ತುಮಕೂರು:

      ಸಿದ್ಧಗಂಗೆಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರು 12ನೇ ಶತಮಾನದ ಬಸವಣ್ಣನವರ ಬಳಿಕ ದಾಸೋಹ ತತ್ವವನ್ನು ಜಗತ್ತಿಗೆ ಮರು ಪರಿಚಯಿಸಿದ ಮಹಾನ್ ಸಂತ ಎಂದು ಚಿಕ್ಕಪೇಟೆ ಹಿರೇಮಠಾದ್ಯಕ್ಷ ಡಾ.ಶ್ರೀ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿದರು.

      ಇಲ್ಲಿನ ಪಾಂಡುರಂಗನಗರದ ಗಾಯತ್ರಿಘಿ, ವಿಶ್ವಕರ್ಮ, ವೀರಬ್ರಹ್ಮೇಂದ್ರಸ್ವಾಮಿ ದೇವಾಲಯದಲ್ಲಿ ಚಿನ್ನ ಬೆಳ್ಳಿ ಕೆಲಸಗಾರರ ಸಂಘದಿಂದ ಏರ್ಪಡಿಸಿದ್ದ ಲಿಂಗೈಕ್ಯ ಡಾ.ಶ್ರೀಘಿ. ಶಿವಕುಮಾರಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಶ್ರೀಗಳು, ದಾನಕ್ಕಿಂತಲೂ ದಾಸೋಹ ಶ್ರೇಷ್ಠ. ದಾಸೋಹ ಪರಸ್ಪರ ಹಂಚುವಿಕೆ, ಸಮಾನತೆಯ ಸೂತ್ರವನ್ನು ಒಳಗೊಂಡಿದೆ ಎಂದರು.

      ಸಿದ್ಧಗಂಗಾ ಮಠವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವಲ್ಲಿ ಶ್ರೀಗಳ ಪಾತ್ರ ಹಿರಿದು. ಅವರ ಕಾಲಘಟ್ಟದಲ್ಲಿ ಬದುಕಿದ್ದೆವು ಎಂಬುದೇ ನಮಗೆಲ್ಲ ಗರಿಮೆ ಮೂಡಿಸುವ ಸಂಗತಿ. ಅವರ ಆದರ್ಶ, ಹಾಕಿಕೊಟ್ಟ ಮಾರ್ಗಗಳನ್ನು ಪಾಲಿಸುವುದೇ ನಾವು ಅವರಿಗೆ ತೋರಿಸುವ ಗೌರವ ಎಂದರು.

      ನಿಟ್ಟರಹಳಿ ಆದಿಲಕ್ಷ್ಮಿ ಮಹಾಸಂಸ್ಥಾನ ಪೀಠಾದ್ಯಕ್ಷ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಸಾನಿದ್ಯ ವಹಿಸಿ ಆಶೀರ್ವಚನ ನೀಡಿ ವಿಶ್ವಕರ್ಮ ಸಮುದಾಯ ಮೊದಲಿನಿಂದ ಸಿದ್ಧಗಂಗಾ ಶ್ರೀಗಳು, ಮಠದ ಬಗ್ಗೆ ಗೌರವ ಭಾವನೆ ಹೊಂದಿದ್ದರು ಎಂಬುದಕ್ಕೆ ಈ ಪುಣ್ಯಸ್ಮರಣೆ ಕಾರ್ಯಕ್ರಮವೇ ನಿದರ್ಶನವೆಂದರು.

 

(Visited 11 times, 1 visits today)