ಸಾಗರ ಕ್ಷೇತ್ರದ ಮಾಜಿ ಶಾಸಕರು ಹಾಗು ಹಾಲಿ ಕಾಂಗ್ರೇಸ್ ಮುಖಂಡರಾಗಿರುವ ಬೇಳೂರು ಗೋಪಾಲಕೃಷ್ಣ ಅವರು ನರೇಂದ್ರ ಮೋದಿ ಅವರಿಗೆ ಗನಗನು ಇಟ್ಟು ಶೂಟ್ ಮಾಡಿ ಬನ್ನಿ ಎಂದು ಹೇಳಿರುವ ಬೇಳೂರು ವಿರುದ್ದ ಇಂದು ತುಮಕೂರಿನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಈ ಕೂಡಲೆ ಬಂಧಿಸಿ ಜೈಲಿಗೆ ಬಿಡುವಂತೆ ಒತ್ತಾಯ ಮಾಡಿ ಪತ್ರ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗು ರಾಜ್ಯ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಪ್ರಭಾಕರ ತಿಳಿಸಿದರು.
ಇಂದು ತುಮಕೂರಿನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಅಡಿಷನಲ್ ಎಸ್,ಪಿ ಅವರು ದೂರು ಸ್ವೀಕರಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು ಎಂಚು ಪ್ರಭಾಕರ ತಿಳಿಸಿದರು,
ಕಳೆದ ಫೆಬ್ರವರಿ 4 ರಂದು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವ ಈ ದೇಶದ ಪ್ರಧಾನಿಗಳನ್ನು ಗನ್ನು ಇಟ್ಟು ಶೂಟ್ ಮಾಡಿ ಬನ್ನಿ ಎಂದು ಹೇಳಿರುವುದು ಅಕ್ಷಮ್ಯ ಅಪರಾದ, ಇದು ಕಾನೂನು ಬಾಹಿರ ಮತ್ತು ಕೊಲೆಗೆ ಪ್ರಚೋದನೆ ನೀಡಿ ಸಂಚು ರೂಪಿಸಿರುವ ಹೇಳಿಕೆ ಇದಾಗಿದೆ, ಇದರಿಂದ ನಮ್ಮ ದೇಶದ ಪ್ರಧಾನಿಗಳಿಗೆ ಇವರಿಂದ ಪ್ರಾಣ ಬೆದರಿಕೆ ಹಾಕಿ ಪ್ರಚೋದನೆ ನೀಡಿರುವ ಇವರನ್ನು ಕೂಡಲೇ ಪೋಲೀಸರು ಗೂಂಡಾ ಕಾಯ್ದೆಯಡಿ ಇವರನ್ನು ಬಂಧಿಸಿ ಜೈಲಿಗೆ ಬಿಡಬೇಕು. ಎಂದು ಪ್ರಭಾಕರ ಒತ್ತಾಯಿಸಿದರು.
ಇಂತಹ ಸಮಾಜ ಘಾತುಕ ಹೇಳಿಕೆಗಳಿಂದ ನಮ್ಮ ಸಮಾಜದಲ್ಲಿ ಅಶಾಂತಿ ಮೂಡುವುದು ಅಲ್ಲದೆ ಜಾತಿ ಜಾತಿಗಳ ನಡುವೆ ಪಕ್ಷ ಪಕ್ಷಗಳ ನಡುವೆ ವೈರತ್ವಕ್ಕೆ ಕಾರಣವಾಗುವಂತ ಹೇಳಿಕೆ ಇದಾಗಿದೆ, ಸಮಾಜದಲ್ಲಿ ದ್ವೇಷ ಅಸೂಯೆ ಅಶಾಂತಿ ಮೂಡಿಸುವುದೇ ಈತನ ಉದ್ದೇಶವಾಗಿದೆ, ಈ ವ್ಯಕ್ತಿ ಕೇವಲ ಪ್ರಚಾರದ ಹಮಲಿನಿಂದ ಮಾತನಾಡುವ ಹವ್ಯಾಸ ಹೊಂದಿದ್ದಾರೆ, ಇತ್ತೀಚಿಗೆ ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರ ಮೇಲೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ ಹಾಗು ಲೋಕಸಭಾ ಸದಸ್ಯರಾದ ಕು||ಶೋಭಕರಂದ್ಲಾಜೆ ಅವರ ವಿರುದ್ದವೂ ಕೂಡಾ ಹೇಳಿಕೆ ನೀಡಿದ್ದನ್ನು ಕೂಡಾ ನೋಡಬಹುದಾಗಿದೆ, ಈತನ ಮನಸ್ಸು ಸ್ಥಿಮಿತದಲ್ಲಿ ಇಲ್ಲದೆ ಇರುವುದು ಇದರಿಂದ ಕಂಡು ಬರುತ್ತಿದೆ. ನಮ್ಮ ಸಮಾಜ ಸದಾ ಶಾಂತಿ ಸುವ್ಯವಸ್ಥೆಯಿಂದ ಇರಬೇಕಾದರೆ ಇಂತಹ ಕೀಳು ಮನಸ್ಸಿನ ವ್ಯಕ್ತಿಗಳನ್ನು ಹದ್ದುಬಸ್ತಿನಲ್ಲಿ ಇಡಬೇಕು ಈ ನಿಟ್ಟಿನಲ್ಲಿ ಪೋಲೀಸರು ತಕ್ಷಣ ಕ್ರಮ ಜರುಗಿಸಬೇಕು ಎಂದು ಪ್ರಭಾಕರ ಒತ್ತಾಯಿಸಿದರು.
ದೂರಿನ ಪ್ರತಿಯನ್ನು ಮಾನ್ಯ ಗೃಹ ಮಂತ್ರಿಗಳು ಭಾರತ ಸರ್ಕಾರ, ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಹಾಗೂ ಪೋಲೀಸ್ ಮಹಾನಿರ್ದೇಶಕರು ಕರ್ನಾಟಕ ಸರ್ಕಾರ ಇವಗೂ ಕೂಡಾ ಕ್ರಮಕ್ಕಾಗಿ ಇ ಮೇಲ್ ಮೂಲಕ ರವಾನಿಸಲಾಗಿದೆ ಎಂದು ಪ್ರಭಾಕರ ತಿಳಿಸಿದರು.