ಪಾವಗಡ :
ತಾಲ್ಲೂಕಿನ ಬೋಡರಹಳ್ಳಿ ಗ್ರಾಮದಲ್ಲಿ ಗಣಪತಿ ಹಬ್ಬವನ್ನು ಮನೆ ಮನೆಗೆ ಒಂದು ಗಿಡ ನೆಡುವ ಮೂಲಕ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಿದರು.
ಪಾವಗಡ ಪಿಎಸ್ ಐ ರಾಘವೇಂದ್ರ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಬಾಲಾಜಿ, ಗಣೇಶ ಚತುರ್ಥಿ ಮನೆ ಮಂದಿ, ಊರು ಕೇರಿಯವರನ್ನೆಲ್ಲಾ ಒಂದುಗೂಡಿಸುವ ಹಬ್ಬ. ಹಾಗೆಯೇ ಇದೀಗ ಅದು ಪರಿಸರಪ್ರೇಮಿಗಳನ್ನು ಒಂದುಗೂಡಿಸುವ ಹಬ್ಬವೂ ಹೌದು. ಗಣೇಶ ಹಬ್ಬವನ್ನು ಪರಿಸರಸ್ನೇಹಿಯನ್ನಾಗಿಸಲು ನಮ್ಮ ಹಳ್ಳಿಯಲ್ಲಿ ಈ ಬಾರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಕಾರಣ ಇಷ್ಟೆ, ಈ ಬಾರಿನೂ ಮಳೆ ಇಲ್ಲ, ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.
ಕೆರೆಗಳು ಭತ್ತಿ ಹೊಗಿವೆ. ಕೊಳವೇ ಬಾವಿಗಳಲ್ಲಿ ನೀರು ಕಮ್ಮಿಯಾಗಿದೆ ಹಾಗು ಕೆಲವು ನಿಂತು ಹೋಗಿವೆ. 1000-1200 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಮಳೆಗಾಲದಲ್ಲೇ ಇಂತಹ ಪರಿಸ್ಥಿತಿ ಎಂದರೆ, ಮುಂಬರುವ ಬೇಸಿಗೆ ಕಾಲದ ಪರಿಸ್ಥಿತಿ ಏನು…? ಕಳೆದ ಬೇಸಿಗೆಯಲ್ಲಿ ನಾವು ಅನುಭವಿಸಿದ ಕಷ್ಟಗಳು ಇನ್ನು ಕಣ್ಮುಂದೆ ಇದೆ. ಎಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಇದೆ. ಬೇಸಿಗೆಯ ತಾಪ ದಿಂದಾಗಿ ದನ-ಕರುಗಳಿಗೆ ಮೇವು ಹಾಗು ನೀರಿನ ಕೊರತೆ ಹೀಗೆ ಒಂದಾ ಎರಡಾ.. ಆದ್ದರಿಂದ ಮೊದಲ ಪ್ರಯತ್ನವಾಗಿ ನಮ್ಮ ಹಳ್ಳಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ 2000 ಗಿಡಗಳನ್ನು ನೆಡಲು ತೀರ್ಮಾನಿಸಿದ್ದೇವೆ. ಪ್ರತಿ ಬಾರಿ ಎಲ್ಲರಂತೆ ಆಡಂಬರಕ್ಕೆ ಹೋಗಿ ಸುಮಾರು 50000 ಸಾವಿರ ಹಣ ಖರ್ಚು ಮಾಡುತಿದ್ದೇವು , ಆದರೆ ಈ ಬಾರಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡು, ಹಬ್ಬವನ್ನು ಚಿಕ್ಕ ಹಾಗು ಚೊಕ್ಕದಾಗಿ, ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದೇವೆ.
ಶಾಲಾ ಕಾಲೇಜುಗಳಲ್ಲೂ, ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಹಸಿರು ಕ್ರಾಂತಿಯನ್ನು ತಂದು ಮುಂಬರುವ ಪರಿಸರ ವಿಕೋಪಗಳನ್ನು ತಡಿಯೋಣ. ‘ಮನೆಗೊಂದು ಮರ – ಊರಿಗೊಂದು ವನ’ ಎಂಬ ಮಾತನ್ನು ಸಾಕಾರಗೊಳಿಸೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೋಡರಹಳ್ಳಿ ಗ್ರಾಮಸ್ಥರು ಹಾಜರಿದ್ದರು.