ಕೊರಟಗೆರೆ:

      ಹಜರತ್ ಟಿಪ್ಪುಸುಲ್ತಾನ್ ಜಯಂತಿಯನ್ನು ತಾಲೂಕು ಆಡಳಿತವತಿಯಿಂದ ನ.10 ರಂದು ಆಚರಿಸಲು ಪ್ರತಿಯೊಬ್ಬರ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ನಾಗರಾಜು ತಿಳಿಸಿದ್ದಾರೆ.

      ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಟಿಪ್ಪುಸುಲ್ತಾನ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ಟಿಪ್ಪು ಜಯಂತಿ ಒಂದು ಸಮುದಾಯಕ್ಕೆ ಮೀಸಲಾಗುವುದು ಬೇಡ, ಎಲ್ಲಾ ಸಮುದಾಯದವರು ಕೂಡಿ ಸೌಹಾರ್ದತೆಯಿಂದ ಜಯಂತಿಯನ್ನು ಆಚರಿಸೋಣ, ನ.10 ರಂದು ಬೆಳಿಗ್ಗೆ 10 ಗಂಟೆಗೆ ಹಳೆ ಪೊಲೀಸ್ ಠಾಣೆಯ ಎದುರಿನಲ್ಲಿರುವ ತಾ.ಪಂ. ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಮಾತ್ರನಡೆಯುತ್ತದೆ, ಟಿಪ್ಪು ಸುಲ್ತಾನ್ ಬಗ್ಗೆ ವಿಶೇಷ ಉಪನ್ಯಾಸವನ್ನು ಸಂಪನ್ನೂಲ ವ್ಯಕ್ತಿಯಿಂದ ನೀಡಲಾಗುವುದು ಕಾರ್ಯಕ್ರಮದಲ್ಲಿ ವಿವಿಧ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಇಲಾಖಾ ಆಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.

       ಪಿಎಸೈ ಮಂಜುನಾಥ್ ಮಾತನಾಡಿ ಸರಕಾರದ ಆದೇಶದಂತೆ ಸರಕಾರಿ ಕಟ್ಟಡದಲ್ಲೆ ಸಮಾರಂಭ ನಡೆಯಲಿದ್ದು ಯಾವುದೇ ಡಿಜೆಯಂತ ದ್ವನಿವರ್ಧಕ, ಮೆರವಣಿಗೆ ಮತ್ತು ಟಿಪ್ಪುವಿನ ಬಗ್ಗೆ ಬೇಡವಾದ ಹೇಳಿಕೆಗಳನ್ನು ನೀಡುವುದು ನಿಷೇಧಿಸಲಾಗಿದ್ದು ಒಂದು ವೇಳೆ ಕಾನೂನು ಬಾಹಿರವಾದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೇ ಅಂಥವರ ವಿರುದ್ದ ಕಾನೂನಿನಲ್ಲಿ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ಹೇಳಿದರು.

      ಸಭೆಯಲ್ಲಿ ರೇಷ್ಮ ಇಲಾಖೆ ಲಕ್ಷ್ಮೀನರಸಯ್ಯ, ಸುರೇಶ್, ಅನಿಲ್‍ಕುಮಾರ್, ಪ.ಪಂ.ಸದಸ್ಯ ನಟರಾಜು, ಕ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನ್, ಮಯೂರಗೋವಿಂದರಾಜು, ಚಿಕ್ಕರಂಗಯ್ಯ, ಕೃಷ್ಣಪ್ಪ, ಮುತ್ತವಲ್ಲಿ ಸೇರಿದಂತೆ ಸಮಾಜದ ಮುಖಂಡರಾದ ಹೊಳವನಹಳ್ಳಿ ರಿಯಾಸತ್‍ಆಲೀ, ಮುಕ್ತಿಯಾರ್ ಪಾಷಾ, ಗೌಸ್‍ಪೀರ್‍ಪಾಷಾ, ಗುಲ್ಜಾರ್, ಬಾಷಾಸಾಬ್, ಅಬ್ದಲ್ ರಾವೂತ್, ವಜೀದ್‍ಬಾಷಾ, ಅನ್ವರ್ ಸೇರಿದಂತೆ ಇನ್ನಿತರರ ಉಪಸ್ಥಿತರಿದ್ದರು.
(ಚಿತ್ರ ಇದೆ)
ನ8ಕೊರಟಗೆರೆ:- ಕೊರಟಗೆರೆ ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ನಾಗರಾಜು, ಸೇರಿದಂತೆ ಇತರರು ಇದ್ದರು.

(Visited 27 times, 1 visits today)