ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ವಿರುದ್ಧ ಕೀಳುಮಟ್ಟದಲ್ಲಿ ಜಯಚಂದ್ರ ಮಾತನಾಡಿದ್ದಾರೆ. ಈ ವರ್ತನೆ ಜಯಚಂದ್ರರ ಹುಟ್ಟಿನ ಗುಣವನ್ನು ತೋರಿಸುತ್ತದೆ. ಅವರು ನರಿಯೂ ಅಲ್ಲ, ಗುಳ್ಳೆನರಿಯೂ ಅಲ್ಲ, ಬದಲಾಗಿ ಕೆಟ್ಟ ಸೊಳ್ಳೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು. ಪ್ರಧಾನಿ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದ್ರೆ ನಾವೆಲ್ಲ ಏನು ಬಳೆ ತೊಟ್ಟು ಕೂತಿದ್ದೇವೆಯೇ ಎಂದು ಪ್ರಶ್ನಿಸಿದರು.
ನಮ್ಮದು ಫೆಡರಲ್ ಸಿಸ್ಟಂ ಹೀಗಾಗಿ ಕ್ರಿಮಿನಲ್ಗಳನ್ನು ಎಲ್ಲಿ ಬೇಕಾದ್ರು ಬಂಧಿಸಬಹುದು. ಟಿ.ಬಿ ಜಯಚಂದ್ರ ಅಂಡ್ ಕಂಪನಿ ಲಜ್ಜೆಗೆಟ್ಟಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಯಾರೊಬ್ಬರೂ ಕೂಡ ಕಾಂಗ್ರೆಸ್ನಲ್ಲಿ ಇಲ್ಲ. ದೇಶದಲ್ಲಿ ಟಿ.ಬಿ ಜಯಚಂದ್ರ ಅಂಡ್ ಕಂಪನಿ ಮೀರ್ ಸಾದಕ್ಗಳಂತೆ 70 ವರ್ಷಗಳಿಂದ ಮೋಸ ಮಾಡುತ್ತಾ ಬಂದಿದ್ದಾರೆ ಎಂದರು.
ಟಿಪ್ಪು ಸುಲ್ತಾನ್ ನರಮೇಧದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಮರ್ಥನೆ ಮಾಡಿಕೊಂಡಿರುವುದು ಸರಿಯಲ್ಲ. ಮುಖ್ಯವಾಗಿ ಚರಿತ್ರೆ ನಮ್ಮ ಮುಂದೆ ಇದ್ದು, ಪರ್ಶಿಯಾ ದೇಶದಿಂದ ಟಿಪ್ಪು ವಂಶಸ್ಥರು ಬಂದಿದ್ದಾರೆ. ಟಿಪ್ಪು ಪರ್ಶಿಯಾ ದೇಶದ ಜೀನ್ಸ್. ಅವರು ನಮ್ಮ ದೇಶದಲ್ಲಿ ನರಮೇಧ ಮಾಡುತ್ತಾರೆ ಎಂದ್ರೆ ಟಿಪ್ಪು ಬಗ್ಗೆ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.
(Visited 10 times, 1 visits today)