ತಿಪಟೂರು:

      ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡ್ರಾಮಾ ಜ್ಯೂನಿಯರ್ಸ್ ಸೀಜನ್ -3ರ ಗ್ರ್ಯಾಂಡ್ ಫಿನಾಲೆ ಮಾ.9 ರಂದು ಸಂಜೆ 6 ಗಂಟೆಗೆ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜು ಅವರ ಹುಟ್ಟೂರು ತಿಪ ಟೂರಿನ ಕಲ್ಪತರು ಕ್ರೀಡಾಂಗಣ ದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

      ಕೇವಲ ರಂಗಭೂಮಿಯ ನಾಟಕಕ್ಕೆ ಸೀಮಿತವಾಗದೆ 1 ರಿಂದ 10ನೇ ತರಗತಿಯ ಮಕ್ಕಳ ಪಠ್ಯ ವಿಷಯಗಳನ್ನು ನಾಟಕಕ್ಕೆ ಅಳವಡಿಸಿಕೊಂಡು ಅಭಿನಯಿಸಿರುವುದು ಈ ಸೀಜನ್‍ನ ವಿಶೇಷ ಎಂದಿದ್ದಾರೆ.

      ಡ್ರಾಮಾ ಜೀನಿಯರ್ಸ್ ಪುಟಾಣೆಗಳ ಮನರಂಜನೆ ಜೊತೆ ನೃತ್ಯ ಪ್ರದರ್ಶನ ಹಾಗೂ ಸರಿಗಮಪ ರಿಯಾ ಲಿಟಿ ಶೋ ವಿಜೇತರಾದ ಕೀರ್ತನ್ ಹೊಳ್ಳ ಹಾಗೂ ಹನುಮಂತಣ್ಣ ಇವರಿಂದ ಗಾಯನ ಕಾರ್ಯಕ್ರಮ ಇದ್ದು ತೀರ್ಪುಗಾರರಾದ ನಟಿ ಲಕ್ಷ್ಮಿ, ನಟರಾದ ಮುಖ್ಯ ಮಂತ್ರಿ ಚಂದ್ರು, ವಿಜಯ ರಾಘವೇಂದ್ರ, ನಿರೂಪಕ ಮಾ.ಆನಂದ್ ಈ ಕಾರ್ಯ ಕ್ರಮದಲ್ಲಿ ಭಾಗವಹಿಸುವರು.

      ಮಾ.8 ರಂದು 4 ಗಂಟೆಗೆ ಕ್ರೀಡಾಂಗಣದಲ್ಲಿ ಉಚಿತ ಪಾಸುಗಳು ದೊರೆಯಲಿದ್ದು ಮೊದಲು ಬಂದವರಿಗೆ ಆಧ್ಯತೆ ನೀಡಲಾಗುವುದು.

(Visited 20 times, 1 visits today)