ತುಮಕೂರು:
ತುಮಕೂರು ನಗರ ಬೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಕೈಗೊಳ್ಳುವುದರಿಂದ ಜೂನ್ 1 ರಿಂದ 25ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಟಿಎಫ್10 ಹಾಗೂ 2 ಫೀಡರ್ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾಮಗಾರಿ ಕೈಗೊಂಡಿರುವುದರಿಂದ ಜೂನ್ 1, 2, 14 ಹಾಗೂ 24ರಂದು ಕುವೆಂಪು ನಗರ; ಜೂ.3, 12 ಹಾಗೂ 19ರಂದು ಬಿ.ಎ.ಗುಡಿಪಾಳ್ಯ; ಜೂ. 4 ಹಾಗೂ 17ರಂದು ಬಟವಾಡಿ; ಜೂನ್ 6, 8, 18 ಹಾಗೂ 20ರಂದು ಹನುಮಂತಪುರ; ಜೂ. 9ರಂದು ವಾಲ್ಮೀಕಿ ನಗರ: ಜೂ. 10 ಹಾಗೂ 25ರಂದು ಶಾರದಾದೇವಿ ನಗರ; ಜೂ. 11, 15 ಹಾಗೂ 21ರಂದು ವಿದ್ಯಾನಗರ; ಜೂ. 13ರಂದು ಬಿ.ಹೆಚ್.ರಸ್ತೆ; ಜೂ.16 ಹಾಗೂ 23ರಂದು ಕೆಎಸ್‍ಎಫ್‍ಸಿ ಕೈಗಾರಿಕಾ ಪ್ರದೇಶ; ಜೂ.22ರಂದು ಆದರ್ಶನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಸಿ.ಧನ್ಯಕುಮಾರ್ ಮನವಿ ಮಾಡಿದ್ದಾರೆ.