ತುರುವೇಕೆರೆ:
ಪಟ್ಟಣದ ಮಹೇಶ್ ಟ್ರಾವೆಲ್ ಏಜೆನ್ಸಿಯಿಂದ ಅಂಡಮಾನ್ ಪ್ರವಾಸ ಹೋಗಿದ್ದ ತಾಲ್ಲೂಕಿನ ಕೆಲವರು ಪೋನಿಚಂಡಮಾರುತದಿಂದ ವಿಮಾನ ಹಾರಾಟ ಸ್ಥಗಿತವಾಗಿರುವ ಹಿನ್ನಲೆಯಲ್ಲಿ ಪ್ರವಾಸಿಗರು ತುರುವೇಕೆರೆಗೆ ಹಿಂತಿರುಗಲಾಗದ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಏ.29ರಂದು ಬೆಂಗಳೂರಿನಿಂದ ಸು.50 ಮಂದಿ ವಿಮಾನದಲ್ಲಿ ಅಂಡಮಾನ ದ್ವೀ ಫೋನಿ ಚಂಡಮಾರುತ : ವಿಮಾನ ಹಾರಾಟ ಸ್ಥಗಿತಗೊಂಡು ಊರಿಗೆ ಹಿಂತಿರುಗಲಾರದ ಸ್ಥಿತಿಯಲ್ಲಿ ಪ್ರಯಾಣಿಕರುಪಕ್ಕೆ ತೆರಳಿದ್ದರು ಇದರಲ್ಲಿ ರಂಗನಾಥ್ ಕುಟುಂಬ, ಶಂಕರ್‍ಶಾಮಿಲ್‍ನ ಬಾಲಕೃಷ್ಣ ಕುಟುಂಬ ಮತ್ತು ಕಾಚಿಹಳ್ಳಿ ಗರಡೇಶ್ವರಯ್ಯ ಸೇರಿದಂತೆ 14 ಮಂದಿ ತುರುವೇಕೆರೆಯವರಿದ್ದು ಇನ್ನುಳಿದವರು ಬೇರೆ ಜಿಲ್ಲೆಯವರೆಂದು ತಿಳಿದು ಬಂದಿದೆ.ಆರು ದಿನಗಳ ಪ್ರವಾಸ ಮುಗಿಸಿಕೊಂಡು ಮೇ.4ರಂದು ಮತ್ತೆ ಪ್ರವಾಸದಿಂದ ಹಿಂತಿರುಗಬೇಕಿತ್ತು. ಇದಕ್ಕಾಗಿ ಸ್ಪೈಸ್‍ಏರ್‍ಜೆಟ್ ವಿಮಾನವನ್ನು ಬುಕ್ ಮಾಡಲಾಗಿತ್ತು. ಆದರೆ ಪೋನಿ ಚಂಡಮಾರುತದ ಪ್ರತಿಕೂಲಹಮಾನದ ತೊಂದರೆಯಿಂದಾಗಿ ವಿಮಾನ ಹಾರಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಆಗಾಗಿ ಒಂದು ದಿನ ಎಲ್ಲಾ ಪ್ರವಾಸಿಗರೂ ಕೂಡ ಅಂಡಮಾನ್‍ನಲ್ಲಿಯೇ ಉಳಿದುಕೊಂಡಿದ್ದರು.ನಂತರ ಸ್ಪೈಸ್‍ಏರ್‍ಜೆಟ್ ವಿಮಾನದವರು ಮೇ5ರ ಭಾನುವಾರ 50 ಜನ ಪ್ರವಾಸಿಗರನ್ನೂ ಕಲ್ಕತ್ತಾಕೆ ಕರೆಯಿಸಿಕೊಂಡು ಅಲ್ಲಿನ ‘ಓಟು’ ಹೋಟೆಲ್‍ನಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಸೋಮವಾರ ಬೆಳಗ್ಗೆ ಕೆಲವರು ಡೆಲ್ಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವುದು ಇನ್ನೊಂದಷ್ಟು ಜನ ಪೂನಾ, ಬಾಂಬೆಯಿಂದ ಬೆಂಗಳೂರಿಗೆ ಬಂದು ತಲುಪಲು ವ್ಯವಸ್ಥೆ ಮಾಡಲಾಗಿದೆ. ಹಾಗು ಎಲ್ಲಾ ಪ್ರವಾಸಿಗರಿಗೂ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿದ್ದು ಶೀಘ್ರ ತುರುವೇಕೆರೆ ತಲುಪಲಿದ್ದೇವೆ ಎಂದು ಮಹೇಶ್ ಟ್ರಾವೆಲ್ ಏಜೆನ್ಸಿ ವ್ಯವಸ್ಥಾಪಕ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.