ಬೆಂಗಳೂರು:
ಮುಂದಿನ ಲೋಕಸಭೆಗೆ ದಿಕ್ಸೂಚಿ ಎಂದೇ ಹೇಳಲಾಗಿದ್ದ, ದೋಸ್ತಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಬಿಂಬಿಸಲ್ಪಟ್ಟಿದ್ದ ಐದು ಕ್ಷೇತ್ರಗಳ ಉಪ ಸಮರದಲ್ಲಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದೆ.
ರಾಮನಗರ (ವಿಧಾನಸಭೆ)
ಅನಿತಾ ಕುಮಾರಸ್ವಾಮಿ (ಜೆಡಿಎಸ್) – 1,25,043
ಬಿಜೆಪಿ – 15,906
ಅಂತರ – 10,9137
ಜಮಖಂಡಿ (ವಿಧಾನಸಭೆ)
ಆನಂದ್ ನ್ಯಾಮಗೌಡ (ಕಾಂಗ್ರೆಸ್) – 97,017
ಶ್ರೀಕಾಂತ ಕುಲಕರ್ಣ (ಬಿಜೆಪಿ) – 57,537
ಅಂತರ – 39,480
ಮಂಡ್ಯ (ಲೋಕಸಭೆ)
ಶಿವರಾಮೇಗೌಡ (ಜೆಡಿಎಸ್)- 5,69,347
ಸಿದ್ದರಾಮಯ್ಯ (ಬಿಜೆಪಿ )- 2,44,404
ನೋಟಾ-15,478
ಅಂತರ – 324943
ಶಿವಮೊಗ್ಗ (ಲೋಕಸಭೆ)
ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52,148 ಮತಗಳಿಂದ ಗೆಲುವು ಸಾಧಿಸಿದ ಬಿ.ವೈ.ರಾಘವೇಂದ್ರ.
ರಾಘವೇಂದ್ರ (ಬಿಜೆಪಿ) – 5,43,306
ಮಧು ಬಂಗಾರಪ್ಪ (ಜೆಡಿಎಸ್) 4,91,158
ಮಹಿಮಾಪಟೇಲ್ (ಜೆಡಿಯು) 8,713
ನೋಟಾ – 10,687
ಅಂತರ- 52,148
ಬಳ್ಳಾರಿ (ಲೋಕಸಭೆ)
ವಿ.ಎಸ್ ಉಗ್ರಪ್ಪ (ಕಾಂಗ್ರೆಸ್) – 6,28,365
ಜೆ. ಶಾಂತಾ (ಬಿಜೆಪಿ) – 3,85,204
ಅಂತರ-
ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಭಾರಿ ದೊಡ್ಡ ಗೆಲುವನ್ನೇ ದಾಖಲಿಸಿರುವುದು ಗಮನಾರ್ಹ ಸಂಗತಿ. ಕೇವಲ ಒಂದೇ ಒಂದು ಕ್ಷೇತ್ರವನ್ನು ಗೆಲ್ಲುವ ಮೂಲಕ ಬಿಜೆಪಿ ಸಂಭಾವ್ಯ ಮುಖಭಂಗದಿಂದ ಪಾರಾಗಿದೆ. ಈ ಮೂಲಕ ರಾಜ್ಯದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ನಡುವೆ ಆಗಬಹುದಾದ ಮೈತ್ರಿಗೆ ಬಲ ಬಂದಿದೆ. ಅಲ್ಲದೆ, ಮೈತ್ರಿ ಸರ್ಕಾರದ ನಾಯಕರೇ ಹೇಳಿದಂತೆ ಮಹಾಘಟಬಂಧನಕ್ಕೆ ಮುನ್ನುಡಿಯೂ ಆಗಿದೆ.