ಪಾವಗಡ :
ಯಾವುದೇ ಸಮಯದಲ್ಲಾದರೂ ವೈದ್ಯಕೀಯ ಸೌಲಭ್ಯಕ್ಕಾಗಿ ಬರುವ ಜನತೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈಯುಕ್ತಿಕ ಪ್ರತಿಷ್ಠೆ ಪ್ರದರ್ಶಿಸಿದರೆ ಮುಲಾಜಿಲ್ಲದೆ ಕ್ರಮ ತಪ್ಪಿದಲ್ಲ ಎಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಸಂಜೆ ಧಿಡಿರನೇ ಬೇಟಿ ನೀಡಿದಾಗ ಆಸ್ಪತ್ರೆಯಲ್ಲಿ ಯಾರು ವೈದ್ಯರಿಲ್ಲದನ್ನು ಕಂಡು ಮಾಜಿ ಸಚಿವರು ಕೆಂಡಮಂಡಲರಾದರು. ಆಸ್ಪತ್ರೆಯೋ ಏನೋ ಏಂಬುದು ಕೂಡ ನಮಗೆ ಅರ್ಥವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಒಬ್ಬ ವೈದ್ಯರು ಕೂಡ ಇಲ್ಲವೆಂದರೆ ಹೇಗೆ.. ಗ್ರಾಮೀಣ ಭಾಗದಿಂದ ಬರುವ ಜನತೆಯ ಪಾಡೇನು.. ಅವರ ನೋವಿಗೆ ಯಾರಿಲ್ಲಿ ಸ್ಪಂದಿಸುವವರು.. ನಿಮ್ಮ ವೈಯುಕ್ತಿಕ ಪ್ರತಿಷ್ಠೆ ಬಿಟ್ಟು ಮೊದಲು ಕೆಲಸ ಮಾಡಿ ಇಲ್ಲದೆ ಹೋದಲ್ಲಿ ಮುಂದಾಗುವ ಆನಾಹುತಕ್ಕೆ ನೀವೆ ಬಲಿಯಾಗುತ್ತಿರೆಂದು ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಮಾಜಿ ಸಚಿವರು ಆಸ್ಪತ್ರೆಗೆ ಬೇಟಿ ನೀಡಿರುವ ವಿಷಯ ತಿಳಿದು ಎಲ್ಲರೂ ಆಸ್ಪತ್ರೆಯಲ್ಲಿ ಪ್ರತ್ಯಕ್ಷವಾಗತೊಡಗಿದಾಗ ಮಾಜಿ ಸಚಿವರು ಇದು ಸರ್ಕಾರಿ ಆಸ್ಪತ್ರೆಯೋ ಖಾಸಗಿ ಆಸ್ಪತ್ರೆಯೋ.. ಯಾವುದೇ ಚಿಕಿತ್ಸೆ ಔಷದಿಗಳಿಗೆ ಖಾಸಗಿ ಆಸ್ಪತ್ರೆಗೆ ಚೀಟಿ ಬರೆದು ಕೊಡುವ ಅವಶ್ಯಕತೆಯೇನಿದೆ..ಇಲ್ಲಿ ವೈದ್ಯರಿಲ್ಲವ ಅಥವಾ ಔಷದಿಗಳಿಲ್ವ.. ಕಮೀಷನ್ ದಂದೆ ಏನಾದರೂ ನಡೆಯುತ್ತಿದೆಯೇ.. ಎಂದು ಖಾರವಾಗಿ ಎಲ್ಲರನ್ನು ಪ್ರಶ್ನಿಸಿದ ಶಾಸಕರು, ಇನ್ಮುಂದೆ ಚೀಟಿ ಬರೆದು ಕೊಡುವ ಆಭ್ಯಾಸವನ್ನು ತಕ್ಷಣದಿಂದ ನಿಲ್ಲಿಸಿ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿ ಉತ್ತಮ ವೈದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿ ತಮ್ಮ ಸೇವೆ ಬಡವರಿಗೆ ದೊರೆಯಬೇಕೆಂದು ತಿಳಿಸಿದರು.
14 ರಂದು ಭೂಮಿ ಪೂಜೆ :
2350 ಕೋಟಿ ವೆಚ್ಚದ ತುಂಗಭದ್ರ ಶುದ್ಧ ಕುಡಿಯುವ ನೀರಿನ ಯೋಜನೆಗೆ ಆಗಸ್ಟ್ 14 ರಂದು ತಾಲೂಕಿನ ಮೇಗಲಪಾಳ್ಯ ಗ್ರಾಮದ ಬಳಿ ಭೂಮಿ ಪೂಜೆ ನೇರವೇರಿಸಲಿದ್ದು ತಾಲೂಕಿನ 14 ಕಡೆ ಬೃಹತ್ ಓವರ್ ಟ್ಯಾಂಕ್‍ಗಳನ್ನು ನಿರ್ಮಾಣ ಮಾಡಿ ತಾಲೂಕಿನ ಪ್ರತಿ ಗ್ರಾಮಕ್ಕೂ ಕುಡಿಯುವ ನೀರಿನ್ನು ನೀಡಲಾಗುವುದೆಂದರು.
ಮದ್ಯಂತರ ಚುನಾವಣೆ ಇಲ್ಲ :
ಮಾಜಿ ಪ್ರಧಾನಿ ದೇವೆಗೌಡರು ಹೇಳಿದ ಹಾಗೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಒಂದು ವೇಳೆ ಅವರು ಹೇಳಿದ ಹಾಗೆ ಅಂತಹ ಸಂದರ್ಭ ಎದುರಾಗಿ ಮಧ್ಯಂತರ ಚುನಾವಣೆ ಬಂದರು ಆಶ್ಚರ್ಯ ಪಡಬೇಕಿಲ್ಲ ಎಂದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ನಮ್ಮ ತಾಲೂಕಿನ ಯಾವುದೇ ಕುಡಿಯುವ ನೀರಿನ ಯೋಜನೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ವಿಳಂಬ ಮಾಡುವಂತಿಲ್ಲ ಎಂದರು.
ಇದೇ ಸಮಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ 14 ಲಕ್ಷ ವೆಚ್ಚದಲ್ಲಿ ನೀಡಲಾದ ಹೊಸ ಆಂಬ್ಯುಲೆನ್ಸ್‍ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ಜಗದೀಶ್, ಮಕ್ಕಳ ತಜ್ಞರಾದ ಡಾ.ಕಿರಣ್, ದಂತ ವೈದ್ಯರಾದ ವಿಜಯಲಕ್ಷ್ಮಿ, ಮುಖಂಡರಾದ ಶಂಕರ್ ರೆಡ್ಡಿ, ಪುರಸಭಾ ಸದಸ್ಯರಾದ ರವಿ ಉಪಸ್ಥಿತರಿದ್ದರು.