ಮಧುಗಿರಿ :
ತಾಲ್ಲೂಕಿನ ಬೇಡತ್ತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಕರಡಿಯನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಮನೆಗಳ ಪಕ್ಕದಲ್ಲೇ ಇರುವ ಬೆಟ್ಟದಲ್ಲಿ ಕರಡಿ ಓಡಾಟ ನಡೆಸುತ್ತಿದ್ದು ಈ ಪ್ರದೇಶದ ಸುತ್ತಮುತ್ತ ಈಗಾಗಲೇ ಜನರ ಮೇಲೆ ಕರಡಿ ದಾಳಿ ನಡೆಸಿ ಗಾಯ ಗೊಳಿಸಿರುವ ಘಟನೆ ಆಗಾಗ್ಗೆ ನಡೆಯುತ್ತಿರುತ್ತದೆ.
ಈ ಘಟನೆ ಮಾಸುವ ಮುನ್ನವೇ ಕರಡಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕ ಮೂಡಿಸಿದ್ದು ಮಹಿಳೆಯರು, ಮಕ್ಕಳು ಹೊರಗಡೆ ಹೋಗಲು ಹೆದರುತ್ತಿದ್ದಾರೆ.
ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಇತ್ತ ಗಮನ ಹಾರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಜೆಯಾದರೆ ಸಾಕು ಮನೆಯಿಂದ ಆಚೆ ಹೋಗಲು ಅಂಜುತ್ತಿರುವ ಗ್ರಾಮಸ್ಥರು ಜನರ ಗಲಾಟೆ ಕಂಡು ಬೆಟ್ಟ ಹತ್ತಿಹೋಗುತ್ತಿರುವ ಕರಡಿಗಳು ರಾತ್ರಿ ಹೊತ್ತಿನಲ್ಲಿ ಬೆಟ್ಟದ ಬುಡದಲ್ಲೇ ಇರುವ ಬೇಡತ್ತೂರು ಗ್ರಾಮಕ್ಕೆ ಆಹಾರ ಹುಡಿಕಿ ಕೊಂಡು ಬರುವುದರಿಂದ ಜನತೆಯನ್ನು ಕಂಡು ದಾಳಿಗೆ ಮುಂದಾಗುತ್ತದೆ ಆದುದರಿಂದ ಆರಣ್ಯ ಇಲಾಖೆಯವರು ಬೋನುಗಳನ್ನು ಇಟ್ಟು ಕರಡಿ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.