ತುಮಕೂರು:
ಪುಲ್ವಾಮದಲ್ಲಿ ಭಯೋತ್ಪಾಧಕರ ಧಾಳಿಯಿಂದ ವೀರ ಮರಣವನ್ನಪ್ಪಿದ ಮಂಡ್ಯದ ಯೋಧ ಗುರು ಕುಟುಂಬಕ್ಕೆ ಗ್ರಾಮಾಂತರ ಶಾಸಕ ಡಿ.ಸಿ.ಗೌರೀಶಂಕರ್ ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಘೋಷಿಸಿದ್ದಾರೆ .
ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಾದ ಕಣಕುಪ್ಪೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ.ಹೆಬ್ಬೂರು ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ಸಿ ಸಿ ನಿರ್ಮಾಣಕ್ಕೆ ಶಂಕು ಸ್ತಾಪನೆ.ಗರಗದ ಕುಪ್ಪೆ ಆಂಜನೇಯ ಸ್ವಾಮಿ ದೇವಸ್ತಾನದ ಬಳಿ ರಸ್ತೆ ನಿರ್ಮಾಣಕ್ಕೆ ಶಂಕು ಸ್ತಾಪನೆ, ಕೋಡಿ ಮುದ್ದನಹಳ್ಳಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ,ಗೋವಿಂದರಾಜಪುರ ಸಿ ಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ತಾಪನೆ ರಿಸಾಲ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ,ನಾಗೇನಹಳ್ಳಿಯಲ್ಲಿ ದೇವಸ್ತಾನ ನಿರ್ಮಾಣಕ್ಕೆ ಶಂಕುಸ್ತಾಪನೆ,ಹೆಬ್ಬೂರಿನಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಹೆಬ್ಬೂರು ಸರ್ಕಲ್ ನಲ್ಲಿ ಶಾಲಾ ಮಕ್ಕಳ ಜೊತೆ ಅಗಲಿದ ವೀರ ಯೋಧರ ನಿಧನಕ್ಕೆ ಕಂಬನಿ ಮಿಡಿದು ಸಂತಾಪ ಸೂಚಿಸಿದರು.
ಪಾಕಿಸ್ತಾನದ ಭಯೋತ್ಪಾಧಕರು ರೂಪಿಸಿ ರಣಹೇಡಿಗಳಂತೆ ಸಂಚು ರೂಪಿಸಿ ಭಾರತೀಯ ಸೈನಿಕರನ್ನು ಹತ್ಯೆಗೈದಿರುವುದು ಖಂಡನಾರ್ಹ,ಈ ಘಟನೆ ಭಾರತದ 125 ಕೋಟಿ ಜನರನ್ನು ದುಖಃತಪ್ತರನ್ನಾಗಿಸಿದೆ,ಪ್ರಧಾನ ಮಂತ್ರಿಗಳು ಉಗ್ರರ ಹೆಡೆಮುರಿ ಕಟ್ಟುವಂತ ದಿಟ್ಟ ನಿರ್ಧಾರ ಕೈಗೊಳ್ಳಬೇಕು , ಭಾರತೀಯ ಸೈನಿಕರ ಸಾಮಥ್ರ್ಯದ ಬಗ್ಗೆ ಭಯೋತ್ಪಾಧಕರಿಗೆ ಭಯ ಹುಟ್ಟಿಸುವ ಪಾಠ ಕಲಿಸಬೇಕೆಂದು ಆಗ್ರಹಿಸಿದರು.
ಮೃತ ಯೋಧರ ಕುಟುಂಬಗಳಿಗೆ ದುಖಃ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಹಾರೈಸಿ ಮಂಡ್ಯ ಯೋಧ ಗುರು ಕುಟುಂಬಕ್ಕೆ ಒಂದು ಲಕ್ಷ ವೈಯಕ್ತಿಕ ಪರಿಹಾರ ನೀಡುವುದಾಗಿ ಇದೇ ವೇಳೆ ಘೋಷಿಸಿದರು.
