ಕೊರಟಗೆರೆ:
ದ್ವಿಚಕ್ರ ವಾಹನವೊಂದು ರಸ್ತೆ ಬದಿ ಚಲಿಸುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊರಟಗೆರೆ ಪಟ್ಟಣದ ಜೆಟ್ಟಿಅಗ್ರಹಾರ ರಸ್ತೆ ಬಳಿ ನಡೆದಿದೆ.
ಜೆಟ್ಟಿ ಅಗ್ರಹಾರ ಗ್ರಾಮದ ವಾಸಿ ನರಸಿಂಹಯ್ಯ(60) ಮೃತಪಟ್ಟ ದುದೈವಿ. ಇವರು ಕೈಮರದ ಆಶ್ರಮಕ್ಕೆ ಭೇಟಿ ನೀಡಿ ಮರಳಿ ನಡೆದುಕೊಂಡು ಮನೆಗೆ ಬರುತ್ತಿರುವ ವೇಳೆ ಪಾದಚಾರಿಗೆ ದ್ವೀಚಕ್ರ ವಾಹನ ಏಕಾಏಕಿ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಅಜ್ಜಿಹಳ್ಳಿ ಗ್ರಾಮದ ವಾಸಿಯಾದ ದ್ವಿಚಕ್ರ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತ ನಡೆದ ಸ್ಥಳಕ್ಕೆ ಕೊರಟಗೆರೆ ಆರಕ್ಷಕ ಉಪನೀರಿಕ್ಷಕ ಮಂಜುನಾಥ ಭೇಟಿ ಪರಿಶೀಲನೆ ನಡೆಸಿದ್ದು, ಕೊರಟಗೆರೆ ಪೆÇಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
(Visited 19 times, 1 visits today)