ತುರುವೇಕೆರೆ:
ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿನ ಕಾಂಕ್ರಿಟ್ ರಸ್ತೆ ಕಾಮಗಾರಿ ವಿಚಾರದಲ್ಲಿ ಶಾಸಕ ಮಸಾಲ ಜಯರಾಮ್ ಮತ್ತು ಬಿಜೆಪಿ ಮುಖಂಡರು ಹಾಗೂ ತಾಲೂಕು ಪಂಚಾಯಿತಿ ಜೆಡಿಎಸ್ ಸದಸ್ಯ ರವಿ ಮತ್ತು ಸ್ಥಳೀಯ ಜೆಡಿಎಸ್ ಮುಖಂಡರ ನಡುವೆ ಮಾತಿನ ಚಕಮಕಿ ಗುರುವಾರ ನಡೆದಿದೆ.
ತಾಲೂಕಿನ ಕುರುಬರಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯಡಿ ಮುಂಜೂರಾಗಿರುವ ಕಾಂಕ್ರಿಟ್ ರಸ್ತೆ ಹಾಗೂ ಭೂಮಿಪೂಜೆ ಕಾಮಗಾರಿಗೆ ಶಾಸಕ ಮಸಾಲೆಜಯರಾಮ್ ಇತ್ತೀಚೆಗಷ್ಟೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು ಅದರಂತೆ ಸ್ಥಳೀಯ ಗುತ್ತಿಗೆದಾರರು ಕಾಮಗಾರಿ ಪ್ರಾರಂಬಿಸಿದ್ದರು. ಚರಂಡಿ ಮಾಡುವ ವಿಚಾರದಲ್ಲಿ ಸ್ಥಳಿಯ ಗ್ರಾಮಸ್ಥರು ಸಹಕರಿಸದೆ ರಾಜಕೀಯ ತಿರುವು ಪಡೆದು ಕಾಮಗಾರಿಯನ್ನು ನಿಲ್ಲಿಸಲಾಗಿತ್ತು.
ಈ ವಿಚಾರ ತಿಳಿದ ಶಾಸಕ ಮಸಾಲ ಜಯರಾಮ್ ಗುರುವಾರ ಸಂಜೆ ಸ್ಥಳ ಪರಿಶೀಲನಗೆ ಖುದ್ದು ಗ್ರಾಮಕ್ಕೆ ಆಗಮಿಸಿದ್ದಾಗ ತಾಲೂಕು ಪಂಚಾಯ್ತಿ ಸದಸ್ಯ ರವಿ ಹಾಗೂ ಜೆಡಿಎಸ್ ಬೆಂಬಲಿಗರು ಗ್ರಾಮದಲ್ಲಿ ಚರಂಡಿ ಮಾಡಿ ರಸ್ತ ಕಾಮಗಾರಿ ಮಾಡಿ ಎಂದು ಒತ್ತಾಯಿಸಿದರು. ಶಾಸಕ ಮಸಾಲ ಜಯರಾಮ್ ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನಕ್ಕೆ ಮುಂದಾದರಾದರು ಶಾಸಕರ ಬೆಂಬಲಿಗರು ಹಾಗೂ ಜೆಡಿಎಸ್ ಬೆಂಬಲಿಗರ ನಡುವ ಮಾತಿನ ಚಕಮುಖಿ ನೆಡೆದು ಕೈ,ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ನಂತರ ಸ್ಥಳದಲ್ಲಿದ್ದ ಶಾಸಕರು ಗ್ರಾಮಸ್ಥರ ಜೊತೆ ಮಾತನಾಡಿ ಎಲ್ಲರನ್ನು ಸಮದಾನ ಪಡಿಸಿ ಪರಿಸ್ಥಿತಿ ಹತೋಟಿ ತರುವಲ್ಲಿ ಸಪಲರಾದರು. ಈ ವಿಚಾರವಾಗಿ ಗ್ರಾಮಸ್ಥರು ಎರಡು ಕಡೆಗಳಿಂದ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.