ತುಮಕೂರು :
ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ದೇವೇಗೌಡರಿಗೆ ನೀಡಿದ ಹಿನ್ನೆಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.
ಹೌದು, ಇತ್ತೀಚೆಗೆ ಪರಮೇಶ್ವರ್ ಬಲಗೈ ಬಂಟ ಬಲರಾಮಯ್ಯ ಮನೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ಪಕ್ಷದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ರೊಚ್ಚಿಗೆದ್ದಿದ್ದರು, ಹಾಗೂ ಮುದ್ದಹನುಮೇಗೌಡರಿಗೆ ಯಾವುದೇ ಕಾರಣಕ್ಕೂ ವಾಪಾಸ್ ತೆಗೆಯಬಾರದೆಂಬ ಬೇಡಿಕೆಯನ್ನೂ ಸಹ ಕಾರ್ಯಕರ್ತರು ಇಟ್ಟಿದ್ದರು. ಇದಾದ ಬಳಿಕ ಮುದ್ದಹನುಮೇಗೌಡರಿಗೆ ಬಿಫಾರಂ ನೀಡದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಾವಿರಾರು ಬೆಂಬಲಿಗರೊಂದಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ಮೈತ್ರಿ ಅಭ್ಯರ್ಥಿಯಾದ ದೇವೇಗೌಡರ ಉಮೇದುವಾರಿಕೆ ಸಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿತ್ತು. ಅದೇ ಮುದ್ದಹನುಮೇಗೌಡರ ಮೆರವಣಿಗೆಯಲ್ಲಿ ಕೊರಟಗೆರೆ ಕ್ಷೇತ್ರದ ಸಾವಿರಾರು ಮುಖಂಡರು ಆಗಮಿಸುವ ಮೂಲಕ ಪರಮೇಶ್ವರ್ ರವರಿಗೆ ನಾವು ಪಕ್ಷ ಬಿಟ್ಟು ಬೇರೆಯವರಿಗೆ ಮತ ನೀಡುವುದಿಲ್ಲಾ ಎಂಬ ಸಂದೇಶ ನೀಡಿದಂತಾಗಿದೆ. ಇದೆಲ್ಲವನ್ನೂ ಗಮನಿಸಿದಾಗ ನಿಷ್ಠಾವಂತ ಕಾರ್ಯಕರ್ತನ ಮನಸ್ಸಲ್ಲಿ ಪರಮೇಶ್ವರ್ ಮರೆಯಾಗುತ್ತಿದ್ದಾರಾ..? ಅಥವಾ ಅವರೇ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಓಟ್ ಹಾಕಿ ಎನ್ನುವಾಗ ಕಾರ್ಯಕರ್ತರು ಈ ಮಾತನ್ನ ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಾಗಿದೆ.
ದೇವೇಗೌಡರ ಮೈತ್ರಿಯಿಂದಾಗಿ ಕಾರ್ಯಕರ್ತರಲ್ಲಿ ಗೊಂದಲ ನಿರ್ಮಾಣ ಮಾಡಿದಂತಿದೆ. ಒಟ್ಟಾರೆ ಈ ಚುನಾವಣೆಯಲ್ಲಿ ದೇವೇಗೌಡರು ಗೆದ್ದರೆ ಪರಮೇಶ್ವರ್ ರವರ ಅಸ್ಥಿತ್ವಕ್ಕೂ ಮುಂದೆ ವಿದಾನಸಭೆಯಲ್ಲಿ ಕುತ್ತು ಬರುತ್ತದೆ. ಆದ್ದರಿಂದ ನಮ್ಮ ಪಕ್ಷ ಉಳಿಸಲು ನಾವುಗಳು ಪಣತೊಟ್ಟಿದ್ದೇವೆ. ಊರುಗಳಲ್ಲಿ ನಮ್ಮಗಳ ಎದುರಿಗೆ ತೊಡೆ ತಟ್ಟಿದ ಜೆಡಿಎಸ್ ರವರೊಂದಿಗೆ ಎಂದಿಗೂ ನಾವು ಮೈತ್ರಿ ಮಾಡಿಕೊಳ್ಳೋದಿಲ್ಲಾ…. ಪಕ್ಷದ ಉಳಿವಿಗಾಗಿ ನಾಯಕರ ಮಾತನ್ನು ಕೂಡಾ ನಾವು ದಿಕ್ಕರಿಸಲು ಸಿದ್ದ ಎನ್ನುತ್ತಾರೆ ಕಾರ್ಯಕರ್ತರು.
ಒಟ್ಟಿನಲ್ಲಿ ಈ ಚುನಾವಣೆ ಮೈತ್ರಿ ಪರಮೇಶ್ವರ್ ರವರ ವಿಧಾನಸಭೆಗೆ ತೊಂದರೆಯಾಗಬಹುದೆಂದು, ಗೃಹ ಖಾತೆ ಕಿತ್ತುಕೊಂಡ್ರು, ಈಗ ಎಂಪಿ ಯನ್ನೂ ಕಿತ್ತುಕೊಂಡ್ರು ಇನ್ನು ಉಳಿದಿರೋದು ಕ್ಷೇತ್ರ ಮಾತ್ರ. ಈ ಮೈತ್ರಿ ಹೀಗೆ ಮುಂದುವರೆದರೆ ನಾಳೆ ಕ್ಷೇತ್ರದ ಟಿಕೆಟ್ ಗಾಗಿ ಕೂಡಾ ಅವರು ತೊಂದರೆ ಅನುಭವಿಸುವಂತಾಗುತ್ತದೆ. ಆದುದರಿಂದ ಪಕ್ಷ ಉಳಿಯಲು, ಪರಮೇಶ್ವರ್ ಉಳಿಯಲು ಈ ನಮ್ಮ ನಿರ್ಧಾರ ವೆಂದು ಕಾರ್ಯಕರ್ತರು ಹೇಳುತ್ತಾರೆ.