ಮಧುಗಿರಿ:

      ತಾಲೂಕಿನಲ್ಲಿ ಹಲವೆಡೆ ಸುರಿದ ಮಳೆ ಹಾಗೂ ಗಾಳಿಗೆ ಕೆಲವೆಡೆ ಮರಗಳು ಧರೆಗೆ ಊರಳಿದ್ದು ವಿಧ್ಯುತ್ ಕಂಬಗಳು ಸಹ ಮುರಿದು ಬಿದ್ದ ಘಟನೆ ವರದಿಯಾಗಿದೆ.

      ಕೊಡಿಗೇನಹಳ್ಳಿ ಹೊಬಳಿಯಲ್ಲಿ ಮಂಗಳವಾರ ಸುರಿದ ಸಾಧಾರಣ ಮಳೆ ಹಾಗೂ ಬಿರುಗಾಳಿಗೆ ಮುತ್ಯಾಲಮ್ಮನಹಳ್ಳಿ ಗ್ರಾಮದಲ್ಲಿ ತೆಂಗಿನ ಮರವೊಂದು ವಿಧ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಎರಡು ಕಂಬಗಳು ಮುರಿದು ಬಿದ್ದಿವೆ.

       ವಿಧ್ಯುತ್ ಕಂಬದ ಕೆಳೆಗಿದ್ದ ಹಸವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, ರಾಮಪ್ಪ ಎಂಬುವವರಿಗೆ ಸೇರಿದ ಹಸು ಎನ್ನಲಾಗಿದ್ದು ಸುಮಾರು 45 ಸಾವಿರ ಮೂಕ ಜೀವಿ ಬಲಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಅಂದಾಜಿಸಿದ್ದಾರೆ.

       ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಇಂಜಿನಿಯರ್, ಪಶು ವೈಧ್ಯಾಧಿಕಾರಿ ಡಾ ಜಗದೀಶ್ ಹಾಗೂ ಡಾ ಸೀಮಾ ಭೇಟಿ ನೀಡಿದ್ದು ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

(Visited 37 times, 1 visits today)