ತುಮಕೂರು:

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕೋನ ವಂಶಿ ಕೃಷ್ಣ ರವರು ತುಮಕೂರು ನಗರವ್ಯಾಪ್ತಿಯಲ್ಲಿ ಬರುವ ಎಲ್ಲಾ ಠಾಣೆಗಳಿಗೆ 13-2-2019 ರ ತಡ ರಾತ್ರಿ ದಿಢೀರ್ ಬೇಟಿ ನೀಡಿ, ಅಲ್ಲಿಯ ಪರಿಸ್ಥಿತಿ ಕಂಡು ದಂಗಾಗಿ ಹೋಗಿದ್ದಾರೆ.

      ಹೌದು ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಪೊಲೀಸ್ ಠಾಣೆಗೆ ಬೀಗ ಜಡಿದು ಅಲ್ಲಿಯ ಸಿಬ್ಬಂದಿ ಮಲಗಿಬಿಟ್ಟಿದ್ದರು ಇದನ್ನು ಗಮನಿಸಿದ ಮಾನ್ಯ ಎಸ್ಪಿ ಸಾಹೇಬರಿಗೆ ಮಾತುಗಳು ಬಾರದಾಗಿದ್ದವು.
ಇನ್ನು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಬಾಗಿಲು ತೆರೆದು ಅಲ್ಲಿಯ ಸಿಬ್ಬಂದಿ ಗೊರಕೆ ಹೊಡೆಯುತ್ತಿದ್ದರು. ಠಾಣೆಯ ಒಳಗೆ ಆಗಮಿಸಿರುವುದು ಎಸ್ಪಿ ಸಾಹೇಬರೆಂಬ ಕನಿಷ್ಟ ಪ್ರಜ್ಞೆ ಅಲ್ಲಿ ಕರ್ತವ್ಯ ದಲ್ಲಿದ್ದ ಸಿಬ್ಬಂಧಿಗಳಿಗಿರಲಿಲ್ಲ.
ಪೊಲೀಸ್ ಕಂಟ್ರೋಲ್ ರೂಮ್ ಗೆ ಕಾಲ್ ಕೊಟ್ಟರೆ ಅದನ್ನು ಸ್ವೀಕರಿಸುವ ಸೌಜನ್ಯ ಅಲ್ಲಿಯ ಸಿಬ್ಬಂದಿಗಿರಲಿಲ್ಲ ಅವರೂ ಸಹ ಮಲಗಿಬಿಟ್ಟಿದ್ದರು.ಜಿಲ್ಲಾ ಪೊಲೀಸ್  ನಿಯಂತ್ರಣ ಕೊಠಡಿಯ ಸಿಬ್ಬಂದಿ ಮೈಮರೆತು ನಿದ್ದೆಯಲ್ಲಿದ್ದಾರೆಂದರೆ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಆ ದೇವರೇ ಕಾಪಾಡಬೇಕು.

      ಜಿಲ್ಲೆಯಲ್ಲಿರುವ ಒಂದು ಮಹಿಳಾ ಠಾಣೆಯಲ್ಲಿ ಬೆಳಿಗ್ಗೆ 11ಗಂಟೆಯಾದರೂ ಇನ್ಸ್ಪೆಕ್ಟರ್ ಆಗಮಿಸುವುದಿಲ್ಲ. ಇದು ಒಂದು ದಿನದ ವಿಚಾರವಲ್ಲ ಪ್ರತಿನಿತ್ಯ ನಡೆಯುವ ನೈಜತೆ. ನಗರದಿಂದ ಹೊರಗಿರುವ ಮಹಿಳಾ ಠಾಣೆಯಲ್ಲಿ ಪ್ರತಿನಿತ್ಯ ಸಾರ್ವಜನಿಕರ ಮೇಲೆ ಅಲ್ಲಿ ನಡೆಯುವ ದೌರ್ಜನ್ಯ ಅದರಿಂದ ನೊಂದ ಜನತೆಯ ಗೋಳು ಕೇಳುವರಿಲ್ಲ. ಇನ್ನಾದರೂ ಇತ್ತ ಗಮನ ಹರಿಸುವರೇ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರತಿನಿತ್ಯ ಲಾಕಪ್ ನಿಲ್ ಎಂದು ಜಿಲ್ಲಾ ನಿಯಂತ್ರಣ ಕೊಠಡಿಗೆ ವರದಿ ನೀಡುತ್ತಾರೆ. ಆದರೆ ದಿನನಿತ್ಯವೂ ಲಾಕಪ್ ನಲ್ಲಿ ನಾಲ್ಕರಿಂದ ಐದು ಮಂದಿ ಶಂಕಿತರನ್ನ ಕರೆದು ತಂದು ಹೊಡೆದು ಹಣ ಪೀಕುತ್ತಿದ್ದಾರೆ. ಅದೇ ಠಾಣೆಯ ಅಪರಾದ ವಿಭಾಗದ ಪೇದೆಗಳು ಅಮಾಯಕರನ್ನು ಕರೆತಂದು ಹೊಡೆದು ಬಡಿದು ಹಣ ವಸೂಲಿ ಮಾಡುತ್ತಿದ್ದಾರೆ ಇದಕ್ಕೆ ಕ್ಯಾತ್ಸಂದ್ರ ಪಿಎಸ್ಸೈ ರಾಜು ಸಹಕರಿಸುತ್ತಿರುವುದು ಮತ್ತೊಂದು ನಿದರ್ಶನ.

      ಹಾಗಾಗಿ ಲಾಕಪ್ ನಲ್ಲಿರುವ ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ಹಿರಿಯ ಅಧಿಕಾರಿಗಳಿಗೆ ದೊರೆಯುವ ಬೀತಿಯಿಂದ ಠಾಣೆಗೆ ಬೀಗ ಹಾಕಿರುವ ಸಾಧ್ಯತೆಗಳಿವೆ.

      ಮಾನ್ಯ ಎಸ್ಪಿ ಸಾಹೇಬರು ಹೋದಾಗ ಈ ರೀತಿಯ ಘಟನೆಗಳು ನಡೆದಿವೆ ಎಂದರೆ ತುಮಕೂರು ಜಿಲ್ಲೆಯ ಪೊಲೀಸ್ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಇನ್ನಾದರೂ ಎಸ್ಪಿರವರು ಅಚಾನಕ್ ಆಗಿ ಎಲ್ಲಾ ಠಾಣೆಗಳಿಗೂ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಕ್ರಮ ಅವ್ಯವಹಾರಗಳನ್ನು ನಿಯಂತ್ರಿಸುವ ಅನಿವಾರ್ಯತೆಯಿದೆ.

(Visited 2,299 times, 1 visits today)