆಗೆ ಠಾಣೆಯ ಎ.ಎಸ್.ಐ. ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಸುದ್ದಿಯಾಗಿತ್ತು. ಈ ವಿಡಿಯೋವನ್ನು ಮತ್ತೊಂದು ಗುಂಪಿನವರು ತೆಗೆದು ಬಹಿರಂಗಪಡಿಸಿದ್ದರು. ಅಲ್ಲದೇ, ಠಾಣೆಯಲ್ಲಿನ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡಿಸುವ ಉದ್ದೇಶದಿಂದ ರೈಫಲ್ ಕಳವು ಮಾಡಲಾಗಿತ್ತು. ಸಿಬ್ಬಂದಿ ನಡುವೆ ಒಳ ಜಗಳದಿಂದ ಹಲವು ಬೆಳವಣಿಗೆ ನಡೆದಿದ್ದವು. ಈ ಎಲ್ಲಾ ಕಾರಣಗಳಿಂದ ಏಕ ಕಾಲಕ್ಕೆ 71 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

(Visited 563 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp