ತುಮಕೂರು:
ಕೃಷಿ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಕೊಟ್ಟಿರುವ ನರೇಂದ್ರ ಮೋದಿಜೀ ಮತ್ತೊಮ್ಮೆ ಪ್ರಧಾನಿ ಆಗಲು ರಾಜ್ಯಾದ್ಯಾಂತ ರೈತಮೋರ್ಚಾದಿಂದ ಗೋ-ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತುಮಕೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಗೋ-ಪೂಜೆ ಮಾಡುವ ಮೂಲಕ ಕಾರ್ಯಕ್ರಮವನ್ನು ರಾಜ್ಯ ರೈತಮೋರ್ಚಾ ಉಪಾಧ್ಯಕ್ಷರಾದ ಶ್ರೀ ಎಸ್.ಶಿವಪ್ರಸಾದ್ ಉದ್ಘಾಟಿಸಿ, ಮಾತನಾಡುತ್ತಾ ರೈತನ ವಾರ್ಷಿಕ ವರಮಾನ ದ್ವಿಗುಣಗೊಳಿಸಲು ಕಳೆದೈದು ವರ್ಷಗಳಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (ಪ್ರತಿವರ್ಷ 6000 ರೂಪಾಯಿ) ಬೇವು ಮಿಶ್ರಿತ ಯೂರಿಯದೊಂದಿಗೆ ದೇಶದ ರೈತರಿಗೆ ಸಮರ್ಪಕ ರಸಗೊಬ್ಬರಗಳನ್ನು ನೀಡಿರುವುದು, ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿ ವಿದ್ಯುತ್ ಸಂಪರ್ಕ ಇಲ್ಲದ 18452 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಮಾಡಿರುವುದು, ಇ-ಮಾರುಕಟ್ಟೆಗಳಿಗೆ ಅನುದಾನ ನೀಡಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಿರುವುದು, ರೈತರ 22 ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಜಾಸ್ತಿ ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡುತ್ತಿರುವುದು, ವಿಶೇಷವಾಗಿ ಗೋವುಗಳ ರಕ್ಷಣೆ, ದೇಶೀಯ ತಳಿಗಳನ್ನು ಉಳಿಸಿ ಬೆಳೆಸಲು ರಾಷ್ಟ್ರೀಯ ಕಾಮಧೇನು ಆಯೋಗ ಮಾಡಿ 750 ಕೋಟಿ ಬಜೆಟ್‍ನಲ್ಲಿ ತೆಗೆದಿಟ್ಟಿರುವುದು, ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರ ಕುಟುಂಬಗಳಿಗೆ ಪ್ರತಿ ವರ್ಷ 5 ಲಕ್ಷದ ತನಕ ಆರೋಗ್ಯ ರಕ್ಷಣಾ ಯೋಜನೆ ಮಾಡಿರುವುದಲ್ಲದೆ ಇನ್ನೂ ಅನೇಕ ರೈತ ಪರ ಯೋಜನೆಗಳನ್ನು ನೀಡಿ. ಸಂಕಷ್ಟದಲ್ಲಿರುವ ರೈತರ ಆರ್ಥಿಕ ಸಧೃಡತೆ ಮಾಡಲು ಶ್ರಮಿಸುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಮತ್ತೋಮ್ಮೆ ದೇಶದ ಪ್ರಧಾನಿ ಆಗಲಿ ಎಂದು ಮುಕ್ಕೋಟಿ ದೇವತೆಗಳಿರುವ ಕಾಮದೇನುವಿಗೆ ಪೂಜೆ ಮಾಡಲಾಯಿತು ಎಂದು ತಿಳಿಸಿದರು.
ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾದ ಸ್ನೇಕ್ ನಂದೀಶ್ ರವರು ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಇನ್ನೂ 10 ದಿನಗಳ ವರೆಗೆ ಗೋ-ಪೂಜೆ ಮಾಡುವ ಮೂಲಕ ರೈತರಿಗೆ ಜಾಗೃತಿ ಮೂಡಿಸಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಬ್ಯಾಟರಂಗೇಗೌಡ, ಜಿಲ್ಲಾ ಪ್ರಧಾನಕಾರ್ಯದರ್ಶಿ ತರಕಾರಿ ಮಹೇಶ್, ಜಿಲ್ಲಾ ಉಪಾಧ್ಯಕ್ಷರಾದ ಪೆಟ್ಟಿ ರಾಜಣ್ಣ, ಮಂಗಳಗೌರಮ್ಮ, ಜಿಲ್ಲಾ ಕಾರ್ಯದರ್ಶಿ ಸ್ವಾಂದೇನಹಳ್ಳಿ ನಾಗರಾಜು, ಜಿಲ್ಲಾ ಕಾರ್ಯದರ್ಶಿ ಎಂ.ವೈ.ರುದ್ರೇಶ್, ಜಿಲ್ಲಾ ಮಹಿಳಾಮೋರ್ಚಾ ಅಧ್ಯಕ್ಷರಾದ ಸರೋಜಗೌಡ ಮತ್ತು ಪದಾಧಿಕಾರಿಗಳು. ನಗರ ರೈತಮೋರ್ಚಾ ಅಧ್ಯಕ್ಷರಾದ ಬಸವರಾಜು, ತುಮಕೂರು ನಗರ ಮಂಡಲ ಅಧ್ಯಕ್ಷರಾದ ಸಿ.ಎನ್.ರಮೇಶ್, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.