ತುಮಕೂರು:
ಉಗ್ರರ ದಾಳಿಯಿಂದ ವೀರ ಮರಣವನ್ನಪ್ಪಿದ ಮಂಡ್ಯ ಜಿಲ್ಲೆ ಗುಡಿಗೆರೆ ಗ್ರಾಮದ ಯೋಧ ಗುರು ಕುಟುಂಬಕ್ಕೆ ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಜೆಡಿಎಸ್ ಮುಖಂಡರ ಮೂಲಕ ಒಂದು ಲಕ್ಷ ರೂ ಹಣ ನೀಡಿ ಕುಟುಂಬವರ್ಗಕ್ಕೆ ದೈರ್ಯತುಂಬಿದ್ದಾರೆ
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ಪೆ,16 ರಂದು ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಶಾಲಾ ಮಕ್ಕಳೊಂದಿಗೆ ಯೋಧ ಗುರು ನಿಧನಕ್ಕೆ ಸಂತಾಪ ಸೂಚಿಸಿ ವೀರ ಮರಣವನ್ನಪ್ಪಿದ ಗುರು ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ನೆರವು ನೀಡುವುದಾಗಿ ಘೋಷಿಸಿದ್ದರು,
ಶಾಸಕ ಡಿ ಸಿ ಗೌರೀಶಂಕರ್ ನೀಡಿದ ಭರವಸೆಯಂತೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಲನೂರು ಅನಂತ್ ಹಾಗು ಜೆಡಿಎಸ್ ಮುಖಂಡರ ಮುಖೇನ ಒಂದು ಲಕ್ಷ ಹಣವನ್ನು ಮಂಗಳವಾರದಂದು ಮೃತ ವೀರ ಯೋಧ ಗುರು ತಾಯಿ ಹಾಗು ಆತನ ಮಡದಿಗೆ ತಲುಪಿಸಿದ್ದಾರೆ, ನಿಮ್ಮ ಜೊತೆ ನಾವಿದ್ದೇವೆ ಎದೆಗುಂದಬೇಡಿ , ನಮ್ಮ ಶಾಸಕರಾದ ಡಿ ಸಿ ಗೌರೀಶಂಕರ್ ಅವರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಶೀಘ್ರವಾಗಿ ನಿಮ್ಮ ಕುಟುಂಬಕ್ಕೆ ಸರ್ಕಾರಿ ನೌಕರಿ ಹಾಗು ಪರಿಹಾರ ದೊರಕಿಸುತ್ತಾರೆ ಎಂದು ಜೆಡಿಎಸ್ ಮುಖಂಡರು ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.