ರೈತರ ಹಾಗು ಸಾರ್ವಜನಿಕರಿಂದ ಹೆಬ್ಬೂರು ನಾಡಕಚೇರಿ ಅವ್ಯವಸ್ತೆಯ ಬಗ್ಗೆ ದೂರು ಕೇಳಿಬಂದ ಹಿನ್ನಲೆ ಹೆಬ್ಬೂರು ನಾಢಕಚೇರಿಗೆ ಶಾಸಕರು ದಿಢೀರ್ ಭೇಟಿ ಪರಿಶೀಲಿಸಿದರು,ಪಹಣಿ ಸರಿಯಾಗಿ ರೈತರಿಗೆ ವಿತರಣೆಯಾಗುತ್ತಿಲ್ಲ, ದುಪ್ಪಟ್ಟು ಹಣ ನೀಡಿ ಸೈಬರ್ ಕೆಂದ್ರಗಳಲ್ಲಿ ಪಹಣಿ ಪಡೆಯುವಂತ ದುರ್ಗತಿ ಬಂದಿದೆ,ಆಧಾರ್ ತಿದ್ದುಪಡಿಯೂ ಸಹ ವಿಳಂಬವಾಗುತ್ತಿದೆಎಂದು ರೈತರು ಹಾಗೂ ಸಾರ್ವಜನಿಕರು ಸಮಸ್ಯೆಗಳ ಸರಮಾಲೆಯನ್ನೇ ಶಾಸಕರ ಮುಂದಿಟ್ಟಾಗ ನಾಡಕಚೇರಿ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು,ಸಿಬ್ಬಂದಿ ತಾಂತ್ರಿಕ ಸಮಸ್ಯೆ ನೆಪ ಹೇಳಿದಾಗ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ,ತಾಂತ್ರಿಕ ಸಮಸ್ಯೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಹಂತಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ,ಐದು ವರ್ಷಗಳಲ್ಲಿ ಗ್ರಾಮಾಂತರ ಕ್ಷೇತ್ರವನ್ನು ಇಡೀ ಜಿಲ್ಲೆಗೆ ಮಾದರಿ ಕ್ಷೇತ್ರವಾಗಿಸುವೆ, ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ದಿ ಮಾಡುವುದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದೇನೆ ಸಮಯದ ಅಭಾವದಿಂದ ಕೆಲವು ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ,ಮತದಾರರು ಅನ್ಯತಾ ಬಾವಿಸಬಾರದು ,ನಿಮ್ಮ ಸೇವೆ ಮಾಡಲು ಹತ್ತು ವರ್ಷಗಳಬಳಿಕ ಅವಕಾಶ ದೊರೆತಿದ್ದು ನಿಮ್ಮ ಋಣ ತೀರಿಸುವ ಜವಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದರು.
ತಿಮ್ಮಸಂದ್ರ ಲಕ್ಷ್ಮೀ ದೇವಸ್ತಾನಕ್ಕೆ ಶಾಸಕರು ಒಂದು ಲಕ್ಷ ದೇಣಿಗೆ ನೀಡಿದರಲ್ಲದೆ ,ದೇವಾಲಯದ ಗೋಪುರವನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಹೆಬ್ಬೂರು ಜಿಲ್ಲಾ ಪಂಚಾಯ್ತಿ ಜೆಡಿಎಸ್ ಅಧ್ಯಕ್ಷ ವೈ ಟಿ ನಾಗರಾಜು,ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ಆಜಂ,ಜೆಡಿಎಸ್ ಮುಖಂಡರಾದ ಕೆಂಪರಾಜು,ಕೋಡಿಮುದ್ದನಹಳ್ಳಿ ಪ್ರಕಾಶ್ ,ಪಾಂಡು,ಭೈರೇಗೌಡರು ಗ್ರಾಮ ಪಂಚಾಯ್ತಿ ಸದಸ್ಯ ರಾಘು, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯ್ ಕುಮಾರ್, ಜೆಡಿಎಸ್ ವಿವಿಧ ಘಟಕಗಳ ಅಧ್ಯಕ್ಷರು,ಪದಾಧಿಕಾರಿಗಳು, ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.