ಕೊರಟಗೆರೆ:
ಯುವ ಕ್ರೀಡಾಪಟುಗಳು ಗೆಲುವು ಮತ್ತು ಸೋಲನ್ನು ಸಮವಾಗಿ ಸ್ವೀಕರಿಸಿ ತಮ್ಮ ಗುರಿಯನ್ನು ಮುಟ್ಟುವಂತಹ ಪ್ರಯತ್ನ ಮಾಡಬೇಕು ಎಂದು ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪೃಥ್ವಿ ಇಲೆವನ್ ಮತ್ತು ಡಾ.ಜಿ.ಪರಮೇಶ್ವರ ಯೂತ್ ಐಕಾನ್ಸ್ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಕ್ರೀಡಾ ಪಟುಗಳನ್ನು ಗುರುತಿಸಲು ರಾಜ್ಯದ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಕ್ರೀಡಾ ಇಲಾಖೆಯಿಂದ ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸುಮಾರು 3ಕೋಟಿ ವೆಚ್ಚದ ಕ್ರೀಂಡಾಗಣ ನಿರ್ಮಿಸಲು ಈಗಾಗಲೇ ಅನುಧಾನ ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ. ಯುವಕರು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳು ದೇಶ ಮತ್ತು ವಿದೇಶದಲ್ಲಿ ತಮ್ಮ ಕ್ರೀಡಾ ಶಕ್ತಿಯನ್ನು ತೊರಿಸಿ ದೇಶದ ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತೀದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನೂತನ ರೀತಿಯ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಡಿಸಿಎಂ ಕ್ಷೇತ್ರದ ಯುವಕರು ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ಆಗುವ ರೀತಿಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಮಾತ್ರ ನಿಮ್ಮ ಶ್ರಮ ಸಾರ್ಥಕ ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜು, ಇಓ ಶಿವಪ್ರಕಾಶ್, ಸಿಪಿಐ ಮುನಿರಾಜು, ಪಿಎಸೈ ಮಂಜುನಾಥ, ಪಪಂ ಸದಸ್ಯರಾದ ನಟರಾಜ್, ರಮೇಶ್, ಮುಖಂಡರಾದ ಅಶ್ವತ್ಥನಾರಾಯಣ್, ನರಸಪ್ಪ, ಕವಿತಾ, ಜಯರಾಮ್, ಮೂರ್ತಿ, ಮಂಜುನಾಥ, ಪ್ರಕಾಶ್, ಮೈಲಾರಪ್ಪ, ಕ್ರೀಡಾಪಟುಗಳಾದ ರಘುಪತಿ, ಕಿಶೋರ್, ಬಾಬು, ಮಾರುತಿ, ಸ್ವಾಮಿ, ಹರೀಶ್, ಅರವಿಂದ್, ರವಿ, ಜಯರಾಜ್, ಉಮೇಶ್, ಮಧು, ಸಲ್ಮಾನ್, ಖುನಾಲ್ ಸೇರಿದಂತೆ ಇತರರು ಇದ್ದರು.