ನವದೆಹಲಿ:
ಅಕ್ಟೋಬರ್ನಲ್ಲಿ ಒಟ್ಟು 67.45 ಲಕ್ಷ ವ್ಯಾಪಾರಸ್ಥರು ಜಿಎಸ್ಟಿ ರಿಟರ್ನ್ಸ್ ಸಲ್ಲಿಸಿದ್ದು, 1,00,710 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಹೇಳಿದೆ.
ತೆರಿಗೆ ವಂಚನೆಗೆ ಅಂಕುಶ, ಹಲವು ವಸ್ತುಗಳ ತೆರಿಗೆ ಇಳಿಕೆ, ದೇಶಾದ್ಯಂತ ಏಕ ತೆರಿಗೆ ಜತೆಗೆ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಲಗಾಮು ಹಾಕಲಾದ ಕಾರಣ ಜಿಎಸ್ಟಿ ಸಂಗ್ರಹ ಕೋಟಿ ಲಕ್ಷ ದಾಟಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ ಜಿಎಸ್ಟಿ ಸಂಗ್ರಹದಲ್ಲಿ ಕೇರಳ ಅಸಾಧಾರಣ ಬೆಳವಣಿಗೆ (ಶೇ. 44) ದಾಖಲಿಸಿದೆ. ರಾಜಸ್ಥಾನದಲ್ಲಿ ಸಂಗ್ರಹ ಶೇ. 14 ಏರಿಕೆ ಕಂಡರೆ, ಉತ್ತರಾಖಂಡದಲ್ಲಿ ಶೇ. 13 ಮತ್ತು ಮಹಾರಾಷ್ಟ್ರದಲ್ಲಿ ಶೇ. 11 ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಲಕ್ಷ ಕೋಟಿ ರೂ. ಜಿಎಸ್ಟಿಯಲ್ಲಿ ಕೇಂದ್ರ ತೆರಿಗೆ 16,464 ಕೋಟಿ ರೂ., ರಾಜ್ಯ ತೆರಿಗೆ 22,826 ಕೋಟಿ ರೂ., ಐಜಿಎಸ್ಟಿ 53,419 ಕೋಟಿ ರೂ. ಮತ್ತು 8 ಸಾವಿರ ರೂ. ಸೆಸ್ ಸೇರಿದೆ.
ಐದು ತಿಂಗಳ ಬಳಿಕ ಮತ್ತೊಮ್ಮೆ ಮಾಸಿಕ ಜಿಎಸ್ಟಿ ಸಂಗ್ರಹ 1 ಲಕ್ಷ ಕೋಟಿ ರೂ. ಗಡಿ ದಾಟಿದೆ. ಕಳೆದ ಏಪ್ರಿಲ್ನಲ್ಲಿ 1.03 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು.