ತುರುವೇಕೆರೆ:

      ತುಮಕೂರು ಲೋಕಸಭಾ ಚುನಾವಣೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಏ.18 ರಂದು ಗುರುವಾರ ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಎಲ್ಲ ರೀತಿಯ ಸಕಲ ಸಿದ್ದತೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ.ಶಶಿಧರ್ ತಿಳಿಸಿದ್ದಾರೆ.

      ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತಘಟ್ಟೆಗೆ ಮತಯಂತ್ರ ಸಾಗಣೆ ಕೇಂದ್ರದಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ 229 ಮತಘಟ್ಟೆಗಳನ್ನು ಸ್ಥಾಪಿಸಲಾಗಿದ್ದು ಒಂದು ಮತಘಟ್ಟೆಗೆ ಪೋಲೀಸ್ ಹಾಗೂ 4 ಸಿಬ್ಬಂದಿಗಳು ನಿಯೋಜಿಸಲಾಗಿದೆ. 10 ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸಲಾಗಿದೆ.

      ಕ್ಷೇತ್ರದಲ್ಲಿ 177988 ಮತದಾರರಿದ್ದು 89446 ಪುರುಷರು, 88535 ಮಹಿಳೆಯರು, 7 ಇತರೆ ಮತದಾರರು ಹೊಂದಿದ್ದು. 30 ಮಾರ್ಗಗಳನ್ನು ಮಾಡಿದ್ದು ಚುನಾವಣೆ ಸಿಬ್ಬಂದಿ ಮತಘಟ್ಟೆಗೆ ತೆರಳಲು 50ಕ್ಕೂ ಹೆಚ್ಚು ವಾಹನಗಳನ್ನು ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಭಯವಿಲ್ಲದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಬದಲ್ಲಿ ತಹಶೀಲ್ದಾರ್ ನಯೀಂಉನ್ನಿಸಾ ಇದ್ದರು.

(Visited 13 times, 1 visits today)