ತುಮಕೂರು:
ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಉದ್ಘಾಟನಾ ಸಮಾರಂಭವನ್ನು ಫೆಬ್ರುವರಿ 22ರಂದು ಸಂಜೆ 6.30 ಗಂಟೆಗೆ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸಮಾರಂಭದ ದಿವ್ಯಸಾನಿಧ್ಯ ವಹಿಸಲಿದ್ದು, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ಅವರು ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸುವರು. ಸಣ್ಣ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ಖಾದಿ ಉತ್ಸವವನ್ನು ಉದ್ಘಾಟಿಸುವರು. ಶಾಸಕರಾದ ಜಿ.ಬಿ ಜ್ಯೋತಿಗಣೇಶ್ ಹಾಗೂ ಡಿ.ಸಿ ಗೌರಿಶಂಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಪಾಲಿಕೆ ಮೇಯರ್ ಲಲಿತ ರವೀಶ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಸ್ತುಪ್ರದರ್ಶನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ.22 ರಿಂದ ಮಾರ್ಚ್ 8ರವರೆಗೂ ಪ್ರತಿದಿನ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಫೆಬ್ರುವರಿ 22ರ ಸಂಜೆ 8.30 ಗಂಟೆಗೆ ಯಲ್ಲಾಪುರದ ಶ್ರೀ ಮಾರುತಿ ಗೆಳೆಯರ ಬಳಗದವರಿಂದ “ಕುರುಕ್ಷೇತ್ರ” ಪೌರಾಣಿಕ ನಾಟಕ ಪ್ರದರ್ಶನ; ಫೆ.23ರ ಸಂಜೆ 6.30 ಗಂಟೆಗೆ ಶ್ರೀ ಮಠದ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ “ಸಾಂಸ್ಕøತಿಕ ಕಾರ್ಯಕ್ರಮ” ಹಾಗೂ ರಾತ್ರಿ 8.30 ಗಂಟೆಗೆ ತುಮಕೂರು ಸ್ಟೈಲ್ ಡ್ಯಾನ್ಸ್ ಅಕಾಡೆಮಿ ಕಲಾವಿದರಿಂದ “ಡ್ಯಾನ್ಸ್ ಡ್ಯಾನ್ಸ್” ಕಾರ್ಯಕ್ರಮ; ಫೆ.24ರ ಸಂಜೆ 6.30 ಗಂಟೆಗೆ ಬೆಂಗಳೂರಿನ ಜಾನಪದ ಹಾಸ್ಯ ಜಾದೂಗಾರ ಕಡಬ ಶ್ರೀನಿವಾಸ್ ಅವರಿಂದ “ಜಾದೂ” ಹಾಗೂ ರಾತ್ರಿ 8.30 ಗಂಟೆಗೆ ಬಳ್ಳಾರಿಯ ಶ್ರೀ ಎಲೆವಾಳ ಸಿದ್ಧಯ್ಯಸ್ವಾಮಿ ಕಲಾಬಳಗದ ಕಲಾವಿದರಿಂದ “ರಕ್ತರಾತ್ರಿ” ಎಂಬ ಪೌರಾಣಿಕ ನಾಟಕ ಪ್ರದರ್ಶನ; ಫೆ.25ರ ಸಂಜೆ 6.30 ಗಂಟೆಗೆ ಮೈಸೂರಿನ ಹಾಡು ಕೋಗಿಲೆ ಖ್ಯಾತಿಯ ರಶ್ಮಿ ರಘುರಾಂ ಅವರಿಂದ “ಸುಗಮ ಸಂಗೀತ” ಹಾಗೂ ರಾತ್ರಿ 8.30 ಗಂಟೆಗೆ ಬೆಂಗಳೂರಿನ ಕಲಾವಿದರ ಬಳಗದ ವತಿಯಿಂದ “ಸತ್ಯ ಹರಿಶ್ಚಂದ್ರ” ಪೌರಾಣಿಕ ನಾಟಕ; ಫೆ.26ರ ಸಂಜೆ 6.30 ಗಂಟೆಗೆ ಬೆಂಗಳೂರು ಗಾಯತ್ರಿ ಶ್ರೀಧರ್ ಅವರಿಂದ “ಗಾನವೈಭವ” ಹಾಗೂ ರಾತ್ರಿ 8.30 ಗಂಟೆಗೆ ಮಂಡ್ಯ ಜಿಲ್ಲೆಯ ಮಲ್ಲನಾಯ್ಕನಕಟ್ಟೆಯ ಶ್ರೀ ಭೈರವೇಶ್ವರ ಸಾಂಸ್ಕೃತಿಕ ಕಲಾಸಂಘ ಅಭಿನಯಿಸುವ “ಅಣ್ಣ ತಂದ ಅತ್ತಿಗೆ” ಸಾಮಾಜಿಕ ನಾಟಕ ಪ್ರದರ್ಶನ; ಫೆ.27ರಂದು ಸಂಜೆ 6.30 ಗಂಟೆಗೆ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಇವರಿಂದ “ಕವಿ ಕಾವ್ಯ ನಮನ” ಹಾಗೂ ರಾತ್ರಿ 8.30 ಗಂಟೆಗೆ ದಾವಣಗೆರೆಯ ಶ್ರೀ ಸಂಚಾರಿ ಕೆ.ಬಿ.ಆರ್ ಡ್ರಾಮ ಕಂಪನಿ ವತಿಯಿಂದ “ಕಳ್ಳಗುರು ಸುಳ್ಳುಶಿಷ್ಯ” ಎಂಬ ಸಾಮಾಜಿಕ ಹಾಗೂ ಸಾಂಸಾರಿಕ ನಾಟಕ ಪ್ರದರ್ಶನ; 28ರ ಸಂಜೆ 6.30 ಗಂಟೆಗೆ ಸಿಂಧನೂರು ತಾಲ್ಲೂಕಿನ ಕನ್ನಡ ಮಹಮದೀಯರ ಕಲಾ ಬಳಗದಿಂದ “ಜಾನಪದ ರಸಸಂಜೆ” ಹಾಗೂ 8-30 ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಕುಮಾರೇಶ್ವರ ನಾಟ್ಯ ಸಂಘದಿಂದ “ರೊಕ್ಕಬಂದಾಗ ಸೊಕ್ಕು ಬರಬಾರದು” ಸಾಮಾಜಿಕ ನಾಟಕ; ಮಾ. 1ರ ಸಂಜೆ 6-30 ಗಂಟೆಗೆ ಸಿದ್ದಗಂಗಾ ಮಠದ ಎಲ್. ಶಿವಕುಮಾರ್ ಮಿತ್ರ ವೃಂದದವರಿಂದ “ಸುಗಮ ಸಂಗೀತ” ಹಾಗೂ ರಾ. 