ತುಮಕೂರು:
ನಗರದ ಸಿದ್ಧಗಂಗಾ ಮಠಕ್ಕೆ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡ ಭೇಟಿ ನೀಡಿ, ಶ್ರೀಗಳ ಆರ್ಶೀವಾದ ಪಡೆದುಕೊಂಡರು.
ಸಂಸದರಾಗಿರುವ ಬೈಜಯಂತ್ ಪಾಂಡ ಅವರು ಒಂದು ದೇಶ ಒಂದು ಸಂವಿಧಾನ ವಿಚಾರಗೋಷ್ಠಿ ಅಂಗವಾಗಿ ತುಮಕೂರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೂ ಮುನ್ನ ಸಿದ್ಧಗಂಗಾ ಮಠಕ್ಕೆ ತೆರಳಿ, ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆಗೆ ನಮಿಸಿದರು.
ಸುದ್ದಿಗಾರರೊಂದಿಗೆ ಶ್ರೀ ಮಠದ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡು ತುಂಬಾ ಸಂತೋಷವಾಗಿದ್ದು, ವಾಜಪೇಯಿ ಅವರು ಹಾಗೂ ನೂಯಾರ್ಕ್‍ನಲ್ಲಿ ನಡೆದ ಕಾರ್ಯದಲ್ಲಿ ಸಿದ್ಧಗಂಗಾ ಮಠದ ಬಗ್ಗೆ ತಿಳಿದುಕೊಂಡಿದ್ದೇನೆ, ಈಗ ನೋಡಿದ್ದು ತುಂಬಾ ಸಂತೋಷವಾಗಿದ್ದು, ಇಡೀ ದೇಶಕ್ಕೆ ಒಂದೇ ಸಂವಿಧಾನವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ 370 ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ಯಾರ ಮೇಲೆಯೂ ಒತ್ತಡ ಹಾಕಿಲ್ಲ ಎಂದು ಶ್ರೀಗಳಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕ ಸುರೇಶ್‍ಗೌಡ, ಮುಖಂಡರುಗಳಾದ ಶಿವಪ್ರಸಾದ್, ರವಿ ಹೆಬ್ಬಾಕ, ರುದ್ರೇಶ್, ಕೊಪ್ಪಳ್‍ನಾಗರಾಜು, ಬ್ಯಾಟರಂಗೇಗೌಡ, ಹಾಲನೂರು ಲೇಪಾಕ್ಷಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.