ಪಾವಗಡ :-

      ತಾಲ್ಲೂಕಿನಲ್ಲೇ ಆತ್ಯಂತ ಹಿಂದುಳಿದ ಭಾಗವಾದ ನಾಗಲಮಡಿಕೆ ಹೋಬಳಿ ಅಭಿವೃದ್ದಿಗೆ ಆದ್ಯತೆ ನೀಡಿ 25 ಕೋಟಿ ವೆಚ್ಚದಲ್ಲಿ ಏಕಲವ್ಯ ವಸತಿ ಶಾಲೆ ನಿರ್ಮಾಣಕ್ಕೆ ಪ್ರಪೋಸಲ್ ಕಳುಹಿಸಲಾಗಿದೆ ಎಂದು ಕಾರ್ಮಿಕ ಸಚಿವಾ ವೆಂಕಟರಮಣಪ್ಪ ತಿಳಿಸಿದರು.

      ತಾಲ್ಲೂಕಿನ ರ್ಯಾಪ್ಟೆ ಗ್ರಾಮದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಕಂದಾಯ ಮತ್ತು ಪಿಂಚಣೆ ಆದಾಲತ್ ಕಾರ್ಯಕ್ರಮವನ್ನು ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ ಉದ್ಘಾಟಿಸಿ ಮಾತನಾಡಿ ಈ ವ್ಯಾಪ್ತೀಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಒಂದೇ ಭಾರಿ ಮಾಶಾಸನ ನೀಡಲು ನಿರ್ದರಿಸಿದ ಕಾರಣದಿಂದ ಇಂದು 525 ಫಲಾನುಭವಿಗಳಿಗೆ ಆದೇಶದ ಪ್ರತಿ ನೀಡಲಾಗುತ್ತಿದ್ದು ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಕೂಡಲೇ ಬಗೆಹರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

      ಚಿತ್ರದುರ್ಗ ಸಂಸದರಾದ ಚಂದ್ರಪ್ಪ ಮಾತನಾಡಿ, ಈ ಹಿಂದೆ ಐದುವರ್ಷ ಪೂರ್ಣವದಿ ಸರ್ಕಾರ ನಡೆಸಿದ್ದು ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಹಿಡೇರಿಸಿ ಜನಪರ ಸರ್ಕಾರವಾಗಿ ರೈತರ ಸಾಲಮನ್ನ ಮಾಡಿದ್ದವೆ ಇಂದಿನ ಸಂಮಿಶ್ರ ಸರ್ಕಾರ 45 ಸಾವಿರ ಕೋಟಿ ಸಾಲಮನ್ನ ಮಾಡಿದೆ ಜನತೆಗೆ ಹುಸಿ ಬರವಸೆ ನೀಡಿ ಐದುವರ್ಷ ಆದಿಕಾರ ಪಡೆದಾ ನಂರೇಂದ್ರ ಮೋದಿಯರು ಈ ರಾಜ್ಯದ ಹಾಗೂ ದೇಶದ ರೈತರಿಗೆ ನೀಡಿದ ಕೋಡುಗೆ ಏನು ಎಂದು ಪ್ರಶ್ನಿಸಿದ ಅವರು ರೈತರ ಸಾಲಮನ್ನ ಮಾಡದ ಬಿಜೆಪಿಗೆ ಈ ರಾಜ್ಯದ ಜನತೆಯ ಬಳಿ ಮತ ಕೇಳುವಾ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

      ಕಾರ್ಯಕ್ರಮದಲ್ಲಿ ಸಂದ್ಯಸುರಕ್ಷ , ಮನಸ್ವೀನಿ , ಮೈತ್ರಿ , ಸೇರಿದಂತೆ ವಿವಿಧ ಯೋಜನೆಗಳ 525 ಫಲಾನುಭವಿಗಳಿಗೆ ಕಾರ್ಮಿಕ ಸಚಿವಾ ವೆಂಕಟರಮಣಪ್ಪ ಹಾಗೂ ಸಂಸದ ಚಂದ್ರಪ್ಪ ಆದೇಶದ ಪ್ರತಿಗಳನ್ನು ವಿತರಣೆ ಮಾಡಿದರು.

      ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೋಮ್ಲನಾಯ್ಕ್ , ತಹಶೀಲ್ದರ್ ವರದರಾಜು , ಜಿ.ಪಂ.ಸದಸ್ಯರಾದ ಹೆಚ್.ವಿ.ವೆಂಕಟೇಶ್ , ಚನ್ನಮಲ್ಲಪ್ಪ , ತಾ.ಪಂ.ಅದ್ಯಕ್ಷರಾದ ಸೋಗುಡು ವೆಂಕಟೇಶ್ , ಉಪಾದ್ಯಕ್ಷರಾದ ನಾಗರಾಜು , ರ್ಯಾಪ್ಟೆ ಗ್ರಾ.ಪಂ ಅದಯಕ್ಷರಾದ ಸುಜಾತಮ್ಮ ವೆಂಕಟೇಶ್ , ತಾ.ಪಂ.ಸದಸ್ಯರಾದ ರವಿ , ನರಸಿಂಹ್ಮ , ಎಪಿಎಮ್ಸಿ ಅದ್ಯಕ್ಷರಾದ ರವಿ , ತಾ.ಪಂ.ಮಾಜಿ ಅದ್ಯಕ್ಷರಾದ ಲಕ್ಷ್ಮಿ ನಾರಾಯಣಪ್ಪ , ನಾಗಲಮಡಿಕೆ ಹೋಬಳಿ ಉಪತಹಶೀಲ್ದರ್ ಶಿವನಂದರೆಡ್ಡಿ ಹಾಗೂ ಗ್ರಾಮಸ್ಥರು ಪುಸ್ಥಿತರಿದ್ದರು.

 

 

(Visited 44 times, 1 visits today)