ಕೊರಟಗೆರೆ:
ಅಪರಿಚಿತ ಯುವತಿಗೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಗುರುತು ಸೀಗದ ರೀತಿಯಲ್ಲಿ ಕೊಲೆ ಮಾಡಿರುವ ಘಟನೆ ತುಂಬುಗಾನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಭಾನುವಾರ ಮುಂಜಾನೆ ರೈತ ತನ್ನ ಜಮೀನಿಗೆ ತೆರಳುವ ವೇಳೆ ಶವ ಪತ್ತೆಯಾಗಿದ್ದು, ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ತುಂಬಗಾನಹಳ್ಳಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಬೇರೆ ಕಡೆ ಕೊಲೆ ಮಾಡಿ ಗುರುತು ಸೀಗದೇ ಇರಲಿ ಎಂದು ದೂರದ ಅರಣ್ಯದಲ್ಲಿ ಯುವತಿಯ ಶವ ತಂದು ಸೀಮೆಎಣ್ಣೆಯಿಂದ ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ.
ಕೊಲೆಯಾದ ಯುವತಿಗೆ ಸುಮಾರು 22ರಿಂದ 25ವರ್ಷ ವಯಸ್ಸಾಗಿದೆ. ಕಾಲಿಗೆ ಹೊಸ ಚಪ್ಪಲಿ, ಕೈತುಂಬ ಹಸಿರು ಬಳೆ ಮತ್ತು ಚೂಡಿದಾರ ಹಾಕಿದ್ದಾಳೆ. ಕುತ್ತಿಗೆ, ಮುಖ, ತಲೆ ಮತ್ತು ದೇಹ ಗುರುತು ಸೀಗದಂತಾಗಿದೆ. ಹಾಕಿ ಮೇಲ್ನೋಟಕ್ಕೆ ಪ್ರೀತಿಯ ಹತಾಶೆಯಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯುವತಿಯ ಶವ ಸಂಪೂರ್ಣ ಸುಟ್ಟು ಹೋಗಿದೆ. ಶವ ಪರೀಕ್ಷೆಗಾಗಿ ಪೊಲೀಸರು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಕೊಲೆ ಆಗಿರುವ ಯುವತಿಯ ಶವ ನೋಡಲು ತುಂಬುಗಾನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಯುವತಿಯ ಸುಟ್ಟ ದೇಹವನ್ನು ನೋಡಿ ಭಯಬೀತರಾಗಿ ಆರೋಪಿಯ ಪತ್ತೆಗಾಗಿ ಆಗ್ರಹ ಮಾಡಿದ್ದಾರೆ. ಯುವತಿಯ ಕೊಲೆ ಮಾಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಈಗಾಗಲೇ ವಿಶೇಷ ತಂಡ ರಚನೆ ಮಾಡಿ ತನಿಖೆ ಪ್ರಾರಂಭ ಮಾಡಿದ್ದಾರೆ.
ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಬೇಟಿ ನೀಡಿದ್ದಾರೆ. ತುಮಕೂರು ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಡಾ.ಶೋಭರಾಣಿ, ಮಧುಗಿರಿ ಡಿವೈಎಸ್ಪಿ ಧರಣೀಶ್, ಕೊರಟಗೆರೆ ಸಿಪಿಐ ನದಾಪ್ ಮತ್ತು ಪಿಎಸೈ ಮಂಜುನಾಥ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.