ಕೊರಟಗೆರೆ :
ಮತದಾನ ನಮ್ಮ ಹಕ್ಕು ಯಾರು ಮರೆಯಬಾರದು ಉತ್ತಮ ಸಮಾಜನಿರ್ಮಾಣಕ್ಕಾಗಿ ಯೋಗ್ಯ ಅಭ್ಯüರ್ಥಿಯನ್ನು ಆರಿಸಬೇಕು ಯಾವುದೇ ಅಸೆ, ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಮತ ಚಲಾಯಿಸಬೇಕು, ಪ್ರಜಾಪ್ರಭುತ್ವ ಬಲಪಡಿಸಲು ಮತದಾನ ಅತ್ಯತ್ತಮ ಅವಕಾಶವಾಗಿದೆ ಎಂದು ತಾ.ಪಂ. ಕಾರ್ಯನಿರ್ನಹಣಾದಿಕಾರಿ ಶಿವಪ್ರಕಾಶ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗದ ಬಸ್ ನಿಲ್ದಾಣದಲ್ಲಿ ಭಾರತ ಚುನಾವಣಾ ಆಯೋಗ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ಚಲಾಯಿಸಲು ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮತದಾರರಿಗೆ ಅರಿವು ಎವಿಎಂ-ವಿವಿಪ್ಯಾಡ್ ಬಗ್ಗೆ ಪ್ರಾತ್ಯಕ್ಷಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಬ್ಬದಂತಾಗಬೇಕು, ಕುಟುಂಬ ಸಮೇತ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತ ಚಲಾಯಿಸಬೇಕು, ಯಾರೋಬ್ಬರೂ ಕೂಡ ಮತದಾನದಿಂದ ವಂಚಿತರಾಗಬಾರದು, ಚುನಾವಣೆಯಲ್ಲಿ ಪಕ್ಷ, ವ್ಯಕ್ತಿ ಅನ್ನುವುದು ಮುಖ್ಯವಲ್ಲ ಎಂದು ಅವರು 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು,
ಸಹಾಯಕ ಚುನಾವಣಾದಿಕಾರಿ ಕಾಂತರಾಜು ಮಾತನಾಡಿ ಮತದಾನ ಹಕ್ಕು ಸಂವಿಧಾನಾತ್ಮಕವಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ದೊರೆತಿದೆ, ಪ್ರತಿನಿದಿಗಳನ್ನು ಚುನಾವಣೆ ಗಳ ಮೂಲಕ ಆಯ್ಕೆ ಮಾಡುವಾಗ ಹಣ ಅಧವಾ ಬೇರೆ ಯಾವುದೇ ಆಮೀಷಕ್ಕೆ ಒಳಗಾಗದೇ ನೈತಿಕವಾಗಿ ಮಾತದಾನ ಮಾಡಬೇಕು, ಮತದಾರರ ಚೀಟಿ ಹೊಂದಿರುವ ಎಲ್ಲರೂ ಮತ ಚಲಾಯಿಸುವ ಮೂಲಕ ಒಳ್ಳೆಯ ಜನಪ್ರತಿನಿದಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗಿದ್ದು ಇದು ಚುನಾವಣಾ ಆಯೋಗದ ಗುರಿ ಸಹ ಇದೇ ಆಗಿದೆ ಎಂದು ತಿಳಿಸಿದರು.
ಸ್ವೀಪ್ ಸಮಿತಿ ಪಟ್ಟಣದ ಪಟ್ಟಣ ಪಂಚಾಯಿತಿ ಸೇರಿದಂತೆ ಸಂತೆಮೈದಾನದ, ಕೋಟೆಬೀದಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ವಿವಿಧ ಸ್ಥಳಗಳಲ್ಲಿ ಮತದಾನದ ಎವಿಎಂ-ವಿವಿಪ್ಯಾಡ್ ಪ್ರಾತ್ಯಕ್ಷಿತ ಕಾರ್ಯಕ್ರಮ ನಡೆಸಿ ತಮದಾರರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಬದಲ್ಲಿ ಪ.ಪಂ ಮುಖ್ಯಾದಿಕಾರಿ ಲಕ್ಷ್ಮಣ್‍ಕುಮಾರ್, ಕೆ.ಆರ್.ರಾಘವೇಂದ್ರ, ಸುನಿಲ್‍ಕುಮಾರ್, ಪ.ಪಂ.ಆರೋಗ್ಯಾದಿಕಾರಿ ರೈಸ್ ಅಹಮದ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಘು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.