ತುರುವೇಕೆರೆ :
ವಿಧಾನಸಭಾ ಕ್ಷೇತ್ರದ ಮುಸ್ಲಿಂ ಕಾಲೋನಿಗಳಿಗೆ ಉತ್ತಮ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಮಸಾಲಾಜಯರಾಮ್ ತಿಳಿಸಿದರು.
ತಾಲೂಕಿನ ಅಕ್ಕಳಸಂದ್ರ ಕಾಲೋನಿ 20 ಲಕ್ಷ ಹಾಗೂ ಚಂಡೂರು ಮುಸ್ಲಿಂ ಕಾಲೋನಿ 10 ಲಕ್ಷ ರೂ ವೆಚ್ಚದಲ್ಲಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದಿಂದ ಮಂಜೂರಾದ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವ ಸಿ.ಸಿ ರೋಡ್ ಮತ್ತು ಬಾಕ್ಸ್ಚರಂಡಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿ ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ಇಲಾಖೆಯಲ್ಲಿ ವಿಶೇಷ ಅನುದಾನವನ್ನು ತಂದು ಮುಸ್ಲಿಂ ಕಾಲೋನಿಗಳಿಗೆ ಕಾಂಕ್ರೇಟ್ ರಸ್ತೆ, ಚರಂಡಿ ಕಾಮಗಾರಿಗಳನ್ನು ಈಗಾಗಲೇ ಮಾಯಸಂದ್ರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಗುತ್ತಿಗೆದಾರರು ಕಳಪೆ ಮಾಡದಂತೆ ಸಾರ್ವಜನಿಕರು ಹೆಚ್ಚು ನಿಗಾವಹಿಸಿ ಉತ್ತಮ ಗುಣಮಟ್ಟ ಕಾಮಾಗಾರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ರಸ್ತ ಅಭಿವೃದ್ದಿ ಸಂಸ್ಥೆಯಿಂದ ಮುಂಜೂರಾಗಿದ್ದ 94.20 ಲಕ್ಷ ವ್ಯಚ್ಚದಲ್ಲಿನ ಹುಲ್ಲೆಕೆರೆಯಿಂದ ಜಕ್ಕನಹಳ್ಳಿವರೆಗಿನ ರಸ್ತೆ ಕಾಮಗಾರಿಗೆ ಡಾಂಬರೀಕರಣಕ್ಕೆ ಚಾಲನೆ ನೀಡಿದರು.
ತಾಲೂಕು ಪಂಚಾಯ್ತಿ ಸದಸ್ಯ ನಂಜೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ದುಂಡಾರೇಣಕಪ್ಪ, ಬಿಜೆಪಿ ಯುವ ಅಧ್ಯಕ್ಷ ದಿನೇಶ್, ಬಿಜೆಪಿ ಮಹಿಳಾ ತಾಲೂಕು ಅಧ್ಯಕ್ಷೆ ಜಯಶೀಲಾ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಮುಖಂಡರಾದ ಯು.ಬಿ.ಸುರೇಶ್, ಚಂಡೂರುರಾಮೇಗೌಡ, ಹಾಲೇಗೌಡ, ವಿದ್ಯಾರಣ್ಯಜಯಣ್ಣ, ಹುಲ್ಲೆಕೆರೆದಯಾನಂದ್, ರವಿಕೀರ್ತೀ, ಹಾವಾಳರವಿ, ಅಕ್ಕಳಸಂದ್ರಮೋಹನ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.