ಕೊರಟಗೆರೆ:
ಗ್ರಾಮೀಣ ಪ್ರದೇಶದ ರೈತರ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿಡ್ಲ್ಯೂಡಿ ಇಲಾಖೆಯ ಅನುಧಾನದಿಂದ 65ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ಮಾಡಲಾಗಿದೆ ಎಂದು ತುಮಕೂರು ಸಂಸದ ಎಪ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿ ಪಾತಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಳಾಲ ಮುಖ್ಯರಸ್ತೆಯಿಂದ ಬೈರವೇಶ್ವರ ದೇವಾಲಯದ ವರೆಗಿನ ರಸ್ತೆಗೆ ಬುಧವಾರ ಗುದ್ದಲಿಪೂಜೆ ನೇರವೇರಿಸಿದ ನಂತರ ಮಾತನಾಡಿದರು.
ಕೋಳಾಲ ಮಾರ್ಗದ ರಸ್ತೆಯಿಂದ ಬೈರಬೇಶ್ವರ ದೇವಾಲಯದ ತಿಮ್ಮನಾಯಕನಹಳ್ಳಿ ಮಾರ್ಗದ 2ಕೀಮೀ ರಸ್ತೆಗೆ 65ಲಕ್ಷ ವೆಚ್ಚದ ಡಾಂಬರೀಕರಣ ಮಾಡಿಸಲು ಯೋಜನೆ ರೂಪಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಬೈರಬೇಶ್ವರ ಜಾತ್ರೆ ಇರುವ ಹಿನ್ನಲೆಯಲ್ಲಿ ಅಷ್ಟರಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಪೂರ್ಣ ಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಾನಾಯಕನಹಳ್ಳಿ ಶ್ರೀಮಠದ ನಂಜಾವಧೂತ ಸ್ವಾಮೀಜಿ, ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ, ತಾಪಂ ಸದಸ್ಯ ಬೋರಣ್ಣ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.