ತುಮಕೂರು:
ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 121 ಪ್ರಕರಣಗಳ ಪೈಕಿ 65 ಪ್ರಕರಣಗಳಲ್ಲಿ ಲೈಸನ್ಸ್‍ಗಳನ್ನು ರದ್ದುಗೊಳಿಸಲಾಗಿದೆ. ಬಾರ್/ ವೈನ್ಸ್ ಅಂಗಡಿಗಳಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸಿಕೊಂಡು ಬರುವವರ ಮೇಲೆ ನಿಗಾವಹಿಸಬೇಕು. ಅಲ್ಲದೆ ಹೆಚ್ಚು ವ್ಯಾಪಾರವಾಗುವ ಬಾರ್‍ಗಳ ಮೇಲೂ ನಿಗಾವಹಿಸಿ ಈ ಬಗ್ಗೆ ವರದಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಅಬಕಾರಿ ಇಲಾಖೆಯ ಡಿಸಿ ಅವರಿಗೆ ಸೂಚನೆ ನೀಡಿದರು.
ರಸ್ತೆ ನಿಯಮಗಳು, ರಸ್ತೆಯ ಸುರಕ್ಷತೆ, ರಸ್ತೆ ಗುಂಡಿಗಳು, ಸ್ಪೀಡ್ ಬ್ರೇಕ್ ಅಳವಡಿಕೆ, ಸೈನ್‍ಬೋರ್ಡ್, ರಸ್ತೆ ರಿಪೇರಿ ಸೇರಿದಂತೆ ರಸ್ತೆಯ ಸುರಕ್ಷತೆಯ ಸುಧಾರಣೆಗೆ ದೀರ್ಘಕಾಲೀನ ಹಾಗೂ ಅಲ್ಪಕಾಲೀನ ಕ್ರಿಯಾ ಯೋಜನೆ ರೂಪಿಸಿ ಬರುವ 15ರೊಳಗೆ ಸಲ್ಲಿಸುವಂತೆ ಪೊಲೀಸ್, ಶಿಕ್ಷಣ ಇಲಾಖೆ, ಮಹಾ ನಗರಪಾಲಿಕೆ, ಲೋಕೋಪಯೋಗಿ, ಕೇಶಿಪ್, ಪಿ.ಆರ್.ಇ.ಡಿ. ಸೇರಿದಂತೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಇಲಾಖೆಗಳು ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಕೇರಳ ಮಾದರಿಯಲ್ಲಿ (ಪಿ.ಎಸ್.ಸಿ.) ವಿದ್ಯಾರ್ಥಿ ಮತ್ತು ಪೊಲೀಸರನ್ನು ಒಳಗೊಂಡ ತಂಡಗಳನ್ನು ರಚಿಸಿ ಸಾರಿಗೆ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು. ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ವಿಶೇಷ ಅಭಿಯಾನ ಆರಂಭಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತುಮಕೂರು ನಗರ ವಿಭಾಗದ ಡಿವೈಎಸ್‍ಪಿ ತಿಪ್ಪೇಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ಪೊಲೀಸ್, ಶಿಕ್ಷಣ ಇಲಾಖೆ, ಪಾಲಿಕೆ, ರೈಲ್ವೆ ಇಲಾಖೆಯ ಹಲವು ಅಧಿಕಾರಿಗಳು ಭಾಗವಹಿಸಿದ್ದರು.