ತುಮಕೂರು:  

     ಬೆಂಕಿಯಬಲೆ ದಿನಪತ್ರಿಕೆಯ ವೆಬ್ ನ್ಯೂಸ್‍ನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸಿದ್ದರಾಜುರವರು ಉದ್ಘಾಟಿಸಿದರು. ಇಂದಿನ ತಾಂತ್ರಿಕ ಯುಗದಲ್ಲಿ ಡಿಜಿಟಲ್ ಆವೃತ್ತಿಯ ಅಗತ್ಯತೆಯಿದ್ದು, ಇದನ್ನು ತುಮಕೂರು ಜಿಲ್ಲೆಯ ಸ್ಥಳೀಯ ದಿನಪತ್ರಿಕೆ ಹೊರತರುತ್ತಿರುವುದು ಹರ್ಷದಾಯಕವಾಗಿದೆ. ಕಳೆದ ಒಂದು ವರ್ಷಗಳಿಗೂ ಹೆಚ್ಚು ಕಾಲ ದಿನಪತ್ರಿಕೆಯಾಗಿ ಉತ್ತಮ ಜನಮನ್ನೆಣೆ ಗಳಿಸಿರುವ ಬೆಂಕಿಯಬಲೆ ದಿನಪತ್ರಿಕೆ ತಾಂತ್ರಿಕ ಜಗತ್ತಿಗನುಗುಣವಾಗಿ ಪತ್ರಿಕೆಯ ವೆಬ್‍ಸೈಟ್‍ನ್ನು ತೆರೆದಿದೆ. ಇದು ಇನ್ನು ಮುಂದೆ ಇನ್ನೂ ಹೆಚ್ಚಿನ ಓದುಗರ ಸಂಖ್ಯೆಯನ್ನು ಆಕರ್ಷಿಸಲಿ. ಸಮಾಜಕ್ಕೆ ಅಗತ್ಯವೆನಿಸಿದ ಹಾಗೂ ಈ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಂತಹ ಮಾಧ್ಯವiವಾಗಿ ಬದಲಾಗಲಿ. ಸ್ಪರ್ಧಾತ್ಮಕ ಯುಗದಲ್ಲಿ ಬಿಬಿನ್ಯೂಸ್ 24*7 ಎನ್ನುವಂತಹ ವೆಬ್ ಚಾನೆಲ್‍ನ್ನು ಸಹಾ ಇಂದು ಬಿಡುಗಡೆ ಮಾಡಿದ್ದು, ಇದು ದೃಷ್ಯ ಮಾದ್ಯಮದಲ್ಲಿ ಹೊಸ ಅವಿಷ್ಕಾರವನ್ನು ಮಾಧ್ಯಮ ಜಗತ್ತಿನಲ್ಲಿ ತರಲಿ ಎಂದು ಹಾರೈಸಿದರು.

      ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘಗಳ ಗೌರವಾಧ್ಯಕ್ಷ ಎಂ.ಎಸ್.ಮಣಿಯವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಡಿಜಿಟಲ್ ಮಾಧ್ಯಮ ತುಂಬಾ ಅಗತ್ಯವಾಗಿದ್ದು, ಯುವ ಸಮೂಹ ಡಿಜಿಟಲ್ ಮಾಧ್ಯಮದೆಡೆಗೆ ತಮ್ಮನ್ನು ಹೆಚ್ಚು ಗಮನಹರಿಸಿಕೊಳ್ಳುತ್ತಿದ್ದು, ಯುವಜನತೆಗೆ ಪೂರಕವಾಗುವಂತೆ ಈ ವೆಬ್ ಆವೃತ್ತಿ ವೆಬ್‍ನ್ಯೂಸ್ ಲೋಕಾರ್ಪಣೆಯಾಗಿರುವುದು ಹರ್ಷದಾಯಕ ವಿಷಯವಾಗಿದೆ. ತುಮಕೂರು ಜಿಲ್ಲೆಯಲ್ಲಲ್ಲದೆ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಕೀರ್ತಿಯನ್ನು ಗಳಿಸಿ, ಸಾಮಾಜಿಕ ಜಾಲತಾಣಗಳ ಅಭಿಮಾನಿಗಳ ಅಚ್ಚುಮೆಚ್ಚಿನ ವೆಬ್‍ಸೈಟ್ ಆಗಲಿ ಎಂದು ಹಾರೈಸಿದರು.

      ಬಿಡುಗಡೆ ಸಮಾರಂಭದಲ್ಲಿ ಸಂಯುಕ್ತ ಕರ್ನಾಟಕ ಉಪಸಂಪಾದಕರಾದ ಜಿ.ಇಂದ್ರಕುಮಾರ್, ಸಂಪಾದಕ ಎ.ಎನ್.ಧನಂeಯ್, ಮಿಡಿಗೇಶಿ ನಾಗಭೂಷಣ್, ಜಯ್ಯಣ್ಣ ಬೆಳಗೆರೆ, ವರದಿಗಾರ ಮಂಜುನಾಥ್, ಸಂತೋಷ್ ಗೌಡ, ಯೋಗೀಶ್, ಚೇಳೂರು ಕುಮಾರ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. 

(Visited 19 times, 1 visits today)