ತುಮಕೂರು :
ತಾಲ್ಲೂಕಿನ ವಕೀಲರು, ಕುರುಬ ಸಮಾಜದ ಮುಖಂಡರು ಹಾಗೂ ಸಮಾಜ ಸೇವಕರಾದ ಆರ್.ಪಾತಣ್ಣ ನವರನ್ನು ತುಮಕೂರು ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಇಂದು ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಅವರು ಅಧಿಕಾರ ಸ್ವೀರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ತುಮಕೂರು ಜಿಲ್ಲಾ ಹಾಲುಮತ ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು.
ಹಾಲುಮತ ಮಹಾಸಭಾ ರಾಜ್ಯ ಸಂಚಾಲಕರು, ತುಮಕೂರು ಮಹಾನಗರಪಾಲಿಕೆ ಹಣಕಾಸು ಮತ್ತು ತೆರಿಗೆ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀನರಸಿಂಹರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಟಿ.ಇ.ರಘುರಾಮ್, ತುಮಕೂರು ಹಾಲುಮತ ಮಹಾಸಭಾ ಜಿಲ್ಲಾ ಕನಕ ಯುವ ಸೇನೆಯ ಅಧ್ಯಕ್ಷರಾದ ಕೆಂಪರಾಜು, ಕಾಳಿದಾಸ ವಿದ್ಯಾವರ್ಧಕದ ಸಂಘದ ಜಿಲ್ಲಾ ನಿರ್ದೇಶಕ ಪಾವಗಡದ ಮೈಲಾರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಜಯರಾಮ್, ಸಮಾಜದ ಮುಖಂಡರಾದ ಚಿಕ್ಕಸ್ವಾಮಿ, ಕೆ.ಲಕ್ಕಪ್ಪವರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದರು.
(Visited 249 times, 1 visits today)