ತುಮಕೂರು:
ಎಲ್ಲಿ ಜ್ಞಾನ ಇರುತ್ತದೆಯೇ, ಆ ಜ್ಞಾನವನ್ನು ಹುಡುಕಿಕೊಂಡು ನಾವು ಜ್ಞಾನ ಇರುವಲ್ಲಿಗೆ ಹೋಗಬೇಕು. ಆಗ ಜ್ಞಾನ ಎಲ್ಲರಿಗೂ ಸಿಗುತ್ತದೆ. ಇಷ್ಟು ವರ್ಷ ನಮ್ಮ ನಡುವೆ ನೂರಾಹನ್ನೊಂದು ವರ್ಷ ಬದುಕಿದ್ದ ನಡೆದಾಡುವ ದೇವರು ಎನ್ನಿಸಿಕೊಂಡಿದ್ದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರು ನಡೆದ ದಾರಿಯಲ್ಲಿ ನಡೆದರೆ ಸಾಕು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ತುಮಕೂರಿನ ಹಿರೇಮಠ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಸಓಮೇಶ್ವರಪುರಂ ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗದ 500ನೇ ಸಾಪ್ತಾಹಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನಬುತ್ತಿ ಸತ್ಸಂಗದ ಬಗ್ಗೆ ನನಗೆ ತುಂಬಾ ಗೌರವ ಇದೆ. ಈ ಸಂಘದ ಪಿ.ಶಾಂತಿಲಾಲ್ ಮತ್ತು ಟಿ.ಮುರಳೀಕೃಷ್ಣಪ್ಪ ಇಬ್ಬರು ಎರಡು ಕಣ್ಣುಗಳಿದ್ದಂತೆ. ಈ ಎರಡು ಕಣ್ಣುಗಳು ಅತ್ಯಂತ ಶ್ರೇಷ್ಠ ಎಂದು ಹೇಳಿದರು.
ಅಮ್ಮ ಮಕ್ಕಳಿಗೆ ಕೈತುತ್ತು ಕೊಡುತ್ತಾರೆ. ಅದೇ ಅಮ್ಮ ಮಕ್ಕಳು ಹಸಿದುಕೊಂಡಿರಬಾರದೆಂದು ಬುತ್ತಿ ಕೊಡುತ್ತಾಳೆ. ಇವತ್ತು ಡಾಕ್ಟರೇಟ್ ಪದವಿ ಮತ್ತು ಪ್ರಶ್ತಿಗಳನ್ನು ಹಣಕೊಟ್ಟುಕೊಂಡುಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದರೆ ಆ ಪ್ರಶಸ್ತಿಯ ಗೌರವ ಹೆಚ್ಚುತ್ತಿತ್ತು. ಆ ಪ್ರಶಸ್ತಿಯಿಂದ ಸ್ವಾಮೀಜಿಗೆ ಆಗಬೇಕಾದ್ದು ಏನೂ ಇಲ್ಲ. ಭಕ್ತರು ಕೊಟ್ಟ ಪ್ರೀತಿಯ ಪ್ರಶಸ್ತಿಯೆ ಶಾಶ್ವತವಾಗಿ ಉಳಿಯುತ್ತದೆ ಎಂದರು. ಸ್ವಾಮೀಜಿ ಅವರ ಪರಿಚಯವನ್ನು ಆಂಜನಪ್ಪ ಮಾಡಿದರು.
ಜ್ಞಾನಬುತ್ತಿಯ ಸಂಸ್ಥಾಪಕ ಪಿ.ಶಾಂತಿಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ನನಗೆ ಇಂದು ತುಂಬ ಸಂತೋಷವಾಗುತ್ತಿದೆ. ಕಾರಣ ಜ್ಞಾನಬುತ್ತಿಯನ್ನು ಪ್ರಾರಂಭ ಮಾಡಿ ಹತ್ತು ವರ್ಷಗಳು ಮುಗಿದಿವೆ. ಈ ಕಾರ್ಯಕ್ರಮಕ್ಕೆ ನನ್ನ ಪ್ರಾಥಮಿಕ ಶಾಲೆಯ ಗೆಳೆಯರು ಮತ್ತು ನನ್ನ ಪತ್ನಿ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿರುವ ಜ್ಞಾನಾರ್ಥಿಗಳು ಎಲ್ಲಕ್ಕಿಂತ ಮುಖ್ಯವಾಗಿ ಹಿರೇಮಠದ ಸ್ವಾಮೀಜಿ ಅವರು ಬಂದಿರುವುದು ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಪಿ.ಶಾಂತಿಲಾಲ್ ಅವರನ್ನು ಬೆಂಗಳೂರಿನಿಂದ ಬಂದಿದ್ದ ಶ್ರೀನಿವಾಸ ಅಯ್ಯಂಗಾರ್, ಕೃಷ್ಣಸ್ವಾಮಿ, ಗುರುದತ್ ಪ್ರಕಾಶ್ ಬಾಬು ಅವರುಗಳು ಶಾಂತಿಲಾಲ್ ಮತ್ತು ಅವರ ಪತ್ನಿ ಮೋಹಿನಿಬಾಯಿ ಅವರನ್ನು ಸನ್ಮಾನಿಲಾಯಿತು. ಮುರಳಿಕೃಷ್ಣಪ್ಪನವರು ಶಾಂತಿಲ್ ಬಗ್ಗೆ ಬರೆದ ಕವನವನ್ನು ವಾಚಿಸಿದರು.
ವಿದ್ಯಾವಾಹಿನಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕೆ.ಬಿ.ಜಯಣ್ಣ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಕೆ.ಬಿ.ಜಯಣ್ಣ ಅವರನ್ನು ಪದ್ಮಪ್ರಸಾದ್ ಪರಿಚಯಿಸಿದರೆ ಮುರಳೀಧರ ಹಾಲಪ್ಪ ಅವರನ್ನು ಮುಸ್ತಾಕ್ ಅಹಮದ್ ಪರಿಚಯಿಸಿದರು.
ಬಳಿಕ ಮಾತನಾಡಿದ ಕೆ.ಬಿ.ಜಯಣ್ಣ ನಾನು ವಿದ್ಯಾವಾಹಿನಿ ಸಂಸ್ಥೆಯನ್ನು ಕಷ್ಟಪಟ್ಟು ಕಟ್ಟಿ ಬೆಳೆಸಿದ್ದೇನೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದರಿಂದ ಅನುಕುಲವಾಗಿದೆ. ಜ್ಞಾನಬುತ್ತಿ ಸತ್ಸಂಗಕ್ಕೆ ಕಾರ್ಯಕ್ರಮ ಮಾಡಲು ನಮ್ಮ ಸಂಸ್ಥೆ ಸದಾ ಸಿದ್ದ ಎಂದರು.
ಮುರುಳೀಧರ ಹಾಲಪ್ಪ ಮಾತನಾಡಿ ಇಂದಿನ ಯುವಕರಿಎ ವಿವೇಕಾನಂದರ ನುಡಿಮುತ್ತುಗಳು ಪ್ರತಿಯೊಬ್ಬರಿಗೆ ದಾರಿ ದೀಪವಾಗಿದೆ. ಅದೇ ರೀತಿಯಲ್ಲಿ ಜ್ಞಾನಬುತ್ತಿ ಸತ್ಸಂಗದಿಂದ ಒಳ್ಳೆಯ ದಾರಿಯನ್ನು ಕಂಡುಕೊಳ್ಳಬಹುದು. ಜ್ಞಾನಬುತ್ತಿ ಸತ್ಸಂಗಕ್ಕೆ ಒಂದು ನಿವೇಶನದ ಅಗತ್ಯವಿದೆ. ಅದನ್ನು ಸರ್ಕಾರದ ವತಿಯಿಂದ ಕೊಡಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರುಗಳ ಮತ್ತು ಕಾರ್ಯದರ್ಶಿಗಳ ಪದವಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಜ್ಞಾನಬುತ್ತಿ ಸತ್ಸಂಗ ಕೇಂದ್ರಕ್ಕೆ ಅಧ್ಯಕ್ಷರಾಗಿ ಎಂ.ಜಿ.ಸಿದ್ದರಾಮಯ್ಯ, ಕಾರ್ಯದರ್ಶಿಯಾಗಿ ರವೀಂದ್ರನಾಥ ಠ್ಯಾಗೋರ್, ಆದರ್ಶ ನಗರ ಶಾಖೆಗೆ ಅಧ್ಯಕ್ಷರಾಗಿ ಕೆ.ಭಕ್ತಪ್ರಸಾದ್, ಕಾರ್ಯದರ್ಶಿಯಾಗಿ ಸಿದ್ದರಾಮಯ್ಯ, ಬೆಟ್ಟದ ಶಾಖೆಯ ಅಧ್ಯಕ್ಷರಾಗಿ ಗಜೇಂದ್ರಚಾರ್, ಕಾರ್ಯದರ್ಶಿಯಾಗಿ ವೇಣುಗೋಪಾಲ್ ಅವರು ಪದವಿ ಸ್ವೀಕರಿಸಿದರು. ಬಳಿಕ ಎಂ.ಜಿ. ಸಿದ್ದರಾಮಯ್ಯ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಸಿ.ಲಲಿತಾ ಅತಿಥಿಗಳನ್ನು ಸ್ವಾಗತಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಟಿ.ಮುರಳೀಕೃಷ್ಣಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಆರ್.ಎಲ್.ರಮೇಶ್‍ಬಾಬು ಮತ್ತು ಬಿ.ಆರ್.ನಾಗರಾಜಶೆಟ್ಟಿ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮೊದಲು ಗ.ಸಿ.ಶ್ರೀನಿವಾಸಮೂರ್ತಿ ಮತ್ತು ತಂಡದಿಂದ ಗಮಕ ಕಾರ್ಯಕ್ರಮ ನಡೆಯಿತು.
ಬಿಂಬ ಮಹೇಶ್ ಅವರಿಂದ ಜ್ಞಾನಬುತ್ತಿ ಕಾರ್ಯಕ್ರಮದ ಪಕ್ಷಿನೋಟ ತೋರಿಸಲಾಯಿತು. ವೇದಿಕೆಯಲ್ಲಿ ಎನ್.ನಾಗಪ್ಪ, ರಾಜ್‍ಭಾನ್, ಸಿರಿವರ ಶಿವರಾಮಯ್ಯ, ಸುಬ್ರಹ್ಮಣ್ಯ, ಮಿಮಿಕ್ರಿ ಈಶ್ವರಯ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸುಮನಾದಾಸರಾಜ್ ಪ್ರಾರ್ಥಿಸಿದರು. ಶಿವಕುಮಾರ್ ನಿರೂಪಿಸಿದರು.