ತಿಪಟೂರು ತಾಲ್ಲೂಕು ಮಡೆನೂರು ಗ್ರಾಮಲೆಕ್ಕಿಗ ರವಿಶಂಕರ್ ರವರು 5 ಸಾವಿರ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಉಪಾಧೀಕ್ಷಕರಾದ ಉಮಾಶಂಕರ್ ರವರು ದಾಳಿ ಮಾಡಿ ಬಂಧಿಸಿದ್ದಾರೆ.
ಮಡೆನೂರು ಗ್ರಾಮಲೆಕ್ಕಿಗರ ವ್ಯಾಪ್ತಿಯಲ್ಲಿ ಬರುವ ಕಂದಾಯದ ಜಮೀನನ್ನು ದೂರುದಾರರಾದ ಉಮೇಶ್ ರವರ ಅಕ್ಕ ಶುದ್ಧ ಕ್ರಯಕ್ಕೆ ಖರೀದಿ ಮಾಡಿದ್ದು, ಖರೀದಿದಾರರ ಹೆಸರಿಗೆ ಸ್ವತ್ತನ್ನು ಖಾತೆ ಬದಲಾವಣೆ ಮಾಡಲು 30 ಸಾವಿರ ಲಂಚದ ಹಣಕ್ಕೆ ಒತ್ತಾಯಿಸಿದ್ದು, ದೂರುದಾರರಾದ ಉಮೇಶ್ ರವರು ಮೊದಲ ಕಂತಾಗಿ 5 ಸಾವಿರ ರೂ.ಗಳನ್ನು ಫೋನ್ ಪೇ ಮುಖಾಂತರ ಗ್ರಾಮಲೆಕ್ಕಿಗ ರವಿಶಂಕರ್ ರವರ ಖಾತೆಗೆ ವರ್ಗಾವಣೆ ಮಾಡಿದ್ದು ಉಳಿಕೆ 25 ಸಾವಿರ ರೂ.ಗಳ ಬಾಬ್ತು 2 ನೇ ಕಂತಾಗಿ ಪಾವತಿಸುವ ವೇಳೆ ತುಮಕೂರು ಭ್ರಷ್ಟಾಚಾರ ನಿಗ್ರಹದಳದ ಉಪಾದೀಕ್ಷಕ ಬಿ.ಉಮಾಶಂಕರ್ ರವರು ನೆರಳು ಸಾಕ್ಷಿಗಳ ಸಮ್ಮುಖದಲ್ಲಿ ಹಣದ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೂರುದಾರರಾದ ಉಮೇಶ್ ರವರು ಮಡೆನೂರು ಗ್ರಾಮಲೆಕ್ಕಿಗ ರವಿಶಂಕರ್ ರವರು ಸರ್ಕಾರಿ ಕೆಲಸ ಮಾಡದೇ ಹಣಕ್ಕಾಗಿ ವಿಲೇ ಇಟ್ಟಿರುವ ವಿಚಾರವನ್ನ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ನೆರಳು ಸಾಕ್ಷಿದಾರರೊಂದಿಗೆ ತೆರಳಿ ಅರ್ಜಿದಾರರಾದ ಉಮೇಶ್ ರವರು ಗ್ರಾಮಲೆಕ್ಕಿಗರಾದ ರವಿಶಂಕರ್ ರವರಿಗೆ ಲಂಚ ನೀಡುವ ಸಂದರ್ಭದಲ್ಲಿ ದಾಳಿ ಮಾಡಿ ಹಣದ ಸಮೇತ ಗ್ರಾಮಲೆಕ್ಕಿಗ ರವಿಶಂಕರ್ ರನ್ನು ಬಂಧಿಸಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.