ತುರುವೇಕೆರೆ:
ತುಮಕೂರು ಜಿಲ್ಲಾದಿಕಾರಿ ರಾಕೇಶ್‍ಕುಮಾರ್ ಮಂಗಳವಾರ ಸಂಜೆ ತಾಲೂಕು ಕಚೇರಿಗೆ ಧಿಡೀರ್ ಬೇಟಿ ನೀಡಿ ಹಲವಾರು ಇಲಾಖೆಗಳ ಕಡತಗಳನ್ನು ಪರಿಶೀಲಿಸುವ ಮೂಲಕ ಅದಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ತಾಲೂಕು ಕಛೇರಿಯಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಮಾಜಿಕ ಭದ್ರತ ಯೋಜನೆಯಲ್ಲಿನ ಪಿಂಚಣಿ ಹಣ ವರ್ಗಾವಣೆಯಲ್ಲಿ ವಿಳಂಬವಾಗುತ್ತಿದ್ದ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಹಲವು ದೂರುಗಳು ಸಲ್ಲಿಕೆಯಾಗಿದ್ದು ಖುದ್ದು ಬೇಟಿ ನೀಡಿ ಪರಿಶೀಲಿಸಲಾಗಿ ಕೆಲವು ಲೋಪ ದೋಷಗಳು ಕಂಡ ಬಂದಿದ್ದು ಹಲವು ಪಲಾನುಭವಿಗಳಿಗೆ ಎರಡು ಬಾರಿ ಹಣ ಸಂದಾಯವಾಗಿದ್ದು. ಇನ್ನು ಕೆಲವು ಜನರಿಗೆ ಸುಮಾರು ದಿನಗಳಿಂದ ಪಿಂಚಣಿ ಬಂದಿಲ್ಲ. ಕೆ-1 ನಿಂದ ಕೆ-2ಗೆ ಆಡಳಿತ ಯಂತ್ರ ಬದಲಾಗಿರುವುದರಿಂದ ಸೂಕ್ತ ದಾಖಲಾತಿಗಳನ್ನು ಪಲಾನುಭವಿಗಳು ಸಲ್ಲಿಸದಿದ್ದರಿಂದ ವಿಳಂಬವಾಗಿದೆ. ಪಿಂಚಣಿ ಪಲಾನುಭವಿಗಳು ತಮ್ಮ ಆದಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕವನ್ನು ಸಲ್ಲಿಸುವಂತೆ ಸೂಚಿಸಿದರು.
ಗ್ರಾಮ ಪಂಚಾಯ್ತಿಯಲ್ಲಿ ಆದಾರ್ ತಿದ್ದುಪಡಿ: ಜಿಲ್ಲೆಯಲ್ಲಿಯೇ ಆದಾರ್ ಕಾರ್ಡ್ ಸಮಸ್ಯೆಯಾಗಿದೆ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಆದಾರ್ ತಿದ್ದಪಡಿ ಮಾಡಲು ಅವಕಾಶ ಕಲ್ಪಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದಿದ್ದಾರೆ. ಗ್ರಾಮ ಪಂಚಾಯ್ತಿಯಲ್ಲಿ ಬಾಪೂಜಿ ಕೇಂದ್ರ ತರೆಯುವ ಮೂಲಕ ಸಣ್ಣ ಪುಟ್ಟು ಲೋಪಗಳನ್ನು ಸರಿಪಡಿಸಲು ಮುಂದಾದರೆ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ ಜಿಲ್ಲೆಯಲ್ಲಿ 40 ನಾಡ ಕಛೇರಿ ಹಾಗೂ 40 ಅಂಚೆಕಚೇರಿ ಹಾಗೂ ಎಸ್.ಬಿ.ಐ ಬ್ಯಾಂಕ್ ಗಳಲ್ಲಿ ಆದಾರ್ ಕಾರ್ಡ್ ತೆಗೆಯಲು ವ್ಯವಸ್ಥೆ ಮಾಡಲಾಗಿದೆ. ಆದರೂ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ದಿನದಲ್ಲಿ 40 ಜನರಿಗೆ ಮಾತ್ರ ಆದರ್ ಕಾರ್ಡ್ ತಗೆಯಬಹುದಾಗಿದೆ ಒಬ್ಬರಿಗೆ 20 ನಿಮಿಷ ಬೇಕಾಗಿದ್ದು ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು.
ರಸ್ತೆ ಬಿಡಿಸುವಂತೆ ಮನವಿ: ಪಟ್ಟಣದ ಪೊಲೀಸ್ ಕ್ವಾಟ್ರಸ್ ಕಾಪೋಂಡ್‍ಗೆ ಪೊಲೀಸ್ ಇಲಾಖೆಯಿಂದ ಹಾಕಲಾಗಿರುವ ತಂತಿ ಬೇಲಿಯಿಂದಾಗಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಚರಿಸಲು ತೀವ್ರ ತೊಂದರೆ ಉಂಟಾಗಿದ್ದು ವಿವಿದ ವಾರ್ಡ್‍ಗಳಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದ್ದು ಕಿಲೋಮೀಟರ್ ಗಟ್ಟಲೆ ಬಳಸಿ ಬರುವಂತಾಗಿದ್ದು ಮಾನವೀಯತೆ ದೃಷ್ಟಿಯಿಂದ ಜನರಿಗೆ ಪಾದಚಾರಿ ರಸ್ತೆಯನ್ನು ಕಲ್ಪಿಸಿಕೊಡಬೇಕೆಂದು ಜಿಲ್ಲಾದಿಕಾರಿಗಳಿಗೆ ಪಟ್ಟಣ ಪಂಚಾಯ್ತಿ ಸದಸ್ಯರಾದ ಚಿದಾನಂದ್ ಹಾಗೂ ಅಂಜನ್ ಕುಮಾರ್ ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರು.