ತುಮಕೂರು:

       ರೌಡಿಶೀಟರ್ ಚೊಟ್ಟೆ ಕುಮಾರನ ಹತ್ಯೆಯ ಆರೋಪಿ ಟೆಂಪಲ್ ರಾಜನ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.

      ಚೊಟ್ಟೆ ಕುಮಾರನ ಹತ್ಯೆಗೆ ಕಾರಣ ಹುಡುಕುತ್ತಾ ಹೊರಟರೆ ಪೊಲೀಸರು ನಿಯಂತ್ರಿಸಲಾಗದೆ ಜೂಜುಕೋರರಿಂದ ಹಣ ಪಡೆದು ಅಕ್ರಮ ಜೂಜಾಟಕ್ಕೆ ಕೈಜೋಡಿಸಿದ ಪರಿಣಾಮ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ನಡೆಯುತ್ತಿರುವ ಜೂಜು ದಂಧೆ, ದಂಧೆಯ ಕಿಂಗ್‌ಪಿನ್‌ಗಳು ಮತ್ತು ಅವರಿಗೆ ಕೈಜೋಡಿಸುವ ಚೊಟ್ಟೆ ಕುಮಾರನಂತಹ ಅನುಯಾಯಿಗಳು ಹತ್ಯೆಯಾದ ಮೇಲೆ ಹತ್ಯೆಗೆ ಮೂಲ ಕಾರಣ ಜೂಜಾಟ. ಅದರ ಸಂಬಂಧ ದಾಳಿಯಿಂದ ದಾಖಲಾದ ಪ್ರಕರಣ ಆ ಸಂದರ್ಭದಲ್ಲಿ ವಶಪಡಿಸಿಕೊಂಡ ಹಣ ಮತ್ತು ದ್ವಿಚಕ್ರ ವಾಹನ, ವಾಹನವನ್ನು ಬಿಡಿಸಲು ಪೊಲೀಸರು ಕೇಳಿದ ೧೦ ಸಾವಿರ ರೂ.ಲಂಚ, ಲಂಚದ ಹಣ ಕೊಟ್ಟರೂ ಬಿಡುಗಡೆಯಾಗದ ವಾಹನ, ಇದರ ಸಂಬಂಧ ಬೇಸರಗೊಂಡ ಟೆಂಪಲ್ ರಾಜ ಗ್ಯಾಂಬ್ಲರ್ ನಡೆಸುತ್ತಿದ್ದ ಚಿಗರಿಗೆ ಫೋನಾಯಿಸಿ ಮಧ್ಯದ ಮತ್ತಿನಲ್ಲಿ ವಾಚಾಮಗೋಚರವಾಗಿ ನಿಂದಿಸಿದ್ದ. ನಿಂದನೆಗೊಳಗಾದ ಗ್ಯಾಂಬ್ಲಿಂಗ್ ನಡೆಸುವವನು 5 ಜನರನ್ನು ಕರೆದುಕೊಂಡು ಟೆಂಪಲ್ ರಾಜನ ಬಳಿ ಬಂದು ಇವರುಗಳ ನಡುವೆ ವಾಗ್ವಾದ ನಡೆಯುತ್ತಿದ್ದ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಮೋಹನ್‌ಕುಮಾರ ಅ|| ಚೊಟ್ಟೆಕುಮಾರ ಎಂಬ ರೌಡಿಶೀಟರ್ ಟೆಂಪಲ್ ರಾಜನಿಗೆ ಅವಾಜ್ ಹಾಕುತ್ತಾನೆ. ಮಾತು ಮಿತಿ ಮೀರಿ ಟೆಂಪಲ್ರಾಜ ಕೆನ್ನೆಗೆ ಬಾರಿಸುತ್ತಾನೆ. ಉದ್ವೇಗಗೊಂಡ ಟೆಂಪಲ್ ರಾಜ ನನ್ನ ಮುಂದೆ ಬೆಳೆದ ಜುಟ್ಟು ನೀನು ಎಂದು ಚೊಟ್ಟೆ ಕುಮಾರನಿಗೆ ಕಾಲಿನಿಂದ ಒದೆಯುತ್ತಾನೆ. ಕೆಳಗೆ ಬಿದ್ದ ಚೊಟ್ಟೆ ಕುಮಾರನ ತಲೆ ಮೇಲೆ ಸ್ಥಳದಲ್ಲೇ ಬಿದ್ದಿದ್ದ ಕಲ್ಲನ್ನು ಎತ್ತಿಹಾಕಿ ಹತ್ಯೆ ಮಾಡುತ್ತಾನೆ. ಚೊಟ್ಟೆ ಕುಮಾರ ಬದುಕಿರಬಹುದೆಂದು ಗ್ಯಾಂಬ್ಲರ್ ಚಿಗರಿ ತನ್ನದೇ ಕಾರಿನಲ್ಲಿ ಚೊಟ್ಟೆ ಕುಮಾರನ ರಕ್ತಸಿಕ್ತ ದೇಹವನ್ನು ತೆಗೆದುಕೊಂಡು ಜಿಲ್ಲಾಸ್ಪತ್ರೆಗೆ ಬರುತ್ತಾರಾದರೂ, ಆಸ್ಪತ್ರೆ ತಲುಪುವ ಮುನ್ನವೇ ಶವವಾಗಿದ್ದ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆಯಾದ ಚೊಟ್ಟೆ ಕುಮಾರ್

      ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬೆಳಗುಂಬದ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೈದ್ದಿದ್ದು, ಹತ್ಯೆಗೈದ ಆರೋಪಿ ಕ್ಯಾತ್ಸಂದ್ರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ಶರಣಾಗಿದ್ದನೆಂದು ತಿಳಿದುಬಂದಿದೆ. ಶರಣಾದ ಆರೋಪಿ ಟೆಂಪಲ್ ರಾಜನನ್ನು ಕ್ಯಾತ್ಸಂದ್ರ ಇನ್ಸ್ಪೆಕ್ಟರ್ ಶ್ರೀಧರ್‌ರವರು ಪೊಲೀಸ್ ಠಾಣೆಯಿಂದ ತಮ್ಮ ಜೀಪಿನಲ್ಲಿ ಕರೆತಂದು ಬೆಳಗುಂಬದ ವಡ್ಡರಹಳ್ಳಿ ಸಮೀಪ ಆರೋಪಿ ರಾಜನ ಕಾಲಿಗೆ ಗುಂಡಿಕ್ಕಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಆರೋಪಿಯ ಕಾಲಿಗೆ ಗುಂಡಿಕ್ಕಿದ್ದೇವೆಂದು ಕತೆ ಕಟ್ಟಿದ್ದಾರೆ. ಇದರ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಶ್ರೀಧರ್‌ರವರು ದೂರು ನೀಡಿದ್ದು, ದೂರಿನಲ್ಲಿ ಖಚಿತ ಮಾಹಿತಿ ಆಧಾರದ ಮೇಲೆ ‘ನಾನು ಮತ್ತು ನನ್ನ ಸಿಬ್ಬಂದಿಗಳಾದ ರಮೇಶ್ ಮತ್ತು ಮೋಹನ ಇತರರು ಕೊಲೆ ಆರೋಪಿ ಟೆಂಪಲ್ ರಾಜನನ್ನು ಹಿಡಿಯಲು ಹೋದಾಗ ನನ್ನ ಮೇಲೆರಗಿದ ಆರೋಪಿ ಟೆಂಪಲ್ ರಾಜ ಕೊಲೆ ಪ್ರಯತ್ನ ಮಾಡಿದ್ದು, ಚಾಕುವಿನಿಂದ ರಮೇಶ್ ಮತ್ತು ನನ್ನ ಮೇಲೆ ಹಲ್ಲೆ ಮಾಡಿದ್ದರಿಂದ ಆತ್ಮರಕ್ಷಣೆಗಾಗಿ ನನ್ನ ಬಳಿ ಇದ್ದ ಇಲಾಖೆಯ ಅಧಿಕೃತ ಪಿಸ್ತೂಲಿನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿರುತ್ತೇನೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.

