ಪಾವಗಡ:

      ತಾಲ್ಲೂಕಿನಾದ್ಯಂತ ಅಕ್ರಮವಾಗಿ ಸಾಗಾಣಿಕೆ , ಮಾರಾಟ ಹಾಗೂ ಲೋಕಸಭಾ ಮತ್ತು ವಿಧಾನಸಭಾ  ಚುನಾವಣೆ ವೇಳೆಯಲ್ಲಿ ಮತದಾರರಿಗೆ ಅಕ್ರಮವಾಗಿ ಹಂಚಲು ತಂದಿದ್ದ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಮದ್ಯವನ್ನು ಅಬಕಾರಿ ಉಪಯುಕ್ತರು  ಆದೇಶದ ಮೇರೆಗೆ ಅಧಿಕಾರಿಗಳು ಇಂದು ನಾಶಪಡಿಸಿದರು.

      ಅಬಕಾರಿ ಉಪ ಅಧೀಕ್ಷಕರಾದ ಸುಭಾಸ್ ಚಂದ್ರ ಜೆ ರವರ ಸಮ್ಮುಖದಲ್ಲಿ  ಮದ್ಯ 487.980 ಲೀಟರ್ ಬಿಯರ್ 10.550 ಲೀಟರ್ ಸೇಂದಿ 99.600 ಲೀಟರ್  ಸುಮಾರು 1.75 ಲಕ್ಷ ರೂಪಾಯಿಗಳ ಮದ್ಯ ಮತ್ತು ಬಿಯರ್ ಬಾಟಲಿಗಳನ್ನು ನಾಶಮಾಡಲಾಯಿತು.

       ಇದೇ ವೇಳೆ ಪಾವಗಡ ವಲಯ ವಿಭಾಗದ ಅಬಕಾರಿ ನಿರೀಕ್ಷಕ  ನಾಗರಾಜ್ ಹೆಚ್ ಕೆ , ಸಹಾಯಕ ಅಬಕಾರಿ ನಿರೀಕ್ಷಕರು ಶಿವಬಸವಯ್ಯ. ಪೃಥ್ವಿ ರಾಜು. ಕೆ . ಎಸ್.ಬಿ.ಸಿ.ಎಲ್. ಡಿಪೋ ಚಳ್ಳಕೆರೆ ಮೇನೆಜರ್ ‌ ಬಸವರಾಜು. ಕಂದಾಯ ಇಲಾಖೆಯ ಅಧಿಕಾರಿಗಳು ಪುರಸಭೆ ಸಿಬ್ಬಂದಿ ವರ್ಗದವರು ಹಾಗೂ     ಅಬಕಾರಿ ಇಲಾಖೆ ಸಿಬ್ಬಂಧಿಗಳು ಹಾಜರಿದ್ದರು. ಈ ಪೂರ್ಣ ಮದ್ಯ ವನ್ನು ನಾಶಪಡಿಸುವ ಬಗ್ಗೆ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಯಿತು. 

(Visited 35 times, 1 visits today)