ತುಮಕೂರು:

      ಗ್ರಾಮಂತರ ಕ್ಷೇತ್ರದಲ್ಲಿರುವ ವಿದ್ಯಾವಂತ ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾರ್ಚ್ ತಿಂಗಳಲ್ಲಿ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೋಧ್ಯಮಿಗಳ ಕೆ ಐ ಎ ಡಿ ಬಿ ಅಧಿಕಾರಿಗಳು, ಡಿ ಐ ಸಿ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒ ಒಳಗೊಂಡಂತೆ ಬೃಹತ್ ಸಭೆ ಕರೆದು ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವ ಸಂಬಂಧ ಚರ್ಚಿಸುವುದಾಗಿ ಶಾಸಕ ಡಿ. ಸಿ. ಗೌರೀಶಂಕರ್ ಭರವಸೆ ನೀಡಿದರು.

      ಅವರು ಗೂಳೂರು ಜಿಲ್ಲಾ ಪಂಚಾಯ್ತಿ ವಾಪ್ತಿಯಯಲ್ಲಾಪುರ ಗ್ರಾಮದಲ್ಲಿ ಶ್ರೀ ಆದಿಶಕ್ತಿ ದುರ್ಗಾದೇವಿ ನೂತನ ಆಲಯ ಜೀರ್ಣೋದ್ದಾರ ಮತ್ತು ದುರ್ಗಾದೇವಿಯ ನೂತನ ಸ್ತಿರಬಿಂಭಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

      ಗ್ರಾಮಂತರ ಕ್ಷೇತ್ರದ ವಿದ್ಯಾವಂತ ಯುವಕರು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ವಿವಿಧೆಡೆ ಫಲಾಯನ ಮಾಡುತ್ತಿದ್ದಾರೆ.ಇನ್ನು ಕೆಲ ಯುವಕರು ತಮ್ಮ ವಿಧ್ಯಾಭ್ಯಾಸಕ್ಕೆ ತಕ್ಕ ಉದೋಗ ಲಭಿಸದೆ ನಿರುದ್ಯೋಗಿಗಳಾಗಿದ್ದಾರೆ ಇದನ್ನು ತಪ್ಪಿಸಲು ವಸಂತ ನರಸಾಪುರದಲ್ಲಿ ಕೈಗಾರಿಕೋಧ್ಯಮಿಗಳು ಹಾಗು ಅಧಿಕಾರಿಗಳ ಬೃಹತ್ ಸಭೆ ಮಾರ್ಚನಲ್ಲಿ ಕರೆದಿದ್ದು ಅಂದು ನಡೆಯುವ ಸಭೆಗೆ ಗ್ರಾಮಾಂತರ ಕ್ಷೇತ್ರದ ನಿರುದ್ಯೋಗಿಗಳು ತಮ್ಮ ಶೈಕ್ಷಣಿಕ ದಾಖಲೆ ಸಮೇತ ಹಾಜರಾದರೆ ಅಧಿಕಾರಿಗಳ ಜೊತೆ ಚರ್ಚಿಸಿ ಉದ್ಯೋಗವಕಾಶ ಪಡೆಯಬಹುದು ಎಂದರು.

      ಯಲ್ಲಾಪುರ ಗ್ರಾಮದ ಶ್ರೀ ಆದಿಶಕ್ತಿ ದುರ್ಗಾದೇವಿ ನೂತನ ದೇವಾಲಯಕ್ಕೆ ಗೋಪುರ ನಿರ್ಮಿಸಿಕೊಡುವಂತೆ ಗ್ರಾಮಸ್ತರು ಮನವಿ ಮಾಡಿಕೊಂಡಿದ್ದರಿಂದ ಗೋಪುರವನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರಲ್ಲದೆ ,ಇಡೀ ದೇಶದಲ್ಲಿ ನುಡಿದಂತೆ ನಡೆಯುವ ರಾಜಕಾರಣಿಗಳಿದ್ದರೆ ಅದು ದೇವೇಗೌಡರು ಹಾಗು ಕುಮಾರಸ್ವಾಮಿ ಮಾತ್ರ, ಎಲ್ಲಾದರೂ ರೈತರು ಆತ್ಮಹತ್ಯೆ ಮಾಡಿಕೊಂಡ ಸುದ್ದಿತಿಳಿದರೆ ಆ ಸ್ತಳಕ್ಕೆ ಕುಮಾರಸ್ವಾಮಿ ಹಾಗು ದೇವೇಗೌಡರು ಭೇಟಿ ನೀಡಿ ಸಾಂತ್ವಾನ ಹೇಳುತ್ತಾರೆ .ಇಲ್ಲಿಯವರೆಗೆ ಯಾವೊಬ್ಬ ಮುಖ್ಯಮಂತ್ರಿ ಮಂಡಿಸದಂತ ರೈತರ ಪರವಾದ ಬಜೆಟ್ ಮಂಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾದರಿಯಾಗಿದ್ದಾರೆ ಎಂದರು.

