ತುಮಕೂರು :

      ಫೆಬ್ರವರಿ ತಿಂಗಳ ನಂತರ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಲಿದ್ದು, 15ನೇ ವಾರ್ಡ್‍ನ ಸಾರ್ವಜ ನಿಕರು ಹೇಮಾವತಿ ನೀರನ್ನು ಮಿತವಾಗಿ ಬಳಸುವ ಮೂಲಕ ಸಹಕಾರ ನೀಡುವಂತೆ ಮಹಾನಗರ ಪಾಲಿಕೆ ಲೆಕ್ಕಪತ್ರಗಳ ಸ್ಥಾಯಿಸಮಿತಿ ಅಧ್ಯಕ್ಷೆ ಗಿರಿಜಾ ಧನಿಯಾಕುಮಾರ್ ಮನವಿ ಮಾಡಿದ್ದಾರೆ.

      ಬುಗುಡನಹಳ್ಳಿಯಲ್ಲಿ ಲಭ್ಯವಿರುವ ನೀರಿನ ಬಗ್ಗೆ ಹಾಗೂ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಬಗ್ಗೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಪಾಲಿಕೆ ಎಂಜನಿಯರ್ ವಸಂತ್ ಅವರಿಂದ ಮಾಹಿತಿಯನ್ನು ಪಡೆದುಕೊಂಡರು.

      ಫೆಬ್ರವರಿ ನಂತರ ನೀರಿನ ಬಾಷ್ಪೀಕರಣ ಹೆಚ್ಚಲಿದ್ದು, ನೀರಿನ ಲಭ್ಯತೆ ಕಡಿಮೆಯಾಗಲಿದೆ, ಈಗಾಗಲೇ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು, ಹೇಮಾವತಿ ನೀರನ್ನು ಮಿತವಾಗಿ ಬಳಸಿದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ, ಹಾಗಾಗಿ ಸಾರ್ವಜನಿಕರು ಮಹಾನಗರ ಪಾಲಿಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

      ಸಾರ್ವಜನಿಕರಿಗೆ ವಾಸ್ತವ ಸ್ಥಿತಿಯನ್ನು ತಿಳಿಸಿ, ಕುಡಿಯುವ ನೀರಿನ ಸಮಸ್ಯೆಯುಂಟಾಗದಂತೆ ಮನವೊಲಿಸಬೇಕಿದ್ದು, ವಾಟರ್ ಮ್ಯಾನ್‍ಗಳು ವಾರ್ಡ್‍ನಲ್ಲಿ ಈ ಕಾರ್ಯವನ್ನು ಮಾಡಬೇಕಿದೆ ಎಂದು ಸೂಚಿಸಿದ ಅವರು, ದೇವರಾಯಪಟ್ಟಣ ಕೆರೆ ನೀರು ಹರಿಸಿ ಅಲ್ಲಿಂದ ವಿದ್ಯಾನಗರ ಜಾಕ್‍ವೇಲ್ ಮೂಲಕ ಕೆಲ ವಾರ್ಡ್‍ಗಳಿಗೆ ನೀರನ್ನು ನೀಡಬಹುದಾಗಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಹೇಳಿದರು.

   15ನೇ ವಾರ್ಡ್ ವ್ಯಾಪ್ತಿಯ ಗಾಂಧಿನಗರ, ಸಿಎಸ್‍ಐಲೇಔಟ್ ಹಾಗೂ ಸೋಮೇಶ್ವರದಲ್ಲಿ 4 ದಿನಗಳಿಗೊಮ್ಮೆ ನೀರನ್ನು ಬಿಡಲಾಗುವುದು, ಕುಡಿಯುವ ನೀರಿನ ಸಮಸ್ಯೆಯುಂಟಾದ್ದಲ್ಲಿ ಗಾಂಧಿನಗರ- ಗುರುಮೂರ್ತಿ-9740694385, ಸಿಎಸ್‍ಐ ಲೇಔಟ್ ಚಿಕ್ಕಗಂಗಯ್ಯ- 9686417299, ಸೋಮೇಶ್ವರ- ಕುಮಾರ್, 8861137122 ಅವರನ್ನು ಸಂಪರ್ಕಿಸಬಹುದಾಗಿದೆ. ಹಾಗೆಯೇ ಬೀದಿದೀಪಗಳ ಸಮಸ್ಯೆಗೆ ಲೈಟಿಂಗ್ ಸಮಸ್ಯೆ ಎದುರಾದರೆ ನಾಗರಾಜು-8970808084, ಮಂಜಣ್ಣ-99450008927, ಶರತ್- 9108010097 ಅವರ ದೂರವಾಣಿ ಸಂಖ್ಯೆಯನ್ನು ಸಂರ್ಪಕಿಸಬಹುದಾಗಿದ್ದು ಸಿಬ್ಬಂದಿಗಳು ಸ್ಪಂದಿಸದೇ ಇದ್ದಲ್ಲಿ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, 9964185355 ಸಂಪರ್ಕಿಸುವಂತೆ ಕೋರಿದ್ದಾರೆ.

(Visited 16 times, 1 visits today)