ಪಾವಗಡ :
ಸೋಮವಾರ ಬೆಳಗಿನ ಜಾವ ಮೂರು ಗಂಟೆಯಿಂದ ಸುರಿದ ಧಾರಕಾರ ಮಳೆಗೆ ಕೋಳಿ ಪಾರಂಗೆ ಮಳೆ ನೀರು ನುಗ್ಗಿ 5000 ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ಪಟ್ಟಣದ ಸಮೀಪದಲ್ಲಿ ನಡೆದಿದೆ.
ಪಾವಗಡ ಪಟ್ಟಣದ ಚಿನ್ನನಾಯಕನ ಹಳ್ಳಿ ರಸ್ತೆಯಲ್ಲಿರುವ ಗುರುರಾಜ್ ಕೋಳಿ ಪಾರಂಗೆ ಸೋಮವಾರ ಮುಂಜಾನೆ ವರುಣನ ಆರ್ಭಟದಿಂದ ಮಳೆ ನೀರು ನುಗ್ಗಿ 5000 ಸಾವಿರ ಕೋಳಿಗಳು ಪಾರಂನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು , ಕಳೆದ ಒಂದು ವಾರದಿಂದ ಮಳೆರಾಯನ ಆರ್ಭಟಕ್ಕೆ ಮಳೆ ನೀರು ನುಗ್ಗಿ ಕೋಳಿಗಳ ಸಾವಿನ ಎರಡನೇ ಘಟನೆಯಾಗಿರುತ್ತದೆ.
ಕಳೆದಾ ಒಂದು ತಿಂಗಳಿನಿಂದ ತಾಲೂಕಿನಾದ್ಯಂತ ಉತ್ತಮ ಮಳೆಗಾಗುತ್ತಿದ್ದು ,ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೋಳಿಪಾರಂಗೆ ನೀರು ನುಗುತ್ತಿದ್ದು ಮಣ್ಣು ಮಿಶ್ರಿತ ನೀರು ಪಾರಂಗೆ ಬಂದು ಸೇರಿ ಹಾಗೂ ಕೋಳಿಗಳನ್ನು ಬೇರೆಡೆ ಮಳೆಯಲ್ಲಿ ಸಾಗಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿ ಕೋಳಿಗಳು ಸಾವನ್ನಪ್ಪಿವೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಕೋಳಿಪಾರಂ ಮಾಲೀಕ ಗುರುರಾಜ್ ಮಾತನಾಡಿ ದಸರಾ ಹಬ್ಬಕ್ಕೆ ಬರುವ ನಿಟ್ಟಿನಲ್ಲಿ ಕೋಳಿಗಳನ್ನು ಸಾಕಲಾಗಿತ್ತು , ಹಾಗೂ ಅಂತರ್ಜಲ ಮಟ್ಟ ಕುಸಿತದಿಂದ ಜೀವನೋಪಾಯಕ್ಕಾಗಿ ಕೋಳಿಗಳನ್ನು ಸಾಕಿ ಜೀವನ ನಿರ್ವಹಣೆ ಮಾಡುತ್ತಿರುವ ವೇಳೆ ಮಳೆಯ ಆವಾಂತರದಿಂದ ಮಳೆ ನೀರುನುಗ್ಗಿ ಐದು ಸಾವಿರ ಕೋಳಿಗಳ ಸಾವಿನಿಂದ ಸುಮಾರು 7 ಲಕ್ಷಕ್ಕೂ ಹೆಚ್ಚು ನಷ್ಠವುಂಟಾಗಿದ್ದು ಸಂಬಂದಪಟ್ಟವರು ಸೂಕ್ತ ಪರಿಹಾರ ನೀಡಬೇಕೆಂದು ಆವೇದನೆ ವ್ಯೆಕ್ತಪಡಿಸಿರುತ್ತಾರೆ.