ಇನ್ಸ್ಪೆಕ್ಟರ್ ಶ್ರೀಧರ್‌

      ನಿಜಕ್ಕೂ ಕ್ಯಾತ್ಸಂದ್ರ ಇನ್ಸ್ಪೆಕ್ಟರ್ ಶ್ರೀಧರ್ ನೀಡಿರುವ ದೂರನ್ನು ಗಮನಿಸಿದರೆ ಬಲವಾದ ಅನುಮಾನ ಎಲ್ಲರನ್ನೂ ಕಾಡುತ್ತದೆ. ದಿನಾಂಕ ೧-೧೧-೨೦೧೯ರ ಶುಕ್ರವಾರ ರಾತ್ರಿ ಸುಮಾರು 9.30ರ ಸುಮಾರಿನಲ್ಲಿ ಮಧ್ಯದ ಅಮಲಿನಲ್ಲಿ ಮಾತು ಮಾತಿನ ನಡುವೆ ನಡೆದ ವಾಗ್ವಾದ ಕೈ ಮಿಲಾಯಿಸುವ ಮಟ್ಟ ತಲುಪಿ ಹತ್ಯೆಗೆ ಕಾರಣವಾಗಿತ್ತು. ಹತ್ಯೆಯಾದ ಸ್ಥಳ ಬೆಳಗುಂಬ ಗ್ರಾಮವಾಗಿದ್ದು, ಹತ್ಯೆಯ ಆರೋಪಿ ಟೆಂಪಲ್ ರಾಜನ ಮನೆಯೂ ಅಲ್ಲೇ ಇದ್ದು, ಹತ್ಯೆಯಾದ ರಾತ್ರಿ ಟೆಂಪಲ್ ರಾಜನನ್ನ ಕ್ಯಾತ್ಸಂದ್ರ ಇನ್ಸ್ಪೆಕ್ಟರ್ ಬಂಧಿಸದಿರಲು ಕಾರಣವೇನು? ಕೊಲೆ ಆರೋಪದಡಿ  ಸಿಬ್ಬಂದಿಗಳಾದ ಮೋಹನ, ರಮೇಶ ಮತ್ತು ಕುಮಾರ ಇವರುಗಳ ಮುಂದೆ ಟೆಂಪಲ್ ರಾಜ ಎಣ್ಣೆಯ ಏಟಿನಲ್ಲಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಸ್ವತಃ ಶರಣಾಗಿದ್ದು ಶನಿವಾರ ಬೆಳಗಿನ ಜಾವವಲ್ಲವೇ? ಶರಣಾದ ಆರೋಪಿಯನ್ನ ಊರ್ಡಿಗೆರೆ ಔಟ್ ಪೋಸ್ಟ್ನಲ್ಲಿ ಸಂಜೆವರೆಗೂ ಅಕ್ರಮವಾಗಿ ವಶದಲ್ಲಿಟ್ಟುಕೊಂಡದ್ದು ಸತ್ಯವಲ್ಲವೇ? ಬೆಳಗ್ಗೆ ೧೦ ಗಂಟೆಯಿAದ ಸಂಜೆಯವರೆಗೆ ಎನ್‌ಕೌಂಟರ್ ಮಾಡಲು ಕ್ಯಾತ್ಸಂದ್ರ ಪಿ.ಎಸ್.ಐ. ರಾಮಪ್ರಸಾದ್ ಮತ್ತು ಗ್ರಾಮಾಂತರ ಸಬ್‌ಇನ್ಸ್ಪೆಕ್ಟರ್ ಲಕ್ಷ್ಮಯ್ಯನವರನ್ನು ಬಲವಂತ ಮಾಡಿದ್ದು ನಿಜವೇ? ಇಬ್ಬರು ಸಬ್‌ಇನ್ಸ್ಪೆಕ್ಟರ್‌ಗಳು ಎನ್‌ಕೌಂಟರ್ ಮಾಡಲು ಒಪ್ಪದಿದ್ದಾಗ ರಾತ್ರಿ ಕ್ಯಾತ್ಸಂದ್ರ ಇನ್ಸ್ಪೆಕ್ಟರ್ ಶ್ರೀಧರ್ ಎನ್‌ಕೌಂಟರ್ ಮಾಡಿದ್ದು ಸರಿಯೇ? ಆರೋಪಿ ಟೆಂಪಲ್ ರಾಜ ರಾತ್ರಿಯೆಲ್ಲಾ ಬೆಳಗುಂಬದ ತನ್ನ ಮನೆಯಲ್ಲಿದ್ದರೂ ಬಂಧಿಸದಿರಲು ಕಾರಣವೇನು? ಒಂದು ವೇಳೆ ಆರೋಪಿ ತಪ್ಪಿಸಿಕೊಂಡಿದ್ದರೆ ತನ್ನ ಗ್ರಾಮದ ಸಮೀಪವಿರುವ ವಡ್ಡರಹಳ್ಳಿ ಹತ್ತಿರ ಬರುತ್ತಿದ್ದನೆ? ಇನ್ಸ್ಪೆಕ್ಟರ್ ಮತ್ತು ಕ್ರೆöÊಂ ಸಿಬ್ಬಂದಿಗಳು ಎಲ್ಲರೂ ಒಬ್ಬ ಆರೋಪಿಯನ್ನು ಹಿಡಿಯಲು ಹೋದಾಗ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳ ಮೇಲೆ ಒಬ್ಬ ವ್ಯಕ್ತಿ ಹಲ್ಲೆ ಮಾಡಲು ಸಾಧ್ಯವೇ? ಅಸಲಿಯಾಗಿ ಪೊಲೀಸರೇ ಹಿಂದೆ ಕೆಲವು ಪ್ರಕರಣಗಳಲ್ಲಿ ಮಾಡಿದಂತೆ ವಡ್ಡರಹಳ್ಳಿ ಸಮೀಪ ಕರೆತಂದು ಗುಂಡಿಕ್ಕಿದರಾ? ಗುಂಡಿಕ್ಕುವ ಸಂದರ್ಭದಲ್ಲಿ ಆರೋಪಿ ಕಣ್ಣಿಗೆ ಕಾಣಬಾರದೆಂದು ಆತನ ಕಣ್ಣಿಗೆ ಬಟ್ಟೆ ಕಟ್ಟಿದ್ದು ನಿಜವೇ? ಇಂತಹ ಹತ್ತಾರು ಪ್ರಶ್ನೆಗಳು ಈ ನಕಲಿ ಎನ್‌ಕೌಂಟರ್‌ನ ಹಿಂದೆ ಎದ್ದುಕಾಣುತ್ತವೆ.

