ತುರುವೇಕೆರೆ :
ವ್ಯಕ್ತಿಯೊಬ್ಬ ಮಲ್ಲಾಘಟ್ಟ ಕೆರೆಯಲ್ಲಿ ನೀರು ಮುಟ್ಟಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮೃತನು ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಗ್ರಾಮದ ನಿವಾಸಿ ಲಿಂಗಪ್ಪ (52) ಎಂದು ಗುರುತಿಸಲಾಗಿದೆ. ಮೃತ ಲಿಂಗಪ್ಪನಿಗೆ ಎರಡು ಗಂಡು, ಒಂದು ಹೆಣ್ಣು ಮಗು ಸಹ ಇದೆ. ಸೋಮವಾರ ಮಲ್ಲಾಘಟ್ಟ ಕೆರೆ ದಡದಲ್ಲಿರುವ ಗಂಗಾಧರೇಶ್ವರ ಸ್ವಾಮಿಯ ಪೂಜೆಗೆಂದು ಬಂದಿದ್ದು ಕೆರೆಯ ದಂಡೆ ತನ್ನ ಬಟ್ಟೆಗಳನ್ನು ಕಳಚಿಟ್ಟು ನೀರು ಮುಟ್ಟಲು ಹೋಗಿ ಕಾಲು ಜಾರಿ ಅಸುನೀಗಿದ್ದಾನೆ.
ಮೊನ್ನೆ 26ರ ಶನಿವಾರವಷ್ಟೆ ಮಲ್ಲಾಘಟ್ಟ ಕೆರೆ ಮೂಲಭೂತ ಸೌಕರ್ಯದ ಬಗ್ಗೆ ಹಾಗೂ ಕಾವಲುಗಾರ ನೇಮಕ ಪ್ರಜಾಪ್ರಗತಿಯಲ್ಲಿ ದಿನಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.ಅಗ್ನಿಶಾಮಕ ದಳದ ಸಿಬ್ಬಂದಿ, ಪೆÇಲೀಸರು ಮತ್ತು ಸ್ಥಳೀಯ ಸಾರ್ವಜನಿಕರು ವಿಶಾಲವಾಗಿ ತುಂಬಿ ಹರಿಯುತ್ತಿರುವ ಕೆರೆಯಲ್ಲಿ ಮೃತನ ಶವ ಶೋಧನೆಗಾಗಿ ಹರಸಾಹಸ ನಡೆಸಿದ್ದು ಮಂಗಳವಾರ ಸಂಜೆ ಮೃತ ಲಿಂಗಪ್ಪನ ಶವ ಪತ್ತೆಯಾಗಿದೆಯೆಂದು ಪಟ್ಟಣದ ಪೊಲೀಸರು ತಿಳಿಸಿದ್ದಾರೆ.