ತುರುವೇಕೆರೆ:

      ಪಟ್ಟಣದ ಸಂತೆಗೆ ಬರುತ್ತಿದ್ದ ಗ್ರಾಹಕರ ಕಿಸೆಯಲ್ಲಿದ್ದ ಮೊಬೈಲನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಶುಕ್ರವಾರ ಬಂದಿಸಿದ್ದಾರೆ.

      ಬಂದಿತ ಆರೋಪಿ ರಾಮು ಭದ್ರಾವತಿ ನಗರದ ಬೋವಿ ಕಾಲೋನಿಯಲ್ಲಿ ಮನೆಗಳ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದವನು ಎನ್ನಲಾಗಿದೆ. ನಿನ್ನೆ ಪಟ್ಟಣದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಆರೋಪಿ ಎಪಿಎಂಸಿ ಯಾರ್ಡ್‍ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತಿದ್ದು ಪೊಲೀಸ್ ಸಿಬ್ಬಂದಿಗಳು ಈತನ್ನು ಠಾಣೆಗೆ ಕರೆ ತಂದು ವಿಚಾರಿಸಲಾಗಿ ಪಟ್ಟಣದ ಸಂತೆಯಲ್ಲಿ ಹಲವು ತಿಂಗಳುಗಳಿಂದ ಮೊಬೈಲ್ ಕಳವು ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.

      ಬಂದಿತನಿಂದ 35 ಸಾವಿರ ರೂಪಾಯಿಗಳ 14 ಬೆಲೆ ಬಾಳುವ ಮೊಬೈಲ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿ ರಾಮುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಟ್ಟಣದ ಪೊಲೀಸರು ತಿಳಿಸಿದ್ದಾರೆ.

(Visited 5 times, 1 visits today)