      ಗೆಡ್ಡೆ ರಾಜನ ಹತ್ಯೆ ನಂತರ ಯಾವುದೇ ಅಪರಾಧಗಳಲ್ಲಿ ಟೆಂಪಲ್ ರಾಜ ಭಾಗಿಯಾಗದೆ ಕೃಷಿಕನಾಗಿದ್ದ ಎನ್ನುವುದು ಇಲಾಖೆ ಮಾಹಿತಿ. ಪೊಲೀಸರೆಂದರೆ ಕಾನೂನನ್ನು ರಕ್ಷಿಸಬೇಕಾದವರು. ಕಾನೂನನ್ನು ಗಾಳಿಗೆ ತೂರಿ ನರರಾಕ್ಷಸರಂತೆ ವರ್ತಿಸುವುದು ಸರಿಯೇ? ಯಾವ ಪುರುಷಾರ್ಥಕ್ಕಾಗಿ ನಕಲಿ ಎನ್‌ಕೌಂಟರ್ ಅನ್ನು ಮಾಡುವ ಅನಿವಾರ್ಯತೆ ಇತ್ತು? ಸಮಾಜಕ್ಕೆ ನೀಡುತ್ತಿರುವ ಸಂದೇಶವಾದರೂ ಏನು? ಕ್ಯಾತ್ಸಂದ್ರ ಇನ್ಸ್ಪೆಕ್ಟರ್ ಶ್ರೀಧರ್ ಮಾಡಿದ ನಕಲಿ ಎನ್‌ಕೌಂಟರ್‌ಗೆ ಹಿರಿಯ ಅಧಿಕಾರಿಗಳು ಸಾತ್ ನೀಡಿದ್ದು ಎಷ್ಟರಮಟ್ಟಿಗೆ ಸರಿ? ಎನ್ನುವಂತಹ ಪ್ರಶ್ನೆ ಸಾರ್ವಜನಿಕವಾಗಿ ಚರ್ಚೆಗೀಡಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಇಲಾಖೆ ಅಧಿಕೃತವಾಗಿ ಪಿಸ್ತೂಲು ನೀಡಿರುವುದು ಸಿಕ್ಕಸಿಕ್ಕವರ ಮೇಲೆ ಗುಂಡು ಹಾರಿಸಲೆಂದಲ್ಲ. ರಕ್ಷಣೆಗಾಗಿ ನೀಡಿರುವ ಬಂದೂಕನ್ನು ರಾಕ್ಷಸ ಪ್ರವೃತ್ತಿಗೆ ಬಳಸಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ?

      ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಎನ್‌ಕೌಂಟರ್ ಪ್ರಕರಣವನ್ನ ಹೆಚ್ಚಿನ ತನಿಖೆಗಾಗಿ ಸಿ.ಐ.ಡಿ.ಗೆ ವರ್ಗಾಯಿಸಿದರೆ ಎನ್‌ಕೌಂಟರ್‌ನ ಅಸಲಿಯತ್ತು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ ಎಂದು ಪ್ರಜ್ಞಾವಂತ ಸಮುದಾಯ ಚರ್ಚೆ ಮಾಡುತ್ತಿದ್ದಾರೆ.

(Visited 178 times, 1 visits today)