ಜಕಾರ್ತಾ :

      ಇಂಡೋನೇಷ್ಯಾದ ಲಯನ್‌ ಏರ್‌ ಸಂಸ್ಥೆಗೆ ಸೇರಿದ ವಿಮಾನ ಪತನಗೊಂಡು ಸಮುದ್ರಕ್ಕೆ ಬಿದ್ದ ಪರಿಣಾಮ ಭಾರತದ ಪೈಲಟ್‌ ಭವ್ಯೇ ಸುನೇಜಾ ಸಹಿತ 188 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ. 

      ಲಯನ್ ಏರ್ ನ JT610 ವಿಮಾನದಲ್ಲಿದ್ದ ಯಾರೊಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ. ಅದು ಹೊಸ ಬೋಯಿಂಗ್ 737 MAX8 ವಿಮಾನವಾಗಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಪ್ರಕಾರ, ಅಪಘಾತ ಸಂಭವಿಸಿದ ಕಡಲ ಪ್ರದೇಶದಿಂದ ಹದಿನೈದು ಕಿ.ಮೀ. ದೂರಕ್ಕೆ ಮಾನವ ಅವಶೇಷಗಳು ದೊರೆತಿವೆ.

      ಸಮುದ್ರಕ್ಕೆ ವಿಮಾನ ಅಪ್ಪಳಿಸಿ ಸುಮಾರು 30-40 ಮೀಟರ್‌ ಆಳಕ್ಕೆ ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿದೆ. ವಿಮಾನದಲ್ಲಿ ಐವರು ಸಿಬಂದಿ, ಇಬ್ಬರು ಪೈಲಟ್‌ಗಳು, 178 ಮಂದಿ ಪ್ರಯಾಣಿಕರು, ಒಂದು ಮಗು, ಎರಡು ಶಿಶುಗಳು ಇದ್ದವು ಎಂದು ಇಂಡೋನೇಷ್ಯಾ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ನಿರ್ದೇಶಕ ಸಿಂಧು ರಹಾಯು ತಿಳಿಸಿದ್ದಾರೆ.
  

(Visited 123 times, 1 visits today)