ತುಮಕೂರು:
ಯಾವುದೋ ಅಲೆಯಲ್ಲಿ ಗೆದ್ದವರ ಯೋಗ್ಯತೆ ಏನು ಎಂಬುದು ಮತದಾರರಿಗೆ ಒಂದೇ ವರ್ಷದಲ್ಲಿ ತಿಳಿಯಿತು. ಕ್ಷೇತ್ರದ ಕ್ರಷರ್, ಗ್ರಾನೈಟ್ ಮಾಲೀಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಎಂದು ಶಾಸಕ ಗೌರಿಶಂಕರ್ ಅವರ ಹೆಸರು ಹೇಳದೆ ಮಾಜಿ ಶಾಸಕ ಬಿ.ಸುರೇಶ್‍ಗೌಡ ಹರಿಹಾಯ್ದರು.
ನಗರದ ಕ್ಯಾತ್ಸಂದ್ರದಲ್ಲಿ ಬಿ.ಸುರೇಶ್‍ಗೌಡ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಶಿವಕುಮಾರಸ್ವಾಮೀಜಿ ಅವರು ಇದ್ದ ಕ್ಷೇತ್ರದಲ್ಲಿ ಶಾಸಕನಾಗಿ ಉತ್ತಮ ಕೆಲಸ ಮಾಡಿರುವ ಹೆಮ್ಮೆ ನನಗಿದೆ, ಮೋದಿ ಅವರು ನೀಡಿರುವ ಸ್ಮಾರ್ಟ್‍ಸಿಟಿ ವ್ಯವಸ್ಥಿತವಾಗಿ ರೂಪುಗೊಳ್ಳಬೇಕೆಂದರೆ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪಾಲಿಕೆಯಲ್ಲಿ ಬಹಳಷ್ಟು ಬದಲಾವಣೆ ತಂದ ಟಿ ಭೂಬಾಲನ್ ರವರ ರೀತಿಯ ಅಧಿಕಾರಿಗಳು ನಮ್ಮ ನಗರ ಮತ್ತು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದ ಅವರು, ವಸಂತ ನರಸಾಪುರದಲ್ಲಿ ರೈಲ್ವೆ ಕಾರಿಡಾರ್ ಮಾಡಬೇಕು ಇಂಡ್ರಸ್ಟಿಯಲ್ ಕಾರಿಡಾರ್ ಅಭಿವೃದ್ಧಿಯಾಗಬೇಕು ಇದನ್ನು ಕೂಡಲೇ ಕಾರ್ಯ ರೂಪಕ್ಕೆ ತರಬೇಕು ಎಂದರು. ಕ್ಷೇತ್ರದಲ್ಲಿ ನಾನು ಹಣ ಇಟ್ಟುಕೊಂಡು ರಾಜಕಾರಣ ಮಾಡಿಲ್ಲ ಜನ ಬೆಂಬಲದಿಂದ ಆಯ್ಕೆಯಾದವನು ಸಮಾಜದ ಕಟ್ಟ ಕಡೆಯ ವ್ಯಕಿಯ ಸೇವೆಮಾಡಬೇಕು ಅದೇ ನನ್ನ ಧ್ಯೇಯವಾಗಿತ್ತು ಎಂದರು.
ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಸುರೇಶ್‍ಗೌಡ ಅವರು ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ, ಶಾಲೆ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸುವ ಸಾಕಷ್ಟು ಜನಪಯೋಗಿ ಕೆಲಸವನ್ನು ಮಾಡಿದ್ದಾರೆ ಎಂದ ಅವರು, ಜನರು ಮುಂದಿನ ದಿನಗಳಲ್ಲಿ ಅವರಿಗೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು, ಸಾವಿರಾರು ಬಡ ರೋಗಿಗಳು ಆರೋಗ್ಯ ತಪಾಸಣೆಯ ಸದುಪಯೋಗವನ್ನು ಪಡೆದುಕೊಂಡರು, ಮಾಜಿ ಶಾಸಕ ಬಿ.ಸುರೇಶ್‍ಗೌಡ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು 150 ಬಾಟಲ್ ರಕ್ತವನ್ನು ಸಂಗ್ರಹಿಸಿದರು. ಮಜಾ ಭಾರತ ತಂಡದಿಂದ ಹಾಸ್ಯ ಸಂಜೆಯನ್ನು ಆಯೋಜಿಸಲಾಗಿತ್ತು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಮಾಡಲಾಯಿತು ಯೋಧರಿಗೆ ರಂಗಭೂಮಿ ಕಲಾವಿದರು ನಾಟಿ ವೈದ್ಯರು ಕಾರ್ಯಕ್ರಮದಲ್ಲಿ ಗೂಳೂರು ಜಿ.ಪಂ.ಸದಸ್ಯ ಶಿವಕುಮಾರ್, ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ,ಲಕ್ಷ್ಮೀಶ್ ಸಿದ್ದೇಗೌಡರು ಓಂಕಾರ್ ಮತ್ತು ಇತರರು ಇದ್ದರು