      ಗ್ರಾಮಾಂತರ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ 700 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ,ಈಗಾಗಲೇ 120 ಕೋಟಿಯಷ್ಟು ಅನುದಾನ ಸರ್ಕಾರ ಬಿಡುಗಡೆಗೊಳಿಸಿದ್ದು ಅಭಿವೃದ್ದಿ ಕಾರ್ಯಗಳು ಚಾಲ್ತಿಯಲ್ಲಿವೆ,ಕೋಡಿಮುದ್ದನಹಳ್ಳಿ ಬಳಿ ಮ1250ಕೋಟಿ ವೆಚ್ಚದಲ್ಲಿ 220 ಕೆ ವಿ ಪವರ್ ಸ್ಟೇಶನ್ ಮಂಜೂರಾಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಶೀಘ್ರವಾಗಿ ಶಂಕುಸ್ತಾಪನೆ ಮಾಡಲಿದ್ದಾರೆ ,ಇದರಿಂದ ಹೆಬ್ಬೂರು ಭಾಗದಲ್ಲಿ ವಿದ್ಯುತ್ ಅಭಾವ ನೀಗಲಿದ್ದು 24 ಗಂಟೆಗಳ ಕಾಲ ರೈತರಿಗೆ ವಿದ್ಯುತ್ ದೊರೆಯಲಿದೆ ,ಈ ಸ್ಟೇಶನ್ ಗೆ ದೇವೇಗೌಡರ ಹೆಸರಿಡುವುದಾಗಿ ತಿಳಿಸಿದರು.

      ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ಶಾಸಕರು ಹಾರೋನಹಳ್ಳಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ತಾನಕ್ಕೆ 2 ಲಕ್ಷ,ಸಾಸಲು ಗ್ರಾಮದ ದಲಿತ ಕಾಲೋನಿಯಲ್ಲಿರುವ ಮಹೇಶ್ವರಮ್ಮ ದೇವಾಲಯ ನಿರ್ಮಾಣಕ್ಕೆ 4 ಲಕ್ಷ ವೆಚ್ಚವಾಗುತ್ತದೆ ಎಂದು ಗ್ರಾಮಸ್ತರು ತಿಳಿಸಿದಾಗೀ ದೇವಸ್ತಾನ ನಿರ್ಮಾಣದ ಪೂರಾ ಹಣ ನೀಡುವುದಾಗಿ ಶಾಸಕ ಡಿ ಸಿ ಗೌರೀಶಂಕರ್ ತಿಳಿಸಿದರು

      ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಸ್ವಾಮಿ ದೇವಾಲಯದ ಅರ್ಚಕರಾದ ಪಾಪಣ್ಣ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಲನೂರು ಅನಂತ ಕುಮಾರ್,ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಗೂಳೂರು ಜೆಡಿಎಸ್ ಮುಖಂಡ ಕೃಷ್ಣೇಗೌಡ,ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯ್ ಕುಮಾರ್ ,ತಾಲ್ಲೂಕು ಪಂಚಾಯ್ತಿ ಸದಸ್ಯೆ ರೇಣುಕಮ್ಮ ,ಮಸ್ಕಲ್ ಮೋಹನ್,ಗೌರೀಶಂಕರ್ ಅಭಿಮಾನಿ ಬಳಗದ ಅಧ್ಯಕ್ಷ ಪುಟ್ಟರಾಜು ಹಾಗು ಅಪಾರ ಜೆಡಿಎಸ್ ಮುಖಂಡರು ಉಪಸ್ತಿತರಿದ್ದರು.

(Visited 43 times, 1 visits today)