8.30 ಗಂಟೆಗೆ ಕೊಡಗನೂರು ಶ್ರೀ ಜಯಕುಮಾರ್ ಮಿತ್ರ ಮಂಡಳಿಯಿಂದ “ಹಳ್ಳಿ ಹುಡ್ಗಿ ಮೊಸರು ಗಡ್ಗಿ” ಸಾಮಾಜಿಕ ನಾಟಕ; 2ರಂದು ಸಂ.6.30ಕ್ಕೆ ಉಪ್ಪಾರ ಹಳ್ಳಿ ಕೀರ್ತನ ರಂಗ ಬಳಗದ ವತಿಯಿಂದ “ಲಿಂಗೈಕ್ಯ ಶಿವಕುಮಾರ ಶ್ರೀಗಳ ಕಥಾಕೀರ್ತನ” ಹಾಗೂ ರಾ.8.30ಕ್ಕೆ ಚಲನಚಿತ್ರ ಹಾಸ್ಯ ನಟ ಡಿಂಗ್ರಿ ನಾಗರಾಜ್ ಮಿತ್ರ ಮಂಡಳಿಯಿಂದ “ಯಾರ ಹೂವು ಯಾರ ಮುಡಿಗೋ” ಸಾಮಾಜಿಕ ನಾಟಕ; ಮಾ.3ರ ರಾತ್ರಿ 8.30 ಗಂಟೆಗೆ ಬೆಂಗಳೂರಿನ ರಂಗ ಬದುಕು ಟ್ರಸ್ಟ್‍ನ ಅಭಿನಯದ “ಛತ್ರಪತಿ ಶಿವಾಜಿ” ಐತಿಹಾಸಿಕ ನಾಟಕ; ಮಾ.4ರ ರಾತ್ರಿ 8 ಗಂಟೆಗೆ ಕೆಂಕೆರೆ ಮಲ್ಲಿಕಾರ್ಜುನ್ ಅವರ ಸ್ವರ ಸಿಂಚನ ಸಂಗೀತ ಶಾಲೆಯಿಂದ “ಭಕ್ತಿ ಕುಸುಮಾಂಜಲಿ” ಹಾಗೂ 9.30 ಗಂಟೆಗೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ನಾಟಕ ಮಂಡಳಿ ವತಿಯಿಂದ “ಶ್ರೀ ಜಗಜ್ಯೋತಿ ಬಸವೇಶ್ವರ” ಭಕ್ತಿಪ್ರಧಾನ ನಾಟಕ; ಮಾ.5ರ ಸಂಜೆ 6.30 ಗಂಟೆಗೆ ಮೈಸೂರು ಜಿಲ್ಲೆಯ ಶ್ರೀ ಸಿದ್ದೇಶ್ವರ ಸ್ವಾಮಿ ಕಲಾಸಂಘ ಸಾದರಪಡಿಸುವ “ಜಾನಪದ ಸಂಗಮ” ಹಾಗೂ ರಾ.8.30 ಗಂಟೆಗೆ ದಾವಣಗೆರೆಯ ಜಯಶ್ರೀರಾಜ್ ಮಿತ್ರ ವೃಂದದವರಿಂದ “ಚಪಾತಿ ಚಾಮುಂಡಿ ಬಾಳೆಹಣ್ಣು ಬಸ್ಯ” ಸಾಮಾಜಿಕ ನಾಟಕ; ಮಾ.6ರ ಸಂಜೆ 6.30 ಗಂಟೆಗೆ ತುಮಕೂರಿನ ಚಿಣ್ಣರ ಸಾಹಿತ್ಯ ಲೋಕ ಅವರಿಂದ “ವಚನ ವೈಭವ” ಹಾಗೂ ರಾ.8.30ಕ್ಕೆ ಬೆಂಗಳೂರಿನ ವಸಂತ ಕಲಾವಿದರಿಂದ “ಮಹಾ ಬ್ರಾಹ್ಮಣ ಮೋಕ್ಷಗಾಮಿ ರಾವಣ” ಹಾಗೂ ರಾ.11.30 ಗಂಟೆಗೆ ಅರುಣ್ ಮೆಲೋಡಿಸ್ ಅವರಿಂದ ಆರ್ಕೆಸ್ಟ್ರಾ; ಮಾ.7ರ ಸಂಜೆ 6.30ಕ್ಕೆ ಗುಬ್ಬಿ ತಾಲ್ಲೂಕು ತ್ಯಾಗಟೂರಿನ ಶ್ರೀ ಬಸವ ಮಹಿಳಾ ಭಜನ ಸಂಘದ ವತಿಯಿಂದ “ಜಾನಪದ ಭಕ್ತಿಗಾಯನ” ಹಾಗೂ ರಾ.8.30ಕ್ಕೆ ಹೆಗ್ಗೆರೆಯ ಶ್ರೀ ರಾಘವೇಂದ್ರ ಕಲಾ ಸಂಘದ ವತಿಯಿಂದ “ಗುಲಾಮ ಗಂಡ” ಸಾಮಾಜಿಕ ನಗೆ ನಾಟಕ ಪ್ರದರ್ಶನ ಹಾಗೂ ಮಾ.8ರ ಸಂಜೆ 6.30 ಗಂಟೆಗೆ ವಸ್ತುಪ್ರದರ್ಶನದ ಮುಕ್ತಾಯ ಸಮಾರಂಭ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.