ತುರುವೇಕೆರೆ:

      ಚೀಟಿ ವ್ಯವಹಾರ ನೆಡೆಸುವ ಮೂಲಕ ಸಾರ್ವಜನಿಕರನ್ನು ವಂಚಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತುರುವೇಕೆರೆ ಪೋಲೀಸರು ನಾಲ್ವರು ಪುರುಷರನ್ನು ಹಾಗೂ ದಂಡಿನಶಿವರ ಠಾಣಾ ಪೋಲೀಸರು ಓರ್ವ ಮಹಿಳೆಯನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

      ತುರುವೇಕೆರೆ ಪಟ್ಟಣದಲ್ಲಿ ಗೊಂದಿ ಮಾರುತಿ ಜ್ಯೂಯಲರಿ ಹಾಗೂ ಟೆಕ್ಸ್‍ಟೈಲ್ಸ್ ಅಂಗಡಿಯನ್ನು ಮಂಜುನಾಥ್ ಎನ್ನುವರರು ತೆರೆದಿದ್ದರು. ಈ ವಿಳಾಸದಲ್ಲಿ ಗೋಲ್ಡ್ ಸ್ಕೀಂ ಹಾಗೂ ಚೀಟಿ ವ್ಯವಹಾರ ನೆಡೆಸುವ ಮೂಲಕ ಸಾರ್ವಜನಿಕರಿಂದ 2 ಕೋಟಿಗೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಕೆಲ ದಿನಗಳ ಹಿಂದೆ ರಾತ್ರೋ ರಾತ್ರಿ ಪರಾರಿಯಾಗಿದ್ದರು. ವಂಚನೆಗಳಗಾದವರು ನೀಡಿದ ದೂರಿನನ್ವಯ ಮಾಲೀಕ ಮಂಜುನಾಥ್, ಗಂಗಾಧರ್, ಶರತ್- ಭರತ್ ಎನ್ನುವರರನ್ನು ಬಂದಿಸಿದ ತುರುವೇಕೆರೆ ಪೋಲೀಸರು ನ್ಯಾಯಾಂಗ ಬಂದನಕ್ಕೊಪ್ಪಿಸಿದ್ದಾರೆ.

ಮಹಿಳೆ ಬಂಧನ:

      ದಂಡಿನಶಿವರ ಠಾಣಾ ವ್ಯಾಪ್ತಿಯ ಅಮ್ಮಸಂದ್ರ ವಾಸಿ ಗಂಗಮ್ಮ ಎಂಬುವರು ಕೆಲ ವರ್ಷಗಳ ಹಿಂದೆ ಚೀಟಿ ವ್ಯವಹಾರ ನೆಡೆಸಿ ಸಾರ್ವಜನಿಕರ ಚೀಟಿ ಹಣ ನೀಡದೇ ನಾಪತ್ತೆಯಾಗಿದ್ದರು, ಈ ಕುರಿತು ಅರಸೀಕೆರೆ ನಿವಾಸಿ ವಿಕ್ಟರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿದ್ದ ದಂಡಿನಶಿವರ ಪೋಲೀಸರು ಆರೋಪಿ ಗಂಗಮ್ಮಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

(Visited 16 times, 1 visits today)