ಹುಳಿಯಾರು:
ಪಟ್ಟಣದ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ 63 ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ.ರಾಜ್ ಕುಮಾರ್ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಪಿಎಸ್‍ಐ ವಿಜಯಕುಮಾರ್ ಹೆಬ್ಬಾಗಿಲು ಉದ್ಘಾಟಿಸಿ ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಿಗರಲ್ಲಿ ಕನ್ನಡಾಭಿಮಾನ ಬೆಳೆಯುತ್ತಿದೆ. ರಾಜ್ಯೋತ್ಸವವೂ ಇಲ್ಲದಿದ್ದರೆ ಕನ್ನಡವೂ ಇಲ್ಲ ಅಭಿಮಾನವೂ ಇಲ್ಲ ಅನ್ನುವಂತಾಗುತ್ತಿತ್ತು. ನವೆಂಬರ್ ಮಾಹೆಯಲ್ಲಿ ಭಾಷೆ ಮೇಲೆ ಉಕ್ಕುವ ಪ್ರೀತಿ ವರ್ಷ ಪೂರ್ತಿ ಇದ್ದರೆ ಕನ್ನಡಕ್ಕೆ ಎಂದೆಂದೂ ಧಕ್ಕೆಯಾಗದು ಎಂದರಲ್ಲದೆ ಹುಳಿಯಾರಿನಲ್ಲಿ ಟೀ ಅಂಗಡಿ ಪರಪ್ಪ ಅವರಿಗಿರುವ ಕನ್ನಡಾಭಿಮಾನ ಇತರರಿಗೆ ಮಾಧರಿಯಾಗಿದೆ ಎಂದರಲ್ಲದೆ ರಾಜ್‍ಕುಮಾರ್ ಅಭಿಮಾನಿ ಬಳಗ ರಚಿಸಿಕೊಂಡು ದಾನಿಗಳ ನೆರವಿನಿಂದ ಹೆಬ್ಬಾಗಿಲು ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ.ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಪರಪ್ಪ, ಉಪಾಧ್ಯಕ್ಷ ಈರುಳ್ಳಿ ಹೊನ್ನಪ್ಪ, ಪರಮೇಶ್, ಕಂಪನಹಳ್ಳಿ ರಂಗಸ್ವಾಮಿ, ಅರ್ಚಕ ರಾಜಣ್ಣ, ಬಾಳೆಕಾಯಿ ಕಿಟ್ಟಪ್ಪ, ಹೆಚ್.ಎನ್.ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ, ವೆಂಕಟೇಶ್, ಟಿಪ್ಪು ಯುವಕ ಸಂಘದ ಮಹಮ್ಮದ್ ಅಪ್ಸರ್, ಬಿ.ವಿ.ಶ್ರೀನಿವಾಸ್, ಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ, ಏಜೆಂಟ್ ಚನ್ನಕೇಶವ, ಜಯ ಕರ್ನಾಟಕ ಸಂಘಟನೆಯ ಮೋಹನ್ ಕುಮಾರ್, ಶಿಕ್ಷಕ ನಂದಾವಡಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.