ಕೊರಟಗೆರೆ:
ಬಿರುಗಾಳಿಯ ರಭಸಕ್ಕೆ ರೈತನು ಕಷ್ಟಪಟ್ಟು ಬೆಳೆದಿದ್ದ ಬಾಳೆ ತೊಟ ಮತ್ತು ಇಬ್ಬರು ರೈತರ ಮನೆಯ ಮೇಲಿನ 30ಕ್ಕೂ ಹೆಚ್ಚು ಸೀಟುಗಳು ಅರ್ಧ ಕೀಮೀ ದೂರಕ್ಕೆ ಹೋಗುವ ಮೂಲಕ ವಿದ್ಯುತ್ ತಂತಿ ತುಂಡಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ದುಗ್ಗೇನಹಳ್ಳಿ ಗ್ರಾಮದ ರೈತ ಡಕ್ಲಾರಾಂ ಎಂಬುವರ 2ಎಕರೇ ಬಾಳೆ ತೋಟದಲ್ಲಿ 1ಸಾವಿರಕ್ಕೂ ಹೆಚ್ಚು ಬಾಳೆಗಿಡಗಳು ಬಿರುಗಾಳಿಯಿಂದ ನಾಶವಾಗಿ 60ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಇದೇ ಗ್ರಾಮದ ಸಿದ್ದಪ್ಪ ಎಂಬುವರ ಮನೆಯ 15ಶೀಟ್‍ಗಳು ಗಾಳಿಗೆ ಹಾರಿಹೋಗಿವೆ. ರೈತನಿಗೆ ವಾಸಿಸಲು ಮನೆಯಿಲ್ಲದೇ ಕಂಗಲಾಗಿದ್ದಾನೆ.
ದುಗ್ಗೇನಹಳ್ಳಿ ಗ್ರಾಮದ ಮತ್ತೋರ್ವ ರೈತ ಮೋಹನ ಎಂಬುವರ ತೋಟದ ಸಮೀಪದ ಜಾನುವಾರುಗಳ ಶೇಡ್‍ನ 15ಅಡಿ ಉದ್ದದ 20ಶೀಟ್‍ಗಳು ಅರ್ಧ ಕೀಮೀ ದೂರಕ್ಕೆ ಹಾರಿಹೋಗಿವೆ. ಬಿರುಸಿನ ಬಿರುಗಾಳಿಗೆ ಶೀಟ್‍ಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದರ ಭಸಕ್ಕೆ ವಿದ್ಯುತ್ ತಂತಿಗಳು ತುಂಡಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ಮಂಗಳವಾರ ಸಂಜೆ ಬಿಸಿದ ಬಿರುಗಾಳಿಗೆ ಬಾಳೆಗಿಡ ಮತ್ತುರೈತರ ಮನೆಯ ಮೇಲ್ಚಾಣಿಯು ಹಾರಿಹೋಗಿದ್ದು ರೈತರಿಗೆ ಬೇರೆ ಮನೆಯಿಲ್ಲದೇ ಕಂಗಲಾಗಿದ್ದಾರೆ. ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರದಿಂದ ಬರುವಂತಹ ಪರಿಹಾರದ ಹಣವನ್ನು ಕೊಡಿಸುವಂತೆ ರೈತರು ಮನವಿ ಮಾಡಿದ್ದಾರೆ.