ತುಮಕೂರು:

     ತುಮಕೂರು ಲೋಕಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದಲ್ಲಿ ಗಮನಸೆಳೆಯುತ್ತಿದೆ. ಕಾರಣ ಜೆಡಿಎಸ್ ನ ವರಿಷ್ಠ ಹೆಚ್.ಡಿ.ದೇವೆಗೌಡರು ತುಮಕೂರಿನಿಂದ ಆಯ್ಕೆ ಬಯಸಿ ಸ್ಪರ್ಧೆ ಗಿಳಿದಿರುವುದು ಒಕ್ಕಲಿಗರ ಪರಮೋಚ್ಛ ನಾಯಕನೆಂದು ಬಿಂಬಿತವಾಗಿರುವ ದೇವೆಗೌಡರು ತನ್ನ ಕುಟುಂಬ ರಾಜಕಾರಣದಿಂದಲೇ ಹೆಸರುವಾಸಿಯಾದವರು.

      ತನ್ನ ಮೊಮ್ಮಕ್ಕಳಿಗಾಗಿ ಕ್ಷೇತ್ರ ಬಿಟ್ಟು ತುಮಕೂರಿನಲ್ಲಿ ಸ್ಪರ್ಧೆಗಿಳಿದಿರುವ ದೊಡ್ಡ ಗೌಡರು ಸ್ಥಳೀಯ ಜೆಡಿಎಸ್ ನಾಯಕರ ಹಾಗೂ ಮುಖಂಡರ ಆಂತರಿಕ ಕ್ರೋದಾಗ್ನಿಗೆ ತುತ್ತಾಗಿಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾರಣ ಗೌಡರು ಇಲ್ಲಿ ಆಯ್ಕೆಯಾಗಿಬಿಟ್ಟರೆ ಹಾಸನದ ರಾಜಕಾರಣದ ರೀತಿಯಲ್ಲಿ ಹಿಡಿತ ಸಾಧಿಸುತ್ತಾರೆ, ಸ್ಥಳೀಯ ನಾಯಕರಿಗೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ ದೇವೆಗೌಡರ ಸ್ಪರ್ಧೆಯಿಂದ ಬೇಸತ್ತಿರುವ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಉಳಿವಿಗಾಗಿ ಹಾಗೂ ತಮ್ಮ ಮುಂದಿನ ರಾಜಕೀಯ ಅಸ್ತಿತ್ವಕ್ಕಾಗಿ ಚಿಂತಸುವ ಅನಿವಾರ್ಯತೆ ಎದುರಾಗಿದೆ.

      ರಾಜ್ಯ ಕಾಂಗ್ರೆಸ್ ನಾಯಕರ ಮೈತ್ರಿ ಸ್ಥಳೀಯ ಮುಖಂಡರ ಆಂತರಿಕ ವೈಶಮ್ಯಗಳನ್ನು ಶಮನ ಮಾಡಲು ಸಾಧ್ಯವಿಲ್ಲ ಆದ್ದರಿಂದ ಮೇಲ್ನೋಟಕ್ಕೆ ಮಾತ್ರ ಹಾಗಿದ್ದೇವೆ ಎನ್ನುವವರೇ ಹೆಚ್ಚು ಒಕ್ಕಲಿಗರ ಪರಮೋಚ್ಚ ನಾಯಕ ದೇವೆಗೌಡರು ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯರವರನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಹೊರಟಿದ್ದರು ಎಂದು ರಾಜ್ಯವ್ಯಾಪಿ ಗೌಡರ ವಿರುದ್ದ ಕುರುಬ ಸಮುದಾಯ ಕೆಂಡಾಮಂಡಲವಾಗಿತ್ತು. ನಂತರದ ದಿನಗಳಲ್ಲಿ ಜೆಡಿಎಸ್ ವಿರುದ್ದವಾಗಿ ತಮ್ಮ ನಿಲುವು ವ್ಯಕ್ತಪಡಿಸುತ್ತಿತ್ತು ಆದರೆ ಇದೀಗ ಜಿಲ್ಲೆಯಲ್ಲಿದ್ದ ಸಮುದಾಯದ ಏಕೈಕ ನಾಯಕ ಸಿ.ಬಿ.ಸುರೇಶ್ ಬಾಬು ರವರನ್ನು ಪಕ್ಷಕ್ಕಾಗಿ ದುಡಿಸಿಕೊಂಡು ಅಧಿಕಾರದಲ್ಲಿದ್ದು ತಿರಸ್ಕಾರ ಮಾಡಿದ್ದಾರೆ. ಹಾಗೂ ಅವರಿಗೆ ತಕ್ಕ ಸ್ಥಾನಮಾನ ನೀಡಿಲ್ಲ. ಎಂಪಿ ಟಿಕೇಟ್ ನೀಡುತ್ತೆವೆ ಎಂದು ಹೇಳಿ ಗೌಡರೇ ಬಂದದ್ದು ಮತ್ತೆ ಕುರುಬರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

      ಕಳೆದ ಲೋಕಸಭಾ ಚುನಾವಣೆಯಲ್ಲಿ ಗೊಲ್ಲ ಸಮುದಾಯದ ಕೃಷ್ಣಪ್ಪ ರವರನ್ನು ಕಣಕ್ಕಿಳಿಸಿದ ದೇವೆಗೌಡರು ಅವರ ಸಾವಿಗೆ ಕಾರಣರಾದರು ಎಂದು ಬಿಜೆಪಿ ಆಪಾದಿಸುತ್ತಿದೆ. ಜೆಡಿಎಸ್ ನಿಂದ ಸ್ಪರ್ಧಿಸಿರುವುದು ಗೊಲ್ಲ ಸಮುದಾಯದ ಕೃಷ್ಣಪ್ಪ ಎಂದು ತಿಳಿದು ಪಕ್ಷವನ್ನು ಮರೆತ ಒಕ್ಕಲಿಗ ಸಮುದಾಯ ಕಾಂಗ್ರೆಸ್ ನ ಮುದ್ದಹನುಮೇಗೌಡರನ್ನ ಬೆಂಬಲಿಸುವ ಮೂಲಕ ಹಿಂದುಳಿದ ವರ್ಗದ ಗೊಲ್ಲ ಸಮುದಾಯವನ್ನು ತುಳಿದು ತಾತ್ಸಾರದಿಂದ ನೋಡಿತ್ತು. ಇದರಿಂದ ಕೃಷ್ಣಪ್ಪ ಮನನೊಂದಿದ್ದರು. ಚುನಾವಣೆಯ ತೀರ್ಪು ಬರುವ ಮುನ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತನ್ನ ಸಮುದಾಯದ ನಾಯಕನ ಸೋಲು ಮತ್ತು ಸಾವಿಗೆ ಒಕ್ಕಲಿಗರು ಕಾರಣ ಎಂದು ಜೆಡಿಎಸ್‍ನ ವಿರುದ್ದ ಕಿಡಿಕಾರಿದ ಯಾದವ ಸಮುದಾಯದ ಮುಖಂಡರು ಮುಂಬರುವ ದಿನಗಳಲ್ಲಿ ಜೆಡಿಎಸ್ ವಿರುದ್ದ ಮತಚಲಾಯಿಸುವ ನಿರ್ಧಾರವನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಕೈಗೊಂಡಿದ್ದರು. ಆದರೆ ಗೌಡರ ಸ್ಪರ್ಧೆ ಯಾದವರ ಸೇಡಿಗೆ ಕಾರಣವಾಗಬಹುದು ಎಂದು ಗೌಡರ ವಿರೋಧಿ ಪಡೆ ಲೆಕ್ಕಾಚಾರ ಹಾಕಿದೆ.

     ಕುರುಬ ಸಮುದಾಯ ಹಾಗೂ ಗೊಲ್ಲ ಸಮುದಾಯದ ನಿರ್ಣಾಯಕ ಮತಗಳು ಗೌಡರ ವಿರುದ್ದ ತಿರುಗಿಬೀಳುವ ಸಾಧ್ಯತೆಯಿರುವ ಕಾರಣ ಅದನ್ನು ಸರಿಪಡಿಸುವ ಪ್ರಯತ್ನಗಳು ವಿಫಲಗೊಂಡಿವೆ. ಹಿಂದುಳಿದ ವರ್ಗಗಳ ಅಪ್ಪುಗೆ ಸಾಧ್ಯವಿಲ್ಲದ ಕಾರಣ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಕಡಿಮೆ ಅಂತರದಲ್ಲಿ ಸೋತಿರುವ ಅಭ್ಯರ್ಥಿಗಳು ಬಹುತೇಕ ಪಾವಗಡದ ತಿಮ್ಮರಾಯಪ್ಪ, ಕೊರಟಗೆರೆಯ ಸುಧಾಕರ್ ಲಾಲ್, ಚಿಕ್ಕನಾಯಕನಹಳ್ಳಿ ಸುರೇಶ್ ಬಾಬು, ವಕ್ಕಲಿಗರ ಮತಗಳಿಂದ ವಂಚನೆಗೆ ಬಲಿಯಾದವರು. ಇದನ್ನು ಗಮನಿಸಿದ ಸಮುದಾಯಗಳು ಈ ಭಾರಿ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತವೆ.

(Visited 13 times, 1 visits today)