ತುರುವೇಕೆರೆ:
ಮನುಷ್ಯನ ತನ್ನ ಜೀವನದ ಆದರ್ಶದ ಬದುಕು ಸಮಾಜದಲ್ಲಿ ಉತ್ತಂಗಕ್ಕೆ ಕರೆದೊಯ್ಯಲಿದೆ ಎಂದು ಮೈಸೂರು ಮಹಾರಾಜ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ತಾಲೂಕಿನ ಆನಡಗು ಗ್ರಾಮದಲ್ಲಿ ಚಿತ್ರನಟ ಜಗ್ಗೇಶ್ ಕುಟುಂಬ ನಿರ್ಮಿಸಿರುವ ಕಾಲಬೈರವೇಶ್ವರ ನೂತನ ದೇವಾಲಯ ಲೋಕಾರ್ಪಣೆ, ಸ್ಥಿರಮೂರ್ತಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಿತ್ರ ನಟ ಜಗ್ಗೇಶ್ ತನ್ನ ಹುಟ್ಟೂರಿನಲ್ಲಿ ದೇವಸ್ಥಾನ ನಿರ್ಮಿಸಿ ಅದರ್ಶವನ್ನು ಮುಂದುವರೆದಿದ್ದಾರೆ. ಪ್ರತಿಯೊಬ್ಬರು ಸಮಾಜಕ್ಕೆ ತನ್ನ ಕೈಲಾದ ಕೊಡುಗೆ ನೀಡಬೇಕಾಗಿದೆ. ಉತ್ತರ ಕರ್ನಾಟಕದಲ್ಲಿ ಕಾರ್ಯಕ್ರಮ ಒತ್ತಡ ಇದ್ದರು ಸಹ ದೈವ ಕೃಪೆಯಿಂದ ಕಾರ್ಯಕ್ರಮವನ್ನು ರದ್ದು ಮಾಡಿ ಆಗಮಿಸಿದ್ದೇನೆ. ಮೈಸೂರು ಸಂಸ್ಥಾನ ಜೊತೆ ಸಾರ್ವಜನಿಕರ ಸಂಬಂದ ಈಗೇ ಮುಂದುವರೆಯಬೇಕು ಎಂದು ತಿಳಿಸಿದರು
ಚಿತ್ರ ನಟ ಜಗ್ಗೇಶ್ ಮಾತನಾಡಿ ನಮ್ಮ ತಾತ 1930ರಲ್ಲಿಯೇ ನಮ್ಮ ಗ್ರಾಮಕ್ಕೆ ಒಂದು ಬಾವಿ, ಶಾಲೆಯನ್ನು ಕಟ್ಟಿಸಿದ್ದರು. ಮಲೇಶಿಯಗೇ ಹೋಗಬೇಕಿದ್ದ ಕಾಲಬೈರವ ಮೂರ್ತಿ ನನಗೆ ಸಿಕ್ಕಿ ಇಂದು ನಮ್ಮ ಗ್ರಾಮದಲ್ಲಿ ಪ್ರತಿಷ್ಟಾಪನೆಯಾಗಿದೆ. ದೇವರ ಕೃಪೆ ಮೈಸೂರು ಮಹಾರಾಜರು ನಮ್ಮ ಗ್ರಾಮಕ್ಕೆ ಆಗಮಿಸಿದ್ದಾರೆ ಗ್ರಾಮಕ್ಕೆ ಒಳ್ಳಯದಾಗಲಿ ಮುಂದಿನ ದಿನಗಳಲ್ಲಿ ಆಂಜನೇಯ ದೇವಸ್ಥಾನವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮಹಾರಾಜರಿಂದ ಉಂಗರ ಪಡೆದಿದ್ದೆ. ಶ್ರೀಕಂಠನರಸಿಂಹರಾಜ ಓಡೆಯರನ್ನು ಹಿರಿಯ ನಟರಾದ ಅಂಬರೀಶ್ ಜೊತೆ ಬೇಟಿಯಾದ ಸಂದರ್ಬದಲ್ಲಿ ಮಹಾರಾಜರಿಂದ ಏನನ್ನಾದರು ಪಡೆಯಬೇಕೆಂದು ಕೇಳಿಕೊಂಡು ಒಂದು ನೀಲಾ ಉಂಗುರವನ್ನು ಪಡೆದಿದ್ದನು ಎಂದು ಬೆರಳಲ್ಲಿ ದರಿಸಿದ್ದ ಉಂಗುರ ತೋರಿಸಿ ತಿಳಿಸಿದರು.
ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಮಾತನಾಡಿ ಭಾರತ ಸಂಸೃತಿ ಹೊಂದಿದ ದೇಶ. ಪುರಾಣ, ಇತಿಹಾಸದಲ್ಲಿಯೂ ಭಕ್ತಿ ಶ್ರದ್ದೆಯಿಂದ ಬಗವಂತನನ್ನು ಕಾಣುತ್ತಿದ್ದೇವೆ. ಆದಿಚಂಚನಗಿರಿ ಕ್ಷೇತ್ರದ ಆದಿ ದೇವತೆ ಕಾಲ ಬೈರವವಾಗಿದೆ. ಕಾಶಿಯಲ್ಲಿ ಕಾಲ ಬೈರವ ದರ್ಶನ ಮಾಡಿದ ನಂತರ ಕಾಶಿ ವಿಶ್ವನಾಥನ ದರ್ಶನ ಮಾಡುತ್ತಾರೆ. 64 ಬೈರವಗಳಲ್ಲಿ ಕಾಲ ಬೈರವರಲ್ಲಿ ವಿಶಿಷ್ಟ ಶಕ್ತಿ ಇರುವ ದೇವರು ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜರು, ಶಿಲ್ಪಿಗಳಾದ ಪಡಿಯಪ್ಪ, ಆನಂದ್ ಗ್ರಾಮದ ಹಿರಿಯರಾದ ಕೆಂಪೆಗೌಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕು ಮುನ್ನ ಮೈಸೂರು ಮಹಾರಾಜರು ಹಾಗೂ ಪ್ರಸನ್ನನಾಥಸ್ವಾಮೀಜಿಯನ್ನು ನೂರಾರು ಮಹಿಳೆಯರು ಪೂರ್ಣ ಕುಂಬಾ, ಹಲವು ಜಾನಪದ ಕಲಾ ಮೇಳಗಳೊಂದಿಗೆ ಗ್ರಾಮದ ದ್ವಾರ ಬಾಗಿಲಿನಿಂದ ಮೆರವಣಿಗೆಯ ಮೂಲಕ ದೇವಸ್ಥಾನದ ಬಳಿ ಕರತರಲಾಯಿತು.
ಈ ಸಂದರ್ಬದಲ್ಲಿ ಚಿತ್ರ ನಟ ಕೋಮಲ್, ಜಗ್ಗೇಶ್ ಪತ್ನಿ ಪರಿಮಳ ಮಕ್ಕಳು ಸೇರಿದಂತೆ ಗ್ರಾಮಸ್ಥರು ಇದ್ದರು.